besuge

“ಬೆಸುಗೆ”ಅಶ್ವಿನಿಯವರ ಪ್ರಮುಖ ಕಾದಂಬರಿಗಳಲ್ಲೊಂದು, ಅಲ್ಲದೆ ಚಲನಚಿತ್ರವಾಗಿ ಅಪಾರ ಜನಮೆಚ್ಚುಗೆ ಪಡೆದ ಕೃತಿ.
ಅನಂತರಾಯರ ಉತ್ತಮ ವ್ಯಕ್ತಿತ್ವ, ಅನಾಥರನ್ನು, ಬಡವರನ್ನು ಪ್ರೀತಿಯಿಂದ ಕಂಡು ಅವರ ಏಳಿಗೆಗಾಗಿ ನೆರವಿಗಾಗಿ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಈ ಒಳ್ಳೆತನದ ಹಿಂದೆ ಪ್ರಬಲವಾದ ಕಾರಣವಿದೆ.ಅವರ ಹೆಂಡತಿಯೂ ಅವರಂತೆ ಕರುಣಾಮಯಿಯಾದರೂ ಪ್ರತೀಷ್ಠೆ, ಮನೆತನ ಎಂಬ ದೊಡ್ಡಸ್ತಿಕೆ ಕೆಲವೊಮ್ಮೆ ಬೇಸರ ತರಿಸುತ್ತದೆ.

ಇನ್ನೂ ಮಗ ವೇಣುಮಾಧವ ಉನ್ನತ ವ್ಯಾಸಾಂಗ ಮಾಡಿ, ವಿದೇಶಕ್ಕೆ ಹೋಗಿಬಂದರೂ ವಿಲಾಸಿ ಜೀವನ ನಡೆಸುವಷ್ಟು ಐಶ್ವರ್ಯ, ಸೌಲಭ್ಯಗಳಿದ್ದರೂ ದಾರಿ ತಪ್ಪದೆ, ಭಾರತೀಯ ಮೌಲ್ಯಗಳನ್ನೂ, ಪರಂಪರೆಯನ್ನೂ ಗೌರವಿಸುವ ಅವನ ಸರಳತನ ಮೆಚ್ಚುವಂತಹದ್ದು.

ಅನಾಥ  ಹುಡುಗಿಯಾಗಿ, ಅನಂತರಾಯರ ಆಶ್ರಯ ಪಡೆದು ಅವರ ಅತೀ ಸಲುಗೆಯನ್ನು ದುರುಪಯೋಗ ಮಾಡಿಕ್ಕೊಳ್ಳದೇ ತನ್ನ ಗುರಿಸಾಧನೆಗಾಗಿ ಸುಮ ಶ್ರಮಿಸುತ್ತಾಳೆ. ಅವಳ ಸರಳತೆಗೆ ವೇಣುಮಾಧವ ಮೆಚ್ಚುತ್ತಾನೆ, ಆದರೆ ಅದಕ್ಕೆ ತಾಯಿಯ ಪ್ರಬಲ ವಿರೋಧವಿರುತ್ತದೆ, ಸುಮ ಮತ್ತು ಮಾಧವನ ಬಾಲ್ಯದಲ್ಲಿ ಒಂದು ರಹಸ್ಯ ಘಟನೆ ನಡೆದಿರುತ್ತದೆ.ಅದು ಇಬ್ಬರ ಮಿಲನಕ್ಕೆ ಕಾರಣವಾಗುತ್ತದೆ ಅದು ಕಾದಂಬರಿಯ ಪ್ರಮುಖ ತಿರುವು, ಇಷ್ಟು ಕಥಾವಸ್ತು…

Kavitha Bhat

Advertisements