‘ತಬ್ಬಲಿಯು ನೀನಾದೆ ಮಗನೆ’ – ಎಸ್. ಎಲ್. ಭೖೆರಪ್ಪ

tabbaliyu neenaadeಎಸ್.ಎಲ್. ಭೖೆರಪ್ಪನವರ “ತಬ್ಬಲಿಯು ನೀನಾದೆ ಮಗನೆ” ಕಾದಂಬರಿಯು, ಧರಣಿ ಮಂಡಲ ಮಧ್ಯದೊಳಗೆ……ಪದ್ಯದೊಂದಿಗೆ ಆರಂಭವಾಗುತ್ತದೆ. ಈ ಪದ್ಯದಲ್ಲಿ ಬರುವ ಕಾಳಿಂಗನೆಂಬ ಗೊಲ್ಲನ ವಂಶಜನೆಂದು ಕಾಳಿಂಗ ಗೌಡ, ಕಾಳೇನ ಹಳ್ಳಿಯಲ್ಲಿ ಊರಿನ ಮುಖ್ಯವ್ಯಕ್ತಿಯಾಗಿ ಪ್ರಸಿದ್ದಿಯೊಂದಿರುವುದರ ಜೊತೆಗೆ ಪದ್ಯದಲ್ಲಿ ಬರುವ ಪುಣ್ಯಕೋಟಿ ಗೋವಿನ ತಳಿ ಅವನ ದೊಡ್ಡಿಯಲ್ಲಿರುತ್ತದೆ.
ಗೋವುಗಳನ್ನು ತಾಯಿಯಂತೆ ತಿಳಿದು ಅವುಗಳ ಆರೖೆಕೆ ಮಾಡಿ ಪ್ರೀತಿಯಿಂದ ಕಾಣುತ್ತಾನೆ, ಅಲ್ಲದೆ ಗೋ ಹತ್ಯೆ ಮಾಡುವುದನ್ನು ಮಹಾಪಾಪವೆಂದು ತಿಳಿದಿರುತ್ತಾನೆ. ಕಾಳೇಗೌಡನ ಮಗನು ಕೂಡ ಗೋವನ್ನು ರಕ್ಷಿಸಲು ಹೋಗಿ ಕಿರುಬಕ್ಕೆ ಬಲಿಯಾಗಿರುತ್ತಾನೆ. ಆದರೆ ವಿದೇಶದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮುಗಿಸಿ ವಿದೇಶಿ ಹೆಣ್ಣನ್ನು ಮದುವೆಯಾಗಿ ಬರುವ ಮೊಮ್ಮಗ ಮಾತ್ರ, ಗೋವು, ಪ್ರಾಣಿಗಳಿರುವುದು ಮನುಷ್ಯನ ಆಹಾರಕ್ಕಾಗಿ, ಮಾಂಸಕ್ಕಾಗಿಯೆಂದು ವಾದಿಸುತ್ತಾನೆ. ಇದರಿಂದಾಗಿ ಮನೆಯವರ ಜೊತೆಗೆ ಊರಿನವರಿಂದ ದೂರವಾಗುತ್ತಾನೆ. ಇಂತಹ ಒಂಟಿತನದ ಬದುಕಿನಿಂದ ಬೇಸರಗೊಂಡು ಮರಳಿ ತನ್ನ ಹಿಂದಿನ ಶ್ರದ್ದೆಗೆ ಮರಳುವುದರೊಳಗೆ, ಪಡೆದಿದ್ದಕಿಂತ ಹೆಚ್ಚಿನದನ್ನು ಕಳೆದುಕೊಂಡು ತಬ್ಬಲಿಯಾಗುತ್ತಾನೆ.
ಗೋವುಗಳನ್ನು ದೇವತೆಗಳ ಸ್ವರೂಪವೆಂದು ಪೂಜಿಸುವ ಕಾಳಿಂಗಜ್ಜ ಮತ್ತು ಅದರ ವ್ಯತಿರಿಕ್ತ ಸ್ವಭಾವದ ಮೊಮ್ಮಗನ ನಡುವಿನ ಮೌಲ್ಯಗಳ ತಿಕ್ಕಾಟವೇ ಕಾದಂಬರಿಯ ಕಥಾವಸ್ತು.

-Kavitha Bhat

Nagesh Kumar C S 1977 ರಲ್ಲಿ ಇದನ್ನಾಧರಿಸಿ ಗಿರೀಶ್ ಕಾರ್ನಾಡ್ ಒಂದು ಚಿತ್ರವನ್ನು ಮಾಡಿದ್ದರು. 

 

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಎಸ್. ಎಲ್. ಭೖೆರಪ್ಪ, ಕನ್ನಡ, Uncategorized and tagged , , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s