‘ನಮ್ಮ ಊರಿನ ರಸಿಕರು’ – ಗೊರೂರು ರಾಮಸ್ವಾಮಿ ಅಯ್ಯಂಗಾರ್

namma oorina rasikaruಒಂದು ಹಳ್ಳಿ. ಅದರಲ್ಲಿ ನಡೆಯುವ ದಿನನಿತ್ಯದ ಸಾಮಾನ್ಯ ಘಟನೆಗಳು. ಅದನ್ನು ಕೇಳಿದಾಗ, “ಹೌದಲ್ಲಾ? ಇದು ನಮ್ಮಲ್ಲೂ ಹೀಗೆ ನಡೆದಿತ್ತು” ಎನ್ನಿಸುವುದುಂಟು. ಘಟನೆಗಳು ಸಾವಿರಾರು ಇರಬಹುದು, ಆದರೆ ಅದನ್ನು ನೋಡುವ ದೃಷ್ಟಿಕೋನ ಮಾತ್ರ ಬದಲಾದೀತೆ ಹೊರತು ಅದರ ಮೂಲ ಭಾವವಲ್ಲ. ಆ ಮೂಲ ಭಾವ ಕೆಡಿಸಿಕೊಳ್ಳದೆ ತನ್ನ ಮೌಲ್ಯವನ್ನು ಇಂದಿಗೂ ಉಳಿಸಿಕೊಂಡು ಬಂದಿರುವ ಪ್ರಭಂಧ ಸಂಕಲನವೆಂದರೆ ಶ್ರೀಯುತ ಗೊರೂರು ರಾಮಸ್ವಾಮಿ ಆಯ್ಯಂಗಾರರ “ನಮ್ಮ ಊರಿನ ರಸಿಕರು”.

ಇದನ್ನು ನೀವು ಪ್ರಬಂಧವೆನ್ನುವಿರೋ, ಲಲಿತಕಲಾ ಸಾಹಿತ್ಯವೆನ್ನುವಿರೋ, ಕಥೆಯೆನ್ನುವಿರೋ, ಕಾದಂಬರಿಯೆನ್ನುವಿರೋ ಅಥವಾ ಅದೆಲ್ಲದರ ಸವಿಸಮ್ಮಿಶ್ರಣ ಎನ್ನುವಿರೋ ಅದು ನಿಮ್ಮ ಭಾವಸ್ವಾಮ್ಯಕ್ಕೆ ಬಿಟ್ಟ ವಿಚಾರ. ಓದಿದ ನಂತರ ಇದನ್ನು ಯಾವ ಮೂಲಕ್ಕೆ ಸೇರಿಸಬಹುದು ಎಂದು ಯೋಚಿಸುವುದು ನಿರರ್ಥಕ ಎನಿಸಿದೆ ನನಗೆ. ಯಾಕೆಂದರೆ ಈ ಮೊದಲೇ ಹೇಳಿದಂತೆ ಎಲ್ಲಾ ಭಾವವನ್ನು ಆಮೂಲಾಗ್ರವಾಗಿ ತನ್ನಲ್ಲಿ ಉಳಿಸಿಕೊಂಡು ಬಂದ ಯಾವುದೇ ಕೃತಿಯಾದರೂ ಓದುಗನಿಗೆ ಆ ಕ್ಷಣದ ಆತನ ಭಾವನೆಗೆ ಎಟುಕುವ ಮಾದರಿಯಾಗಿರುವಾಗ, ಆತನ ಆ ಸಂಧರ್ಭಕ್ಕೆ ತಕ್ಕಂತೆ ಅದು ಅವನೆದುರು ನರ್ತಿಸುವಾಗ ಯಾವ ಗುಂಪಿಗೆ ಹೇಗೆ ತಾನೇ ವಿಂಗಡಿಸಲು ಸಾಧ್ಯ ಹೇಳಿ? ಇದು ನನ್ನ ಅಭಿಮತ.

ನಾನು ಪದವಿಯಲ್ಲಿದ್ದಾಗ ರಸಿಕರು ನಮಗೆ ಪಠ್ಯವಾಗಿತ್ತು. ಆಗಿನ ಬುದ್ಧಿಮತ್ತೆಗೆ ತಕ್ಕಂತೆ ಅರ್ಥವೂ ಆಗಿತ್ತು. ಇಡೀ ಪುಸ್ತಕವನ್ನು ನಾನು ಒಂದು ವರ್ಷದಲ್ಲಿ ಓದಿ ಅರ್ಥಮಾಡಿಕೊಂಡಿದ್ದಕ್ಕಿಂತ, ಈಗ ಎರಡು ದಿನದಲ್ಲಿ ಓದಿ ಅನುಭವಿಸಿದ ಅನನ್ಯತೆ ಹೆಚ್ಚು. ಮಾತಿಗೆ ನಿಲುಕದ ಭಾವನೆ ಜೊತೆಗೆ ಹಿಂದಿನ ದಿನಗಳ ಆಹ್ಲಾದಕರ ನೆನಪುಗಳನ್ನೂ ಒಟ್ಟೊಟ್ಟಿಗೆ ತಂದ ರಸಿಕರ ಕರ್ತೃ ರಾಮಸ್ವಾಮಿಯವರಿಗೆ ಆಭಾರಿ.. ಆಭಾರಿ.. ಆಭಾರಿ..

ಅಂದಹಾಗೆ ರಸಿಕರನ್ನು ಒದದವರು ಖಂಡಿತ ಓದಿ. ಯಾರಿಗೆ ಗೊತ್ತು ಯಾವ ಸುನೀತಭಾವ ನಿಮ್ಮೆದೆಗೆ ಬಂದು ತಾಕುವುದೋ ಬಲ್ಲವರ್ಯಾರು? ನಮಸ್ಕಾರ.

Mohan Kumar D N

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಗೊರೂರು ರಾಮಸ್ವಾಮಿ ಅಯ್ಯಂಗಾರ್, Uncategorized and tagged , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s