reshme rumalu.jpg

ಈ ಕೃತಿ ನನಗೆ ಬಹಳ ವಿಶಿಷ್ಟ ಎನಿಸಿತು. ನಮ್ಮ ಭಾರತ , ಎಷ್ಟೋ ಬಗೆಯ ಜನರು ಕೂಡಿರುವಂತಹ ಒಂದು ಅದ್ಭುತ ದೇಶ. ನಮ್ಮ ನಡುವೆ ಚೆನ್ನಾಗಿ ಮಾತಾಡಿಕೊಂಡು ಇದ್ದವನು ನಾಳೆ ಬೆಳಿಗ್ಗೆ ಏಳುವುದರೊಳಗಾಗಿ 10000 ಹತ್ಯೆಗಳನ್ನು ಮಾಡಿದ್ದಾನೆ ಎಂದರೆ ನಮ್ಮ ನಿಮ್ಮ ಮನಸ್ಥಿತಿ ಏನಾಗಬೇಡ!? ಮತ್ತು ಆ ವ್ಯಕ್ತಿ ತನ್ನ ತಪ್ಪುಗಳನ್ನು ಒಪ್ಪಿಕೊಂಡು ತಾನೊಬ್ಬನೇ ಅಲ್ಲ. ತನ್ನದೇ ಒಂದು ಪಂಗಡವಿದೆ . ಎಲ್ಲರ ಕೆಲಸವೂ ಹತ್ಯೆ ಮಾಡಿ, ಲೂಟಿ ಮಾಡುವುದು ಎಂದರೆ!? ಇಂಥದೇ ವಿಸ್ಮಯ ಆಗಿನ ಬ್ರಿಟಿಷ್ ಅಧಿಕಾರಿಗಳಿಗೆ ಆಗಿತ್ತು , ಈ ಕಥೆಯ ನಾಯಕನನ್ನು ಹಿಡಿದಾಗ. ನಿಜಕ್ಕೂ ಈತ ಹೇಳುವುದು ನಿಜವಾ? ಅಥವಾ ಬೊಗಳೆ ಬಿಡುತಿದ್ದಾನೋ ಎನಿಸಿತ್ತು. ಈ ಕಥೆ ಒಬ್ಬ ಕುಖ್ಯಾತ ದರೋಡೆಕೋರನದಾದರೂ , ನಾವು ಗಮನಿಸಬೇಕಾದದ್ದು ಏನೆಂದರೆ ಆ ಕಾಲದ ಭಾರತದ ಜನರ ಮುಗ್ಧತೆ , ವ್ಯಾಪಾರಿಗಳ ವೈಭವ. ಮೂಢನಂಬಿಕೆಗಳು , ಕಳ್ಳರಾದರೂ ಹೆಣ್ಣುಮಕ್ಕಳಿಗೆ ಅವರು ಕೊಡುತ್ತಿದ್ದ ಗೌರವ , ಹತ್ಯೆಯ ಪಾಪ ಪ್ರಜ್ಞೆ , ಕೊನೆಗೆ ಅವಸಾನ . ಹೀಗೆ ಕುತೂಹಲಕಾರಿಯಾಗಿ ಸಾಗುತ್ತದೆ. ಇದು ಥಗ್(thugs) ಅಥವಾ ಥಗ್ಗರು ಎನ್ನುವ ಪಂಗಡದ ಕಥೆ. ಶ್ರೀಯುತ ರವಿ ಬೆಳಗೆರೆಯವರು ಅನುವಾದ ಮಾಡಿದ್ದಾರೆ. ಅತ್ಯಂತ ಕುತೂಹಲಕಾರಿ ಪುಸ್ತಕ.

-Ajey Dinakar

 

Girish Venkatasubbarao ಶಂಕರ ನಾರಾಯಣ್ ಅನ್ನುವವರು Confession of a thug ಅನ್ನು ಮೊದಲು ಕನ್ನಡಕ್ಕೆ ಅನುವಾದಿಸಿದರು (ಠಕ್ಕನೊಬ್ಬನ ಆತ್ಮ ಚರಿತ್ರೆ )

Girish Venkatasubbarao ಮೂಲ ಕೃತಿ ಆಂಗ್ಲ ಅಧಿಕಾರಿ ಫಿಲಿಪ್ ಮೆಂಡೋಜ್ ಟೇಲರ್ (ಆತನೇ ಥಗ್ಗನನ್ನು ಸಂದರ್ಶಿಸಿ ಬರೆದದ್ದು)

Manjunath Acharya ಹಾಯ್ ಬೆಂಗಳೂರ್ ನಲ್ಲಿ ಧಾರವಾಹಿಯಾಗಿ ಪ್ರಕಟವಾಗಿತ್ತು.

Rampura Raghothama “ರೇಷ್ಮೆರುಮಾಲು” ಒಂದು ರೋಚಕವಾದ ಕಾದಂಬರಿ. ಇಡೀ ಭಾರತದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಥಗ್ಗರ ಬೇರೆ ಬೇರೆ ತಂಡವಿತ್ತು. ವರ್ಷದ ಎಲ್ಲಾ ಕಾಲದಲ್ಲೂ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕುವ ಇವರು, ಒಮ್ಮೆ ಯಾತ್ರೆ ಹೊರಟರೆಂದರೆ ಎಷ್ಟು ಹೆಣಗಳು ಉರುಳುತ್ತವೋ ಖುದ್ದು ಅವರಿಗೂ ಗೊತ್ತಿರುವುದಿಲ್ಲ. ಇಂತಹ ತಂಡದಲ್ಲಿ ಬ್ರಾಹ್ಮಣರಿಂದ ಹಿಡಿದು ಎಲ್ಲಾ ಜಾತಿಯ ಜನರೂ ಇರುತ್ತಾರೆ. ಮಾತಾ ಭವಾನಿಯನ್ನು ಆರಾಧಿಸುವ ಇವರು ಯಾವುದೇ ಕೊಲೆಗಳನ್ನು ಮಾಡುವಾಗ ಶಕುನಗಳನ್ನು ನೋಡುತ್ತಾರೆ. ಇವರಿಗೆ ಇವರದ್ದೇ ಆದ ರಾಮಸಿ ಭಾಷೆ ಕೂಡ ಇರುತ್ತದೆ. ತಂಡದ ಯಜಮಾನ ಒಮ್ಮೆ ಆದೇಶ ನೀಡಿದರೆ ಕ್ಷಣಗಳಲ್ಲಿ ಹತ್ತಾರು ಹೆಣಗಳು ಉರುಳುತ್ತವೆ. ಇವರ ವೈಶಿಷ್ಟ್ಯವಿರುವುದೇ ಇವರು ಕೊಲ್ಲುವ ರೀತಿಯಲ್ಲಿ. ಏಕೆಂದರೆ ಕೊಲ್ಲಲು ಇವರಿಗೆ ಬೇಕಿರುವುದು ಕೇವಲ ಒಂದು ರೇಷ್ಮೆರುಮಾಲು. ಹೀಗೆ ಓದುತ್ತಾ ಹೋದಂತೆ ನಮ್ಮನ್ನು ಬೇರೆ ಪ್ರಪಂಚಕ್ಕೆ ಕರೆದೊಯ್ಯುವ ಕಾದಂಬರಿ.

Yogeesh Jamadagni ರೇಷ್ಮೆ ರುಮಾಲಿನಲ್ಲಿ ಕುತ್ತಿಗೆ ಜೀರಿ ಕೊಲ್ಲುವ ಇವರ ಹತ್ಯಾ ವಿಧಾನ ಭಯ೦ಕರ. ಇ೦ತಹ ಪ೦ಗಡ ಕಾಣೆಯಾಯಿತಲ್ಲ ಸಧ್ಯ. ಅವರಲ್ಲೂ ನೋವು ನಲಿವು , ಪ್ರೇಮ ಪ್ರೀತಿ ಇರುವುದನ್ನು ಸಹ ದಾಖಲಿಸಲಾಗಿದೆ.

Advertisements