‘ಕುಂತ್ರೆ ನಿಂತ್ರೆ ಬೇಂದ್ರೆ’ – ಎಮ್. ಎನ್. ಸುಂದರರಾಜ್

kuntre nintre

“ಕುಂತ್ರೆ ನಿಂತ್ರೆ ಬೇಂದ್ರೆ” ಇದು ಎಮ್. ಎನ್. ಸುಂದರರಾಜ್ ರವರು ಸಂಪಾದಿಸಿರುವ ಒಂದು ಪುಸ್ತಕ 44 ಅಧ್ಯಾಯಗಳಿರುವ ಈ ಪುಸ್ತದಲ್ಲಿ ಒಂದೊಂದು ಅಧ್ಯಾಯದಲ್ಲೂ ವರಕವಿ ಡಾ. ದ.ರಾ. ಬೇಂದ್ರೆಯವರ ವ್ಯಕ್ತಿತ್ವದ ಅನಾವರಣವಾಗುತ್ತದೆ. ಈ ಪುಸ್ತಕದಲ್ಲಿ ಪ್ರಸ್ತಾಪಿಸಿರುವ ಕೆಲವು ಪ್ರಸಂಗಗಳು ಪರಿಚಿತ, ಮತ್ತೆ ಕೆಲವು ಅಪರಿಚಿತ. ಪುಸ್ತಕ ಓದುತ್ತಾ ಹೋದಂತೆಲ್ಲಾ ಬೇಂದ್ರೆಯಜ್ಜ ನಮ್ಮನ್ನು ಆವರಿಸಿಕೊಳ್ಳುತ್ತಾ ಹೋಗುತ್ತಾರೆ. ಪುಸ್ತಕದಲ್ಲಿನ ಕೆಲವು ವಾಸ್ತವಾಂಶಗಳು ನಮ್ಮನ್ನು ಆಶ್ಚರ್ಯಾಚಕಿತರನ್ನಾಗಿಸುತ್ತದೆ. ಉದಾಹರಣೆಗೆ ಬೇಂದ್ರೆಯವರ ಮಾತೃಭಾಷೆ ಮರಾಠಿ ಎನ್ನುವ ವಿಷಯ, ಬೇಂದ್ರೆಯವರಿಗೆ ಉಪ್ಪಿಟ್ಟಿನ ಮೇಲಿದ್ದ ಮೋಹ, ಬೇಂದ್ರೆಯವರು ಪುಸ್ತಕ ಕೊಳ್ಳಲು ಅವರ ತಾಯಿ ತನ್ನ ಕೈಬೆರಳಿನ ಉಂಗುರವನ್ನೇ ನೀಡಿದ್ದು. ಹೀಗೆ ಹಲವಾರು ರಸಪ್ರಸಂಗಗಳು ಪುಸ್ತಕದಲ್ಲಿವೆ.

ಬೇಂದ್ರೆ ಬರಿಯ ಕವಿ ಮಾತ್ರ ಆಗಿರದೆ, ಒಬ್ಬ ಉತ್ಕೃಷ್ಟ ವಾಗ್ಮಿ, ಪ್ರತಿಯೊಂದು ವಿಷಯಕ್ಕೂ ಸೂಕ್ಷ್ಮವಾಗಿ ಸ್ಪಂದಿಸುವ ಸೂಕ್ಷ್ಮಜ್ಞರು ಆಗಿದ್ದರು. ಅವರು ಬೇರೆ ಕಲಾವಿದರಿಗೆ ಸ್ಪೂರ್ತಿಯಾಗುತ್ತಿದ್ದ ರೀತಿ ಅನನ್ಯ. ಅವರಲ್ಲಿದ್ದ ಹಾಸ್ಯಪ್ರಜ್ಞೆ, ತಾಯಿ ಮತ್ತು ಅಜ್ಜಿಯೆಡೆಗಿದ್ದ ಪ್ರೀತಿ, ಅವರಿಗಿದ್ದ ಸಂಖ್ಯಾ ಜ್ಞಾನ, ಸಂಗೀತದೆಡೆಗಿನ ಆಸಕ್ತಿ ಅಪೂರ್ವವಾದದ್ದು.

1932ರಲ್ಲಿ ಬೇಂದ್ರೆಯವರ ಪ್ರಥಮ ಕವನಸಂಕಲನ “ಗರಿ” ಬಿಡುಗಡೆಯಾಯಿತು. ಆದರೆ ಈ ಕವನ ಸಂಕಲನದಲ್ಲಿ ಪ್ರಕಟವಾಗಿದ್ದ “ನರಬಲಿ” ಕವನದಿಂದಾಗಿ ಬೇಂದ್ರೆಯವರು ಒಂದು ವರ್ಷ ಸೆರೆಮನೆ ವಾಸ ಅನುಭವಿಸಬೇಕಾಯಿತು. “ನೀತಿಯ ಭೂತವೇ ಹೊರಡಿಲ್ಲಿಂದ, ದಯೆಯ ದೆವ್ವಗಳ ಹೊರಡಿಲ್ಲಿಂದ” ಎಂದು ಬೇಂದ್ರೆಯವರು ಬ್ರಿಟಿಷರ ದಬ್ಬಾಳಿಕೆಯನ್ನು ಖಂಡಿಸಿ ಬರೆದ ಕವನವನ್ನು ಇಂಗ್ಲಿಷಿಗೆ ಅನುವಾದಿಸಿ ಕೇಳಿದ ಇಂಗ್ಲೀಷರು ಬೇಂದ್ರೆಯವರ ವಿರುದ್ಧ ರಾಜದ್ರೋಹದ ಆಪಾದನೆ ಹೊರಿಸಿ ಹಿಂಡಲಗಾ ಜೈಲಿಗಟ್ಟಿದರು.

ಪುಸ್ತಕ ಓದಿ ಮುಗಿಸುವ ಹೊತ್ತಿಗೆ ನಾವು ಬೇಂದ್ರೆಯಜ್ಜನನ್ನು ನೋಡಲಿಲ್ಲವಲ್ಲಾ, ಅವರ ಪಾಠ ಕೇಳಲಿಲ್ಲವಲ್ಲಾ ಎನ್ನುವ ಕೊರಗು ನಮ್ಮನ್ನು ಕಾಡದೇ ಇರದು. ಅತ್ಯದ್ಭುತವಾದ ಪುಸ್ತಕ. ನೀವೂ ಓದಿ. ನಮಸ್ಕಾರ.

– Rampura Raghothama

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಕನ್ನಡ, ಸುಂದರರಾಜ್ ಎಮ್. ಎನ್., Uncategorized and tagged , , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s