‘ಕರಿಸಿರಿಯಾನ’ – ಕೆ.ಎನ್.ಗಣೇಶಯ್ಯ

karisiriyaanaಭಾರತದ ಇತಿಹಾಸದಲ್ಲಿ ಅಷ್ಟೇ ಏಕೆ ವಿಶ್ವ ಇತಿಹಾಸದಲ್ಲಿ ಒಂದು ವಿಶಿಷ್ಟವಾದ ಸಾಮ್ರಾಜ್ಯವೆಂದರೆ ವಿಜಯನಗರ ಸಾಮ್ರಾಜ್ಯ. ಇತಿಹಾಸಕಾರರ ಪ್ರಕಾರ ಗತವೈಭವ ಮೆರೆದ ಜಗತ್ತಿನ ಪ್ರಮುಖ ಸಾಮ್ರಾಜ್ಯದಲ್ಲಿ ರೋಮ್ ಸಾಮ್ರಾಜ್ಯ ಬಿಟ್ಟರೆ ಎರಡನೆಯ ಸಾಮ್ರಾಜ್ಯ ವಿಜಯ ನಗರ. ಮುತ್ತುರತ್ನಗಳನ್ನು ಬೀದಿಯಲ್ಲಿ ಸೇರುಗಳಿಂದ ಅಳೆದು ಮಾರಾಟ ಮಾಡುತ್ತಿದ್ದರೆಂದರೆ ಆ ಸಾಮ್ರಾಜ್ಯದ ಆರ್ಥಿಕ ಭವ್ಯತೆಯ ಬಗ್ಗೆ ನಾವು ಅಂದಾಜಿಸಲೂ ಕಷ್ಟವಾಗುತ್ತದೆ. ಕೃಷ್ಣದೇವರಾಯನ ಕಾಲದ ನಂತರ ಅಚ್ಯುತ, ಸದಾಶಿವರಾಯ ಆಡಳಿತದ ಗದ್ದುಗೆ ಹಿಡಿದರೂ ಕೃಷ್ಣದೇವರಾಯನ ಅಳಿಯ ರಾಮರಾಯ ಪರೋಕ್ಷವಾಗಿ ಆಳಿತ ನಡೆಸುತ್ತಿದ್ದ. ಅವನಿಗೆ ಒಳಗೊಳಗೆ ರಾಜನಾಗಬೇಕೆಂಬ ಹಂಬಲದಿಂದ ವಿಜಯ ನಗರದ ಸಾಮ್ರಾಜ್ಯದ ಸಂಪತ್ತನ್ನು ಗುಪ್ತವಾಗಿ ಬೇರೆ ಕಡೆಯಲ್ಲಿ ಸಂಗ್ರಹಿಸುತ್ತಿದ್ದ. ಇತಿಹಾಸ ಪ್ರಸಿದ್ದ ರಕ್ಕಸತಂಗಡಿ (ತಾಳಿಕೊಟೆ) ಕಾಳಗದಲ್ಲಿ ವಿಜಯ ನಗರ ಸಾಮ್ರಾಜ್ಯ ಸೋಲುತ್ತಿದ್ದಂತೆ ಅಳಿಯ ರಾಮರಾಯನ ತಮ್ಮ ತಿರುಮಲ ಸುಮಾರು 1000 ಆನೆಗಳ ಮುಖಾಂತರ ಸಂಪತ್ತನ್ನು ಆದಿಲ್ ಶಾಹಿಗಳಿಗೆ ಸಿಗದಂತೆ ಬೆರೆಕಡೆಗೆ ಸಾಗಿಸುತ್ತಾನೆ. ಕೃಷ್ಣದೇವರಾಯನ ಆಡಳಿತದ ಸಮಯದಲ್ಲಿ ಸಂಪತ್ತಿನ ಹಲವು ಭಾಗಗಳನ್ನು ತಿರುಪತಿ ದೇವಾಲಯದ ಗುಪ್ತ ಸ್ಥಳದಲ್ಲಿ ಕೃಷ್ಣದೇವರಾಯ ಇರಿಸಿರುತ್ತಾನೆ. ಹೀಗೆ ಈ ಮೂರು ಕಡೆಗಳಲ್ಲಿ ಯಾರಿಗೂ ತಿಳಿಯದಂತೆ ಮಾಯವಾದ ಸಂಪತ್ತು (ನಿಧಿ) ಕಾಲಾನಂತರದಲ್ಲಿ ಎಲ್ಲಿ ಹೋಯಿತು. ಅದನ್ನು ಆಧಾರವಾಗಿಟ್ಟುಕೊಂಡ ಬ್ರಿಟೀಷ್ ಮೂಲದ ಕೆಲವು ವ್ಯಕ್ತಿಗಳು ಭೂಗತ ವ್ಯಕ್ತಿಗಳ ಮೂಲಕ ಅದನ್ನು ಪತ್ತೆಮಾಡಿ ದಕ್ಕಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಅದನ್ನು ಗಮನಿಸಿದ ಪೊಲೀಸರು ಇಬ್ಬರು ಸಂಶೋದಕರ ಸಹಾಯದಿಂದ ಅವರನ್ನು ಪತ್ತೆಮಾಡಿ ವಿಶ್ವಪಾರಂಪರಿಕ ಸ್ಥಳವನ್ನು ಹೇಗೆ ರಕ್ಷಿಸುತ್ತಾರೆ ಎಂಬುದರ ಕಥಾವಸ್ತುವನ್ನು ಇಟ್ಟುಕೊಂಡು ಬರೆದ ಕಾದಂಬರಿ “ಕರಿಸಿರಿಯಾನ”.

ಕಾದಂಬರಿಯಲ್ಲಿ ಬರುವ ಇಬ್ಬರು ಸಂಶೋದಕರು ನಮಗೆ ಇಡೀ ವಿಜಯನಗರ ಸಾಮ್ರಾಜ್ಯ ಹಾಗೂ ಈಗಿನ ಹಂಪಿಯನ್ನು ನಮ್ಮ ಕಣ್ಣಮುಂದೆ ತರುತ್ತಾರೆ. ಜೊತೆಗೆ ಕುತುಹಲ ಕೆರಳಿಸುವ ಸನ್ನಿವೇಶಗಳು, ಐತಿಹಾಸಿಕ ಘಟನೆಗಳು, ಹಾಗೂ ಕಥೆ ಸಾಗುವ ರೀತಿ ರೋಚಕವಾಗಿ ಮೂಡಿ ಬಂದಿವೆ.

ಕುತೂಹಲವಿರುವ ಓದುಗರು ಲೇಖಕರ ಸಾಮಾನ್ಯ ಅಭಿಪ್ರಾದಂತೆ ಈ ಕಾದಂಬರಿಯಲ್ಲೂ ಕಲ್ಪನೆಯನ್ನು ಸತ್ಯದಿಂದ ಬೆರ್ಪಡಿಸುವ ಕೆಲಸವನ್ನು ಮಾಡಬೇಕಾಗುತ್ತದೆ. ಗಣೇಶಯ್ಯನವರ ಇತ್ತಿಚೆಗೆ ಓದಿದ ಎಲ್ಲಾ ಕಾದಂಬರಿಗಳಲ್ಲಿ ಈ “ಕರಿಸಿರಿಯಾನ” ತುಂಬಾ ಹಿಡಿಸಿತು ಹಾಗೂ ಶ್ರದ್ಧೆಯಿಂದ ಆಸಕ್ತಿಯಿಂದ ಓದುವಂತೆ ಮಾಡಿತು. ಹಾಗೂ ಈ ಕಾದಂಬರಿ ಬರೆಯಲು ಲೇಖಕರ ಅದ್ಯಯನ, ತಿರುಗಾಟ ಮೆಚ್ಚಲೇ ಬೇಕಾದುದು.

-ಶ್ರೀಶೈಲ ಮಗದುಮ್ಮ

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಕನ್ನಡ, ಗಣೇಶಯ್ಯ, Uncategorized and tagged , , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s