‘ಪಂಚವಟಿ’ – ಸಾಯಿಸುತೆ

panchavati.jpg

ಸಾಯಿಸುತೆಯವರ “ಪಂಚವಟಿ” ಅದ್ಭುತವಾದ ಕಾದಂಬರಿ. ಕೆಲವು ಕಾದಂಬರಿಗಳೆ ಹಾಗೆ, ಕೆಲವು ಮಾತಿನಲ್ಲಿ ಹೇಳಿ ಮುಗಿಸುವಂತದ್ದಲ್ಲ, ಬರೀ ಮೌನದಲ್ಲಿ ಎಲ್ಲವನ್ನೂ ಹೇಳಿಬಿಡಬಹುದು ಆದರೆ ಅದು ಹೇಗೆ ಸಾಧ್ಯ? ಕೆಲವು ಕಾದಂಬರಿಗಳನ್ನು ಓದುವಾಗ ಅದು ಸುಖಾಂತ್ಯವಾದರೆ ನಲಿಯುತ್ತೆವೆ ದುಃಖಾಂತ್ಯವಾದರೆ ಮುದುಡುತ್ತೇವೆ. ವಾಸ್ತವ ಪ್ರಜ್ಞೆಗೆ ಮರುಳಿದಾಗ “ಸಿಲ್ಲಿ” ಎನಿಸಬಹುದು, ಆದರೆ ಇಂತಹ ಘಟನೆಗಳು ಈ ವಿಶಾಲವಾದ ಜಗತ್ತಿನಲ್ಲಿ, ಭಾಷೆ, ಜಾತಿ, ಪ್ರದೇಶವೆನ್ನದೇ ನಡೆದಿರಬಹುದು, ಭಾವನಾಜೀವಿಗಳಾದ ಮನುಷ್ಯರು ಬೇಗ ಅಂತದಕ್ಕೆ ಸ್ಪಂದಿಸುತ್ತಾರೆ.

“ದಕ್ಷ, ಪ್ರಾಮಾಣಿಕ ಅಧಿಕಾರಿಯಾದ ನರೋನ, ರಾಜಕೀಯ ಒಳಸಂಚಿನಿಂದ ಮಕ್ಕಳ ಎದುರಿಗೆ ಛಿದ್ರ ಛಿದ್ರವಾದಾಗ, ಕೋಮಕ್ಕೊದ ಮೂವರು ಮಕ್ಕಳಲ್ಲಿ ಮನೀಲಾ ಮಾತ್ರ ಉಳಿಯುತ್ತಾಳೆ, ಅವಳ ಬದುಕು ಸಾವಿನ ನೆರಳಲ್ಲಿದ್ದರೂ ಕಾಲೋನಿಯ ಜನರೊಂದಿಗೆ ಬೆರೆತು ಹೋಗಿರುತ್ತಾಳೆ, ಕಾಲೋನಿಯ ಪಂಚವಟಿ ಎಂಬ ಬಂಗಲೆಯನ್ನು ನೋಡಿ ಅದರ ಹೆಸರಿಗೆ, ಸೊಬಗಿಗೆ ಮೖೆ ಮರೆಯುತ್ತಾಳೆ, ಆದರೆ ಬಂಗ್ಲೆಯ ಮಾಲೀಕ ಶಮಂತ್ ಜನರ ಸಹವಾಸದಿಂದ ದೂರ ಉಳಿದು ಪಕ್ಷಿ,ಪರಿಸರದ ಬಗ್ಗೆ ಪುಸ್ತಕಗಳನ್ನು ಬರೆದು ಖ್ಯಾತಿ ಪಡೆದಿರುತ್ತಾನೆ,ಪಂಚವಟಿಗೆ ಹೊರಗಿನವರ ಪ್ರವೇಶ ನಿಷಿದ್ದ. ಮನೀಲಾಳ ತುಂಟತನ, ಧೖೆರ್ಯದಿಂದಾಗಿ ಕಸಿವಿಸಿಗೊಂಡರು ಅವರಲ್ಲಿ ಆತ್ಮೀಯತೆ ಬೆಳೆದು, ಅವಳ ಹಿಂದಿನ ದುರಂತ ಘಟನೆ, ಕೆಲವೇ ದಿನಗಳ ಅವಳ ಬದುಕು ತಿಳಿದು ಪೂರ್ತಿ ಕರಗುತ್ತಾನೆ, ಅವಳಲ್ಲಿ ಆಸೆ, ಕನಸುಗಳನ್ನು ಮೂಡಿಸುತ್ತಾನೆ, ಆದರೆ ಕೊನೆಗೂ ಮನೀಲಾ ತನ್ನ ಬದುಕು ಅಂತ್ಯಗೊಳಿಸುತ್ತಾಳೆ, ಶಮಂತನಿಗೆ ಅವಳು ಬರೆದ ಪತ್ರದ ಸಾರವು ಓದುವ ಓದುಗನಲ್ಲಿ ಕಂಬನಿ ಮಿಡಿಯುವಂತೆ ಮಾಡುತ್ತದೆ. ಇದು ಪಂಚವಟಿಯ ಕಥಾವಸ್ತು..ಇನ್ನೂ ಸಾಯಿಸುತೆಯವರ ನವಿರಾದ ನಿರೂಪಣೆಗೆ ಅವರಿಗೆ ಅವರೆ ಸಾಟಿ.”

-Kavitha Bhat

 

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಕನ್ನಡ, Uncategorized and tagged , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s