ಹತ್ತಿರ ಹತ್ತಿರ 500 ಪುಟಗಳ ಕಾದಂಬರಿ.ಹೆಸರೇ ಹೇಳೋ ಹಾಗೆ ಸಾರಸ್ವತ ಸಮುದಾಯದ ಏಳು ಬೀಳಿನ ಕಥೆ.ಈ ಕಥೆ ಮೊದಲು ಶುರುವಾಗೋದು ನರಸಪ್ಪಯ್ಯನವರಿಂದ ನಂತರ 4-5 ತಲೆಮಾರುಗಳವರೆಗೆ ಆ ಸಮುದಾಯ ಎದುರಿಸಿದ ಸ್ಥಿತ್ಯಂತರಗಳನ್ನ ವಿವರಿಸುತ್ತಾ ಹೋಗಿದ್ದಾರೆ ಲೇಖಕರು.ಕಾದಂಬರಿ ಶುರುವಾಗೋದೂ ಕೂಡಾ ಮೊದಲು ಪೋರ್ಚುಗೀಸರು ಭಾರತಕ್ಕೆ ಕಾಲಿಡೋ ಸಮಯದಿಂದ.ಸಾರಸ್ವತರಲ್ಲೇ ಮುಖ್ಯಸ್ಥರಾದ ನರಸಪ್ಪಯ್ಯನವರ ಗೋವಾದ ವರಣೆಯಲ್ಲಿ ಶುರುವಾಗೋ ಕಥೆ ಮುಗಿಯೋದು ಬೆಳ್ಳಂಬೀಡಿನಲ್ಲಿ.ಭಾರತಕ್ಕೆ ಪೋರ್ಚುಗೀಸರ ಆಗಮನ,ಗೋವೆಯನ್ನು ಗೆದ್ದು ವಸಾಹತನ್ನಾಗಿ ಮಾಡಿಕೊಂಡಾಗ ಸಹಜವಾಗೇ ಶುರುವಾಗೋ ಮತಾಂತರಗಳು ದೇವಸ್ಥಾನಗಳ ಧ್ವಂಸ ವ್ಯಾಪಕವಾದಾಗ ನರಸಪ್ಪಯ್ಯನವರ ಮೊಮ್ಮಗ ವಿಠ್ಠು ಪೈ ನಾಗ್ಡೋ ಬೇತಾಳನ ಆಜ್ಞೆಯ ಮೇರೆಗೆ 5-6 ಕುಟುಂಬಗಳೊಂದಿಗೆ ರಾತ್ರೋ ರಾತ್ರಿ ಸಂಸಾರ ಸಮೇತ ವರಣೆಯನ್ನು ಖಾಲಿ ಮಾಡುತ್ತಾನೆ ಅಂದಿನ ಅವರ ಮನಸ್ಥಿತಿ ಒಮ್ಮಗೇ ಇದ್ದುದ್ದೆಲ್ಲವನ್ನೂ ಕಳೆದುಕೊಂಡು ಬೀದಿಗೆ ಬಂದಾಗಿನ ಅವರ ಪರಿಸ್ಥಿತಿ ಮರುಕ ಹುಟ್ಟಿಸುತ್ತದೆ ನಂತರ ಪೋರ್ಚುಗೀಸರ ರಾಜ್ಯದಿಂದ ಆದಷ್ಟು ದೂರ ಹೋಗಬೇಕೆಂದು ಕೊಚ್ಚಿಗೆ ಹೊರಟು ಮಧ್ಯೆ ನಾನಾ ಕಾರಣಗಳಿಂದ ಒಂದೊಂದು ಕುಟುಂಬ ಒಂದೊಂದು ಊರಿನಲ್ಲಿ ನಿಲ್ಲುತ್ತಾರೆ ವಿಠ್ಠು ಪೈನ ಕುಟುಂಬ ಕುಂಬಳೆಯಲ್ಲಿ ನೆಲೆಯೂರುತ್ತಾರೆ ಹೊಸದಾಗಿ ವ್ಯಾಪಾರ ಶುರುಮಾಡಿ ತಮ್ಮ ನೆಲೆಯನ್ನು ಗಟ್ಟಿಯಾಗಿಸಿಕೊಳ್ಳುತ್ತಾ ಹೋಗುತ್ತಾರೆ ಮುಂದೆ ಕುಟುಂಬ ಬೆಳೆಯುತಾ ಮತ್ತು ಅಳಿಯುತ್ತಾ ಸಾಗುತ್ತದೆ ಮಲೆನಾಡಿನ ಮತ್ತು ಗೋವಾದ ಕರಾವಳಿಯ ಚಿತ್ರಣ ಸೊಗಸಾಗಿದೆ. ಕನ್ನಡದ ವಿಶಿಷ್ಟ ಮತ್ತು ಅದ್ಬುತ ಕಾದಂಬರಿಗಳಲ್ಲಿ ಇದೂ ಒಂದು.

Rathna Sindhu

Kiran Surya ಗೋಪಾಲಕೃಷ್ಣ ಪೈ ಗಳ ಮೊದಲ ಕೃತಿ. ಬಹಳ ಅರ್ಹವಾಗಿಯೇ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತವಾಯಿತು.

Anant Kamat ತುಂಬಾ ಅದ್ಭುತ ಕಾದಂಬರಿ. ಕಾದಂಬರಿ ಓದಿ ಮುಗಿದ ನಂತರವೂ ನಾಗಡೋ ಬೇತಾಳ ಕಾಡುತ್ತಿರುತ್ತಾನೆ. ಅವನ ಬರುವಿಕೆಯನ್ನು ಮನಸ್ಸು ನಂಬುತ್ತದೆ ಮತ್ತು ಬಯಸುತ್ತದೆ. ಪೋರ್ಚುಗೀಸರ ದಬ್ಬಾಳಿಕೆಯಿಂದ ತತ್ತರಿಸಿದ ಒಂದು ಸಮುದಾಯದ ಪೂರ್ಣ ಚಿತ್ರಣವನ್ನು ಕಟ್ಟಿಕೊಟ್ಟ ಕಾದಂಬರಿ ಇದು

Anant Kamat ಸಾರಸ್ವತ ರಂತೂ ಓದಲೇ ಬೇಕಾದ ಕಾದಂಬರಿ. ಓದುವಾಗ ಮನಸ್ಸು ಗೋವೆಯತ್ತ ಸೆಳೆಯುತ್ತದೆ. ಹಿಂದೆ ನಮ್ಮ ಸಾರಸ್ವತರ ಕರ್ಮಭೂಮಿಯಾಗಿದ್ದ ಮಠಗ್ರಾಮ ಈಗ ಮಡಗಾಂವ್ ಆಗಿದ್ದು ಯಾಕೋ ಬೇಜಾರೆನಿಸುತ್ತದೆ

DrKrishnamurthy Somashekhar ಎರಡು ಬಾರಿ ಓದಿದ್ದೇನೆ. ಗೋವೆಯಲ್ಲಿ ಪೋರ್ಚುಗೀಸರ ದೌರ್ಜನ್ಯ, ದುರಾಡಳಿತದ ಬಗ್ಗೆ ತಿಳಿದು ಬಹಳ ಸಂಕಟಪಟ್ಟೆ. ಇಂದು ಸಾಮಾಜಿಕವಾಗಿ ಮುಂಚೂಣಿಯಲ್ಲಿರುವ ಸಾರಸ್ವತರು ಶತಕಗಳ ಹಿಂದೆ ಪಟ್ಟ ಕಷ್ಟ ಹೇಳತೀರದು. ನೂರಾರು ಮೈಲಿ ಗುಳೆ ಹೊರಟ ಅವರ ಆ ಕಷ್ಟ ಕಾರ್ಪಣ್ಯವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಮತ್ತೆ ಓದಬೇಕೆನ್ನಿಸುವ ಪುಸ್ತಕ. ಆದರೆ ಓದಿದ ಮೇಲೆ ಕಡು ವಿಷಾದ.

ಕಲ್ಯಾಣ ದಾಸಪ್ಪ ನಾಗ್ಡೊಬೇತಾಳನ ಸನ್ನಿವೇಶಗಳು ಮರೆತಿಲ್ಲ ಇದೆಲ್ಲಕ್ಕೂ ಮಿಗಿಲಾಗಿ ಇತಿಹಾಸದ ಕೆಲವು ಸೂಕ್ಷ್ಮ ದರ್ಶನ ಹೋರಾಟಮಯ ಬದುಕಿನ ಚಿತ್ರಣವು ತುಂಬಾ ಅರ್ಥಗರ್ಭಿತವಾಗಿದೆ

 

Advertisements