Lohith Eshwar : ನನಗೆ ಕನ್ನಡದಲ್ಲಿ ಸಂಪೂರ್ಣ ರಾಮಾಯಣ ಹಾಗೂ ಮಹಾಭಾರತವನ್ನು ಓದಬೇಕಾಗಿದೆ. ಆದರೆ ನನಗೆ ಅಚ್ಚ ಕನ್ನಡದಲ್ಲಿ ಇದ್ದು, ಕತೆಯ ರೂಪದಲ್ಲಿ ಇದ್ದರೆ ಅರ್ಥ ಮಾಡಿಕೋಳ್ಳಲು ಅನುಕೂಲವಾಗುತ್ತದೆ. ಆದುದರಿಂದ ತಮಗೆ ತಿಳಿದ ಯಾವುದಾದರೂ ಉತ್ತಮ ರಾಮಾಯಣ ಹಾಗೂ ಮಹಾಭಾರತ ಪುಸ್ತಕ ಗೊತ್ತಿದ್ದರೆ ದಯವಿಟ್ಟು ಸೂಚಿಸಿ. ಧನ್ಯವಾದಗಳು

Suhas KS: ’ಭಾರತ ಸಂಸ್ಕೃತಿ ಪ್ರತಿಷ್ಠಾನ’ದ ಪುಸ್ತಕಗಳು.

ಪುಷ್ಪಾ ಆರ್: ಸಂಪೂರ್ಣ ರಾಮಾಯಣ ಮತ್ತು ಸಂಪೂರ್ಣ ಮಹಾಭಾರತ by ಅನಂತರಾವ್ ಬರೆದಿದ್ದಾರೆ ಅದನ್ನು ಓದಿ. Its available in total Kannada dot com. Jayanagar 4th block. PH 4146 0325

Shrinivas Badiger Gorakhapur press …

Sathish Hegde ರಾಮಾಯಣ ಕನ್ನಡದಲ್ಲಿ ಓದಬೇಕೆಂದರೆ ಚಕ್ಕೋಡಿ ರಾಮಾಯಣ ಓದಿ ಅದರ ಅನುಭವವೇ ಬೆರೆ ಇಲ್ಲವಾದಲ್ಲಿ ಕುವೆಂಪು ಅವರ ವಾಲ್ಮೀಕಿರಾಮಾಯಣ ಓದಿ. ಮಹಾಬಾರತ ಓದುವದಾದರೆ ಕ್ರಷ್ಣ ಶಾಸ್ತ್ರಿಯವರ ’ವಚನ ಭಾರತ’ ಓದಿ.

Shreekant Mishrikoti ವಾಲ್ಮೀಕಿ ರಾಮಾಯಣ ಬಹುತೇಕ ಕಾಂಡಗಳು ಮತ್ತು ಮಹಾಭಾರತದ ಪರ್ವಗಳು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಲ್ಲಿ PDF ರೂಪದಲ್ಲೇ ಇವೆ.

Siddeswarappa Hs ಮೂಲ ‘ವಾಲ್ಮೀಕಿ ರಾಮಾಯಣ’ವನ್ನು ಯಥಾವತ್ತಾಗಿ ಕನ್ನಡದಲ್ಲಿ ಓದಬೇಕೆಂದರೆ ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಸಿ. ಎನ್. ಶ್ರೀನಿವಾಸ ಅಯ್ಯಂಗಾರ್ ಅವರ ಕನ್ನಡ ‘ವಾಲ್ಮೀಕಿ ರಾಮಾಯಣ’ವನ್ನು ಓದಿ.

Rajesha N: ಮೂಲ ರಾಮಾಯಣ ಮಹಾಭಾರತ ಭಾಗವತ ಮತ್ತು ಹರಿವಂಶಗಳು. ಕನ್ನಡ ಲಿಪಿಯಲ್ಲಿ ಮೂಲ ಸಂಸ್ಕೃತ ಶ್ಲೋಕಗಳೊಡನ ಕಥಾ ರೂಪದಲ್ಲಿ ವ್ಯಾಖ್ಯಾನದೊಂದಿಗೆ ಸುಮಾರು ೬೦೦ ಪುಟಗಳ ಸಂಪುಟಗಳು ಅತಿ ಕಡಿಮೆ ಬೆಲೆಗೆ ನೂರಕ್ಕಿಂತ ಕಡಿಮೆ ಬೆಲೆಗೆ / ಸಂಪುಟ ಭಾರತ ದರ್ಶನ ಪ್ರಕಾಶನ  https://www.sapnaonline.com/shop/Author/hn-ranga-swamy

Vinayak Hegde Nadimane ಕುಮಾರವ್ಯಾಸ ನ ಗದುಗಿನ ಭಾರತ ಗದ್ಯ ರೂಪದಲ್ಲಿ ಬಂದಿದೆ. ಓದಬಹುದು..

ಗಿರಿಸಿರಿಶೈ ಮಲ್ಲ ರಾಮಾಯಣ ದರ್ಶನಂ  ಕುವೆಂಪು ಬರೆದದ್ದು.

Raj Shekar ಎ.ಆರ್.ಕೃಷ್ಣಶಾಸ್ತ್ರಿಗಳು ಬರೆದಿರುವ ವಚನಭಾರತ ಅತ್ಶುತ್ತಮ ಎಂದು ನನ್ನ ಭಾವನೆ.

Dayananda Lingegowda: Sirinudi – ಡಾ.ಎಚ್.ರಾಮಚಂದ್ರಸ್ವಾಮಿ- ಮಹಾಭಾರತಕಥಾಸಂಗ್ರಹ – ಪಿಡಿಎಫ್

Advertisements