ಸಮಾಜ ಎದುರಿಗೆ ಒಂದು ಹೆಣ್ಣಿನ ಮನಸ್ಸಿನ ಭಾವನೆಗಳ ಹೋರಾಟವೇ ಶರಪಂಜರ ಕಾದಂಬರಿ.
ಸತೀಶನ ಅತೀ ಪ್ರೀತಿ, ಮುದ್ದಾದ ಸಂಸಾರ ಯಾವುದರ ಕೊರತೆ ಇಲ್ಲದ ಕಾವೇರಿಯ ಜೀವನದಲ್ಲಿ ಹಿಸ್ಟೀರಿಯ ಕಾಯಿಲೆ ಅದೆಲ್ಲಿಂದ ವಕ್ಕರಿಸಿತೋ…???
ಸಂಸಾರ ಛಿದ್ರ ಛಿದ್ರವಾಗಿದ್ದಂತು ನಿಜ.
ಎಲ್ಲಾ ಕಾಯಿಲೆಯ ಹಾಗೆಯೇ ಈ ಮನೋರೋಗ, ಇದನ್ನು ಸರಿಪಡಿಸಬಹುದು ಎಂದು ಹೇಳುವುದು ವೈದ್ಯರು ಬಿಟ್ಟರೆ ಬೇರೆ ಯಾರು ಕೂಡ ಹೇಳುವುದಿಲ್ಲ. ಹುಚ್ಚು ಬರುತ್ತದೆ ಹೋಗುವುದಿಲ್ಲ ಎಂದೇ ಸಮಾಜದ ಅಭಿಪ್ರಾಯ.
ಕಾವೇರಿ ಮೊದಲಿನ ಹಾಗೆ ಸರಿ ಹೋಗಿದ್ದರೂ ಅವಳನ್ನು ನಂಬುವವರು ಯಾರು ಇಲ್ಲವಾದರು. ಯಾರೇಕೇ ಸ್ವತಃ ತನ್ನ ಗಂಡ ಸತೀಶನೇ ನಂಬದಿರುವಾಗ ಬೇರೆಯವರ ಮಾತೇಕೆ?.
ಹುಚ್ಚು ಹಿಡಿದದ್ದು ಕಾವೇರಿಗೆ ಮಾತ್ರ ಆದರೆ ಅದು ವಂಶವಾಹಿನಿಯಾಗಿ ಬರುವುದೆಂದು ತಿಳಿದು ಕಾವೇರಿಯ ತಂಗಿ ಚಂದ್ರಿಯ ಮದುವೆ ನಿಲ್ಲುತ್ತದೆ. ಪಾಪ ಚಂದ್ರಿ ಮಾಡಿದ ತಪ್ಪೇನು???
ಕಾವೇರಿಗೆ ಹುಚ್ಚು ಬಿಟ್ಟು ಮೊದಲಿನ ಹಾಗೆ ಆಗೋಕೆ, ಈ ಹುಚ್ಚು ಹಿಡಿದ ಸಮಾಜ ಅವಳನ್ನು ಬಿಡಲಿಲ್ಲ. ಅವಳು ಮತ್ತೇ ಹುಚ್ಚಿಯಾಗಿ ಆಸ್ಪತ್ರೆ ಸೇರುವಂತಾಯಿತು.
ಕೊನೆಗೂ ಅರ್ಥವಾಗದೆ ಇದ್ದದ್ದು “veni vedi veci” , “ನಾ ಬಂದೆ, ನಾ ನೋಡಿದೆ,ನಾ ಗೆದ್ದೇ”……

ನಾನು ಈ ಕಾದಂಬರಿ ಓದುವ ಮುನ್ನ ಶರಪಂಜರ ಚಲನಚಿತ್ರವಾಗಿದೆ ಅಂತ ಗೊತ್ತಿತ್ತು ಇದೇ ಕಾರಣ ಇರಬೇಕು ನನ್ನ ಕಲ್ಪನೆಯಲ್ಲಿ ಕಲ್ಪನಾಳೇ ಕಾವೇರಿ, ಈ ಪಾತ್ರದಲ್ಲಿ ಬೇರೆ ಯಾರನ್ನೂ ಸಹ ಊಹಿಸಲು ಅಸಾಧ್ಯವೆನಿಸಿತು ನನಗೆ.
ಚಲನಚಿತ್ರದಲ್ಲಿ ಎಲ್ಲವೂ ಕಾದಂಬರಿಯ ಹಾಗೆಯೇ ಇರಲಾರದು ಅಲ್ಲಲ್ಲಿ ಸ್ವಲ್ಪ ಬದಲಾವಣೆಯನ್ನು ಕಾಣಬಹುದು.
ಮಿನುಗು ತಾರೆ ಕಲ್ಪನ ಅವರ ನಟನೆ ಅದ್ಭುತವಾಗಿದೆ ಚಲನಚಿತ್ರದಲ್ಲಿ.
ಕಾದಂಬರಿಯ ಕರ್ತೃ ತ್ರಿವೇಣಿಯವರಿಗೆ 🙏🙏🙏

Arun Kotiger

Advertisements