‘ಎಂದೆಂದೂ ಬಾಡದ ಮಲ್ಲಿಗೆ’ – ರೋಹಿತ್ ಚಕ್ರತೀರ್ಥ

mallige.jpg

“ಎಂದೆಂದೂ ಬಾಡದ ಮಲ್ಲಿಗೆ” ಇದು ಲೇಖಕ, ಅಂಕಣಕಾರ ರೋಹಿತ್ ಚಕ್ರತೀರ್ಥರವರು ಬರೆದಿರುವ ಬಿಡಿಬಿಡಿ ಬರಹಗಳ ಸಂಕಲನ. ಈ ಪುಸ್ತಕದಲ್ಲಿ ಲೇಖಕರು ಕನ್ನಡದ ಕವಿರತ್ನ ಗಳಾಗಿ ದ.ರಾ.ಬೇಂದ್ರೆ, ಕೆ.ಎಸ್. ನರಸಿಂಹಸ್ವಾಮಿ, ಗೋಪಾಲಕೃಷ್ಣ ಅಡಿಗ, ನಿಸಾರ್ ಅಹ್ಮದ್, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಶಿವರಾಮಕಾರಂತ, ಸುಬ್ರಾಯ ಚೊಕ್ಕಾಡಿ, ತ.ಸು. ಶಾಮರಾಯರು ಮುಂತಾದವರ ಬಗ್ಗೆ ಬರೆದಿದ್ದಾರೆ. ಹಾಗೆಯೇ ನಮ್ಮ ತಲೆಮಾರಿನವರು ನೋಡಿರದ, ಓದಿರದ ಪತ್ರಕರ್ತರಾದ ಪಾ. ವೆಂ. ಆಚಾರ್ಯರೊಂದಿಗಿನ ಕಾಲ್ಪನಿಕ ಸಂದರ್ಶನವೂ ಇದೆ. ಈ ಪುಸ್ತಕದಲ್ಲಿ ಷೇಕ್ಸ್‌ಪಿಯರನ ಕುರಿತಾದ ಲೇಖನವಿದೆ. ಷೇಕ್ಸ್‌ಪಿಯರ್‌ ತನ್ನ ಜೀವಿತಕಾಲದಲ್ಲಿ ಏನೆಲ್ಲಾ ಬರೆದರು? ಅದು ಯಾಕೆ ನಮಗೆ ಮುಖ್ಯವೆನ್ನಿಸುತ್ತದೆ? ಷೇಕ್ಸ್‌ಪಿಯರನನ್ನು ಕನ್ನಡಕ್ಕೆ ಯಾವ್ಯಾವ ತಂದಿದ್ದಾರೆ ಮತ್ತು ಅದರಲ್ಲಿ ಗಟ್ಟಿಕಾಳು ಯಾವುದು? ಜೊಳ್ಳುಯಾವುದು ಎಂಬುದನ್ನು ಮನೋಜ್ಞವಾಗಿ ಪ್ರಸ್ತಾಪಿಸಿದ್ದಾರೆ. ಇನ್ನೂಮುಂದುವರೆದು ಹಾಲಿವುಡ್ಡಿನ ಅನಭಿಷಕ್ತ ಹಾಸ್ಯದೊರೆ “ಗ್ರಾಚೋ” ಬಗ್ಗೆಯೂ ಲೇಖನವಿದೆ.

ನಮ್ಮ ನಡುವೆಯೇ ಇದ್ದ ಅದ್ಭುತವಾದ ವಿಜ್ಞಾನ / ಗಣಿತಲೇಖಕರಾದ ಜಿ. ಟಿ. ನಾರಾಯಣರಾಯರ ಬಗೆಗಿನ ಲೇಖನನಮನ್ನು ಅಚ್ಚರಿ ಪಡಿಸುತ್ತದೆ. ಶಿವರಾಮ ಕಾರಂತರ ವಿಜ್ಞಾನಬರಹಗಳನ್ನೇ ಅರೆಬೆಂದ ಕಾಳುಗಳು ಎಂದು ವಿಮರ್ಶಿಸಿದವರು ಜಿ. ಟಿ. ನಾರಾಯಣರಾಯರು. ಇನ್ನೂ ಮುಂದುವರೆದು ನಿಘಂಟುತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯನವರ ಕುರಿತಾದ ಲೇಖನದಲ್ಲಿ ಜೀವಿಯವರು ವಿಜ್ಞಾನ ಲೇಖಕರಾಗಿದ್ದರು ಮತ್ತು ಎಷ್ಟೋ ಲೇಖಕರನ್ನು ವಿಜ್ಞಾನ ಬರಹಗಳನ್ನು ಬರೆಯಲುಪ್ರೋತ್ಸಾಹಿಸುತ್ತಿದ್ದರು ಎನ್ನುವ ಮಾಹಿತಿ ನೀಡುತ್ತಾರೆ.

ವಿಲಿಯಂ ಬಕ್ ಎಂಬ ಅಮೆರಿಕೆಯ ಲೇಖಕ ತನ್ನ 25ನೆಯ ವಯಸ್ಸಿಗೆ ಭಾರತಕ್ಕೆ ಬಂದು ಭಾರತದ ಮಹಾಕಾವ್ಯಗಳಾದ ಮಹಾಭಾರತ ಮತ್ತು ರಾಮಾಯಣಗಳನ್ನು ಸಂಸ್ಕೃತದಿಂದ ಇಂಗ್ಲಿಷಿಗೆ ಅನುವಾದ ಮಾಡಿದ ಕುರಿತಾದ ಲೇಖನ ಓದಿದಾಗ ನಿಜಕ್ಕೂ ರೋಮಾಂಚನವಾಗುತ್ತದೆ.

ಅಮೆರಿಕದಿಂದ ಬಂದ ಜಾನ್ ಹಿಗ್ಗಿನ್ಸ್, ಭಾರತದ ಸಂಗೀತಕ್ಕೆ ಮನಸೋತು ಜಾನ್ ಹಿಗ್ಗಿನ್ಸ್ ಭಾಗವತರ್ ಆದ ಲೇಖನವನ್ನು ನಾವು ಓದಲೇಬೇಕು. ಇನ್ನುಳಿದಂತೆ ಪುಸ್ತಕದಲ್ಲಿ ಅನಂತಮೂರ್ತಿಯವರ ಒಳನೋಟವನ್ನು ತಿಳಿಸುವ ಒಂದು ಸಂದರ್ಶನವಿದೆ. ಅನೇಕ ಲೇಖಕರನ್ನು ಬೆಳೆಸಿದ ಪತ್ರಕರ್ತ ಸಂತೋಷ್ ಕುಮಾರ್ ಗುಲ್ವಾಡಿಯವರ ಕುರಿತಾದ ಬರಹವಿದೆ. ನಮ್ಮೆಲ್ಲರ ಬಾಲ್ಯದ ಸಂಗಾತಿ ಚಂದಮಾಮ ಪುಸ್ತಕದ ಬಗ್ಗೆ ಲೇಖನ, ಸಂದೇಶ್ ಪತ್ರಿಕೆಯ ಕುರಿತು ಲೇಖನ ತುಂಬಾ ಚೆನ್ನಾಗಿದೆ. “ಸೆಕೆಂಡ್ ಹ್ಯಾಂಡ್ ಪುಸ್ತಕದಲ್ಲಿ ಸಿಗಬಹುದೊಂದು ನವಿಲುಗರಿ” ಈ ಲೇಖನ ಓದುತ್ತಿದ್ದಂತೆ ನಾವು ನಮ್ಮ ಗತಕಾಲಕ್ಕೆ ಜಾರಿಹೋಗುತ್ತೇವೆ.

ಈ ಪುಸ್ತಕದಲ್ಲಿ ನನಗೆ ತುಂಬಾ ಹಿಡಿಸಿದ ಸಂಗತಿಗಳೆಂದರೆ, ಲೇಖಕರು ಕವಿಗಳ ಬಗ್ಗೆ ನೀಡುವ ಅತಿ ಅಪರೂಪದ ಮಾಹಿತಿಗಳು. ನಮ್ಮ ಸಾಹಿತಿಗಳ ಕುರಿತಾದ ಸಾಹಿತ್ಯಿಕ ಮುಖವನ್ನು ನಾವೆಲ್ಲರೂ ಕಂಡೇ ಇರುತ್ತೇವೆ. ಆದರೆ ಅವರುಗಳು ವೈಯಕ್ತಿಕವಾಗಿ ಹೇಗಿದ್ದರು, ಜಗತ್ತಿನ ಕುರಿತಾದ ಅವರ ದೃಷ್ಟಿಕೋನ ಹೇಗಿತ್ತು ಎನ್ನುವ ಮಾಹಿತಿಗಳು ನಮ್ಮನ್ನು ಕುರ್ಚಿಯ ತುದಿಗೆ ತಂದು ಕೂರಿಸುತ್ತವೆ.

Rampura Raghothama

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಕನ್ನಡ, ರೋಹಿತ್ ಚಕ್ರತೀರ್ಥ, Uncategorized and tagged , , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s