‘ಕಪಿಲಿಪಿಸಾರ’ – ಕೆ.ಎನ್.ಗಣೇಶಯ್ಯ

Kapilipisaara1.jpgವಿಶಿಷ್ಟವಾದ ವಿಷಯಗಳನ್ನು ಆಯ್ದುಕೊಂಡು ಅದನ್ನು ಇತಿಹಾಸ, ವಿಜ್ಞಾನ, ಪುರಾಣದೊಂದಿಗೆ ತಳಕುಹಾಕಿ ಕತೆಯನ್ನು ರೂಪಿಸುವುದು ಗಣೇಶಯ್ಯನವರ ಶೈಲಿ. ಅದೇ ತರಹ “ಕಪಿಲಿಪಿಸಾರ” ಪುರಾಣ ಹಾಗೂ ಪ್ರಸ್ತುತಕ್ಕೆ ಕೊಂಡಿ ಮಾಡಿ ಈ ಕಾದಂಬರಿಯನ್ನು ರಚಿಸಿದ್ದಾರೆ. ಇದರಲ್ಲಿ ಪುರಾಣದ ಜೊತೆಗೆ ವೈದ್ಯಕೀಯಶಾಸ್ತ್ರ ಹಾಗೂ ಸಸ್ಯಶಾಸ್ತ್ರ ಅಷ್ಟೇ ಗಂಭೀರವಾಗಿ ತಮ್ಮ ಪಾಲನ್ನು ಪಡೆದುಕೊಂಡಿವೆ. ರಾಮಾಯಣ ಕಾಲದಲ್ಲಿ ಲಕ್ಷ್ಮಣ ಪ್ರಜ್ಞಾಹೀನನಾಗಿ ಬಿದ್ದಾಗ ಹನುಮಂತ ಪರ್ವತದಿಂದ ಸಂಜೀವಿನಿ ಎನ್ನುವ ಸಸ್ಯಮೂಲಿಕೆಯನ್ನು ತಂದು ಲಕ್ಷ್ಮಣನಿದೆ ಪ್ರಜ್ಞೆಯನ್ನು ಬರಿಸುತ್ತಾನೆ. ಎಂಬ ಪುರಾಣದ ಉಲ್ಲೇಖದಲ್ಲಿರುವ ಈ ಸಂಜೀವಿನಿ ಎನ್ನುವ ಸಸ್ಯಮೂಲಿಕೆಯನ್ನು ಆಧಾರವಾಗಿಟ್ಟುಕೊಂಡು, ಅದನ್ನು ವಶಪಡಿಸಿಕೊಳ್ಳಲು ಅಂತರಾಷ್ಟ್ರೀಯ ಜಾಲ ಒಂದು ಹೇಗೆ ಹೊಂಚು ಹಾಕುತ್ತದೆ, ಅದಕ್ಕೆ ನಮ್ಮ ದೇಶದ ಸಂಶೋದಕರು ಹಾಗೂ ವಿಜ್ಞಾನಿಗಳನ್ನು ಆ ಜಾಲದಲ್ಲಿ ಕೆಡುವುದು ಹಾಗೂ ಅವರು ಅದರಿಂದ ಪಾರಾಗುವ ಪರಿಯನ್ನು ಇಟ್ಟುಕೊಂಡು ಈ ಕಾದಂಬರಿ ಸಾಗುತ್ತದೆ.
ಈ ಜಗತ್ತಿನಲ್ಲಿ ಪೂರ್ಣಸತ್ಯವಾದದ್ದು ಎನ್ನುವುದು ಹುಡುಕುವುದು ಕಷ್ಟಸಾದ್ಯ. ಎಂತಹ ನಿಖರವಾದ ವಿಷಯಗಳನ್ನೂ ತಗೆದುಕೊಂಡರೂ ಅದರಲ್ಲಿ ಮಿತಿಗಳನ್ನು ಹುಡುಕಬಹುದು. ಅಂತಹ ಅನುಮಾನಗಳು ಈ ಕಾದಂಬರಿಯಲ್ಲಿ ಆಪ್ರೀಕನ್ ಬುಡಕಟ್ಟು ಮೂಲದ ಜರವಾ ಜನ ಅಂಡಮಾನ್ ದ್ವೀಪದಲ್ಲಿ ಹಾಗೂ ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಅಶ್ವಿನಿ ಎನ್ನುವ (ವೈದ್ಯಶಾಸ್ತ್ರ ತಿಳಿದಿತ್ತು ಎನ್ನಲಾದ) ಪಂಗಡದವರಿಗೆ ಸಂಜೀವಿನಿ ಸಸ್ಯಮೂಲಿಕೆಯ ಬಗ್ಗೆ ಸಂಬಂಧಕಲ್ಪಿಸಿದಾಗ ಗೊಂದಲವಾದರೂ ಗಣೇಶಯ್ಯನವರೇ ಚಿತಾದಂತ ಕಾದಂಬರಿಯಲ್ಲಿ ಹೇಳಿದಂತೆ “ಕಲ್ಪನೆಯನ್ನು ಸತ್ಯದಿಂದ ಭೇರ್ಪಡಿಸುವ ಕಲೆಯನ್ನು ಓದುಗರು ರಂಜನಾ ಕ್ರಮವಾಗಿ ಪರಿಗಣಿಸಬೇಕು” ಎಂಬ ಮಾತಿನಿಂದ ಅದೊಂದು ರೋಚಕ ಕಥಾವಸ್ತುವನ್ನಾಗಿ ತಗೆದುಕೊಂಡಿದ್ದಾರೆಂದು ಅಭಿಪ್ರಾಯ ಪಡಬಹುದು. ಈ ಕಾದಂಬರಿಯಲ್ಲಿ ರೋಚಕತೆ ಅಷ್ಟೇನೂ ಗಾಢವಾಗಿ ಮೂಡಿಲ್ಲವಾದರೂ ಸರಾಗವಾಗಿ ಕುತುಹಲದಿಂದ ಓದಿಸಿಕೊಂಡು ಹೋಗುತ್ತದೆ.(ಇದು ನಾನು ಸತತವಾಗಿ ಗಣೇಶಯ್ಯನ ನವರ ಮೂರನೇ ಕಾದಂಬರಿಯನ್ನು ಓದುತ್ತಿರುವುದರಿಂದ ರೋಚಕತೆ ಕಮ್ಮಿ ಅನ್ನಿಸಿರಬಹುದು).
ಗಣೇಶಯ್ಯನವರ ಬರಹಗಳನ್ನು ಓದುವುದೆಂದರೆ ಹಲವಾರು ಅಗೋಚರ ವಿಷಯಗಳು ತಿಳಿಯುವುದು ಒಂದುಕಡೆಯಾದರೆ ಅದರ ಜಾಡು ಹಿಡಿದು ಬೇರೆ ಪುಸ್ತಕವನ್ನು ಓದುವುದಕ್ಕೆ ಪ್ರೇರೆಪಿಸುತ್ತದೆ.

 ಶ್ರೀಶೈಲ ಮಗದುಮ್ಮ

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಕನ್ನಡ, ಗಣೇಶಯ್ಯ, Uncategorized and tagged , , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s