‘ಕನಕ ಮುಸುಕು’ – ಕೆ.ಎನ್.ಗಣೇಶಯ್ಯ

kanaka musuku.jpg“ಕನಕ ಮುಸುಕು” ಇದು ಡಾ. ಕೆ. ಎನ್. ಗಣೇಶಯ್ಯರವರು ಬರೆದಿರುವ ಮೊದಲ ಕಾದಂಬರಿ. ಹೆಸರೇ ಸೂಚಿಸುವಂತೆ ಇಡೀ ಕಾದಂಬರಿಯಿರುವುದು ಜೈನರ ಭೂಸಿರಿವಲಯ ಅರ್ಥಾತ್ ನಿಧಿಯಹುಡುಕಾಟದಲ್ಲಿ ಬೇರೆಬೇರೆ ಗುಂಪುಗಳು ತೊಡಗುವುದರಲ್ಲಿ. ಬ್ರಹ್ಮಪ್ರಕಾಶ್, ಪೂಜಾ, ವಿನೋದ್ ಮತ್ತು ಡಾ. ರಾವ್ ಇವು ಕಾದಂಬರಿಯಲ್ಲಿ ಬರುವ ಪ್ರಮುಖ ಪಾತ್ರಗಳು. ಇಡೀ ಕಾದಂಬರಿಯಲ್ಲಿ ಎಡಿನ್ಬರೋ, ಕರ್ನಾಟಕದ ಸೋಮನಾಥಪುರ, ಶ್ರವಣಬೆಳಗೊಳ, ಮುಂಬೈಗಳಲ್ಲೇ ನಮ್ಮನ್ನು ಸುತ್ತಿಸುತ್ತದೆ. 220 ಪುಟದ ಈಕಾದಂಬರಿಯನ್ನು ಓದಿ ಮುಗಿಸಿದ ನಂತರವೂ ನಿಧಿ ಸಿಕ್ಕಿತೆ? ಯಾರಿಗೆ ಸಿಕ್ಕಿತು? ಅದು ಅಸಲಿಯಾ? ನಕಲಿಯಾ? ಎನ್ನುವ ಪ್ರಶ್ನೆಗಳು ನಮ್ಮಲ್ಲಿ ಮೂಡುತ್ತವೆ. ಈ ಪ್ರಶ್ನೆಗಳಿಗೆ ಉತ್ತರ ಓದುಗರ ವಿವೇಚನೆಗೆ, ಊಹೆಗೆ ಬಿಟ್ಟಿರುವುದು ಕೂಡ ಗಣೇಶಯ್ಯರವರ ವಿಶೇಷತೆ ಎನಿಸುತ್ತದೆ.

ಜೋಳ ಮೂಲತಃ ಅಮೆರಿಕಾ ಖಂಡದ ಬೆಳೆ, ಮೆಕ್ಸಿಕನ್ನರು ಬೆಳೆಯುತ್ತಿದ್ದ ಬೆಳೆ. ಆದರೆ ಕೊಲಂಬಸ್ ಅಮೇರಿಗಾಕೆ ಹೋಗುವ ಮೊದಲೇ ಭಾರತೀಯರ ಬಳಿ ಮುಸುಕಿನ ಜೋಳವಿತ್ತು. ಸೋಮನಾಥಪುರದ ಶಿಲ್ಪಗಳು ಕೈಯಲ್ಲಿ ಮುಸುಕಿನ ಜೋಳ ಹಿಡಿದಿರುವುದನ್ನು ನೋಡಬಹುದು. ಈ ತರಹದ ಹತ್ತಾರು ಅಂಶಗಳು ಕಾದಂಬರಿಯುದ್ದಕ್ಕೂ ಕಾಣಬಹುದು. ಪ್ರತೀ ವಿಷಯಕ್ಕೂ ಬರಿಯ ಮಾಹಿತಿ ನೀಡದೆ ಅದಕ್ಕೆ ಬೇಕಾದ ಪುರಾವೆಗಳನ್ನು ಪುಟದಂಚಿನಲ್ಲಿ ನೀಡಿರುವುದು ಗಣೇಶಯ್ಯರವರ ಶೈಲಿ.

ಈ ಕಾದಂಬರಿಯನ್ನು ಥ್ರಿಲ್ಲರ್ ಎನ್ನಬಹುದು, ವೈಜ್ಞಾನಿಕ ಕಾದಂಬರಿ ಎನ್ನಬಹುದು, ಐತಿಹಾಸಿಕ ಕಾದಂಬರಿ ಎನ್ನಬಹುದು, ಸಂಶೋಧನಾ ಕಾದಂಬರಿಯೆನ್ನಬಹುದು. ಕಾದಂಬರಿಯಲ್ಲಿ ಬರುವ ಘಟನೆಗಳಲ್ಲಿಯಾವುದು ನೈಜ (ವಾಸ್ತವ), ಯಾವುದು ಕಾಲ್ಪನಿಕ ಎಂದು ಹೇಳುವುದು ನಿಜಕ್ಕೂ ಸವಾಲಿನ ವಿಷಯವೇ ಸರಿ. ವಾಸ್ತವ ಮತ್ತು ಕಾಲ್ಪನಿಕಗಳ ಮಧ್ಯೆ ತುಂಬಾ ತೆಳುವಾದ ತೆರೆಯಿಟ್ಟಿದ್ದಾರೆ ಲೇಖಕರು. ಈ ರೋಚಕ ಕಾದಂಬರಿಯನ್ನು ಓದುವ ಸೌಭಾಗ್ಯ ನಿಮ್ಮದಾಗಲಿ.

Rampura Raghothama

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಕನ್ನಡ, ಗಣೇಶಯ್ಯ, Uncategorized and tagged , , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s