ನೇಮಿಚಂದ್ರರ ಸಾಹಸಮಯ ಮತ್ತು ದಿಟ್ಟ ಪ್ರವಾಸದ ಕಥಾನಕ ಹಿಡಿದರೆ ಬಿಡದಷ್ಟು ಮನಸ್ಸನ್ನು ಸೆರೆ ಹಿಡಿಯುತ್ತದೆ…ಇದನ್ನು ಮುಗಿಸುವವರೆಗೂ ಬೇರಾವ ಪುಸ್ತಕವನ್ನೂ ಓದುವ ಮನಸ್ಸಾಗಲಿಲ್ಲ, ವೃತ್ತ ಪತ್ರಿಕೆ ಕೂಡಾ..

ಪೆರು ಎಂಬ ದ.ಅಮೆರಿಕದ ಪ್ರಾಚೀನ ನಾಗರೀಕತೆ, ಅಮೆಜ಼ಾನ್ ನದಿ ತೀರ, ಅಲ್ಲಿನ ಕಾಡುಜನರ ಹಿಂದಿನ ಚರಿತ್ರೆ ಮತ್ತು ಹಿನ್ನೆಲೆಯ ದರ್ಶನಕ್ಕೆ ಸ್ನೇಹಿತೆ ಮಾಲತಿಯವರೊಂದಿಗೆ , ಅವರಿಬ್ಬರೇ ಮಹಿಳೆಯರು ಯಾವ ವ್ಯವಸ್ಥಿತ ಪ್ರವಾಸದ ಏರ್ಪಾಡೂ ಮಾಡದೇ ಖುದ್ದಾಗಿ ಹೋಗಿ ತಿರುಗಾಡುತ್ತಾರೆ, ಆಲಸ್ಯ ಬೇಸರವಿಲ್ಲದೇ ಅವರೊಂದಿಗೆ ಬೆರೆತು ಎರಡು ತಿಂಗಳ ಕಾಲ ಪ್ರಕೃತಿಯ ನಡುವೆ ಕಳೆದುಹೋಗುತ್ತಾರೆ.. ಅಲ್ಲಿನ ಭಾಷೆ ತಿಳಿಯದೇ, ಸಮರ್ಪಕ ವಸತಿ ಆಹಾರದ ಏರ್ಪಾಡಿಲ್ಲದೇ ಕಷ್ಟಪಟ್ಟು ಚಿಕ್ಕ ಚಿಕ್ಕ ಕಣಿವೆಯ ನಿಗೂಢತೆ ಮತ್ತು ವೈಚಿತ್ರ್ಯಗಳನ್ನು ಚಿತ್ರಿಸುತ್ತಾ ಹೋಗುತ್ತಾರೆ. ಇವರ ಬರೆಯುವ ಶೈಲಿ ಸಹಜ ಮತ್ತು ಸರಳವಾಗಿದೆ, ಯಾವ ಕ್ಲಿಷ್ಟ ಪದ ಗುಚ್ಚಗಳು, ಉಪಮೆಗಳನ್ನೂ ಅನವಶ್ಯವಾಗಿ ಬಳಸಿಲ್ಲ…ಓದುಗರಿಗೆ ಪ್ರಥಮ ದರ್ಶನದ ಸೊಗಡಿನ ರುಚಿ ತೋರಿಸುವಲ್ಲಿ ಈ ರೋಚಕ ಪ್ರವಾಸ ಪುಸ್ತಕ ಯಶಸ್ವಿಯಾಗಿದೆ..

ಇದರ ಸ್ವಾರಸ್ಯಗಳನ್ನು ಓದಿಯೇ ತಿಳಿಯಬೇಕು. ಈ ಸಾಹಸಿ ಕನ್ನಡಿಗ ಮಹಿಳಾ ಲೇಖಕಿಗೆ ನನ್ನ ದೊಡ್ಡ ಸಲಾಂ! ಎಲ್ಲರೂ ಇದನ್ನು ಮರೆಯದೇ ಓದಿ ಆನಂದಿಸಿ…

ನನ್ನ ಕೆಲವು ಟೀಕೆಗಳೂ ಹೀಗಿವೆ:-
ಹಲವೆಡೆ, ಇವರು ಪ್ರತಿಪುಟದಲ್ಲೂ ಶ್ರೀಮಂತ ದೇಶಗಳು ಬಡ ದೇಶಗಳನ್ನು ಹುರಿದು ಮುಕ್ಕುವುದು, ಎಕ್ಸ್ಪ್ಲಾಯಿಟ್ ಮಾಡುವುದು, ಅವರ ನೈಸರ್ಗಿಕ ಸಂಪನ್ಮೂಲ ಮತ್ತು ನಾಗರೀಕತೆಯನ್ನು ಕ್ರೂರವಾಗಿ ಅಳಿಸಿ ಹಾಕುವುದು ಇವನ್ನೂ ದಾಖಲಿಸುತ್ತ ಹೋಗುವಾಗ ಸ್ವಲ್ಪ ಅವರ ಎಡ-ಪಂಥೀಯ ಎನ್ನಬಹುದಾದ ನಿಲುವು, ಒಲವು ಹೆಚ್ಚಾಯಿತೇನೋ ಎಂಬ ಭಾವನೆ ಮೂಡಿತು. ವಿಶೇಷವಾಗಿ ಯು ಎಸ್ ಏ ದೇಶದ ಬಗ್ಗೆ ತಮ್ಮ ಅಸಹನೆ , ಕೋಪ ಕಾರುವುದು ಮತ್ತು ಅತಿ ಖಾರವಾದ ಟೀಕೆಗಳು ಇವರು ಹೋಗಿದ್ದ ಪೆರುವಿನ ಘನತಯನ್ನೇನೂ ಹೆಚ್ಚಿಸುವುದರಲ್ಲಿ ಸಹಕಾರಿಯಾಗುವುದಿಲ್ಲ..ಉತ್ತರ ಅಮೆರಿಕದಲ್ಲಿ ಎಲ್ಲಾ ಕೃತಕ, ವೈಭವೀಕೃತ, ಅಲ್ಲಿನದು ಮಾನವೀಯತೆಯಿಲ್ಲದ ಒಣ ಸಮಾಜ ಎಂದೆಲ್ಲಾ ದೂರುವ ಅಗತ್ಯವೇ ನನಗೆ ಒಂದು ಬೇರೆಯೇ ದೇಶ ಖಂಡದ ಈ ಪ್ರವಾಸ ಕಥನದಲ್ಲಿ ಕಾಣಲಿಲ್ಲ…

ಇದನ್ನು ಬಿಟ್ಟರೆ ನನಗೆ ಒಂದಕ್ಕೆ ಹತ್ತರಷ್ಟು ಪೈಸಾ ವಸೂಲ್ ಆದ ಪುಸ್ತಕ ಇದು!

http://www.navakarnatakaonline.com/peruvina-pavitra-kanivey…

-ನಾಗೇಶ್ ಕುಮಾರ್.ಸಿ.ಎಸ್

Advertisements