‘ಮೋಹನಸ್ವಾಮಿ’ – ವಸುಧೇಂದ್ರ

mohanaswamy

“ಮೋಹನಸ್ವಾಮಿ” ಇದು ಕತೆಗಾರ ವಸುಧೇಂದ್ರರವರು ಬರೆದಿರುವ ಕಥಾಸಂಕಲನ. 214 ಪುಟಗಳನ್ನೊಳಗೊಂಡ ಈ ಪುಸ್ತಕದಲ್ಲಿ ಮನಮುಟ್ಟುವಂತಹ 12 ನೀಳ್ಗತೆಗಳಿವೆ. ಅವೆಂದರೆ – ತುತ್ತತುದಿಯಲಿ ಮೊಟ್ಟಮೊದಲು, ಕಗ್ಗಂಟು, ಕಾಶೀವೀರರು, ಒಲ್ಲದತಾಂಬೂಲ, ಕಿಲಿಮಂಜಾರೋ, ನಿನ್ನಾಗಮನವೀಗ ನನ್ನ ಹಕ್ಕು, ತಗಣಿ, ದುರ್ಭಿಕ್ಷಕಾಲ, ಭಗವಂತ ಭಕ್ತ ಮತ್ತು ರಕ್ತ, ಪೂರ್ಣಾಹುತಿ, ಧ್ರೌಪತಮ್ಮನ ಕಥಿ ಮತ್ತು ಇವತ್ತು ಬೇರೆ.

ಇವುಗಳಲ್ಲಿ ಏಳು ಕಥೆಗಳು ಮೋಹನಸ್ವಾಮಿಯ ಕುರಿತಾದದ್ದೇ. ಮೋಹನಸ್ವಾಮಿ ಒಬ್ಬ ಸಲಿಂಗಪ್ರೇಮಿ. ಈ ಕಥೆಗಳಲ್ಲಿ ಒಬ್ಬ ಸಲಿಂಗಪ್ರೇಮಿಯ ಬದುಕನ್ನು ಅತ್ಯುತ್ತಮವಾಗಿ ಚಿತ್ರಿಸಿದ್ದಾರೆ. ಮೋಹನಸ್ವಾಮಿಯ ಜೀವನ, ಅವನ ಸಾಮಾಜಿಕ ನಡವಳಿಕೆಗಳು, ಅವನು ಸಲಿಂಗಿ ಎಂದು ತಿಳಿದಾಗ ಅಕ್ಕಪಕ್ಕದವರಿಂದ, ಜನರಿಂದ ಸಿಗುವ ತಿರಸ್ಕಾರ, ಅಸಹ್ಯ ಭಾವನೆ, ನಾನು ಸಲಿಂಗಿ ಎಂದು ಹೊರಜಗತ್ತಿಗೆ ಹೇಳಿಕೊಳ್ಳಲಾಗದ ಅವನ ಅಸಹಾಯಕತೆ ಮುಂತಾದವುಗಳನ್ನು ಲೇಖಕರು ತುಂಬಾ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ.

“ದುರ್ಭಿಕ್ಷಕಾಲ” ಎಂಬ ಕಥೆಯಲ್ಲಿ ಐಟಿ ಉದ್ಯೋಗಿಗಳ ಜೀವನಕ್ರಮ, ಅವರ ಅಧ್ಯತೆಗಳು, ರಿಸೆಷನ್ ಸಮಯದಲ್ಲಿ ಅವರಿಗೆ ಆದ ಪರಿಣಾಮಗಳು ಇವನ್ನೆಲ್ಲಾ ತುಂಬಾ ನೈಜವಾಗಿ ತೋರಿಸಿದ್ದಾರೆ. “ಭಗವಂತ ಭಕ್ತ ಮತ್ತು ರಕ್ತ” ಕತೆಯಲ್ಲಿ ಶ್ರೀಹರಿಯ ಪರಮಭಕ್ತರೊಬ್ಬರ ಮಗಳು ಮುಸ್ಲಿಂ ಯುವಕನೊಬ್ಬನನ್ನು ಪ್ರೀತಿಸಿ ಮದುವೆಯಾಗುವುದು, ಆ ಭಕ್ತನಿಗೆ ಹೃದಯದ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರಕ್ತ ಬೇಕಾದಾಗ ಮುಸ್ಲಿಂ ಯುವಕನೊಬ್ಬ ರಕ್ತನೀಡಲು ಬಂದಾಗ ತಿರಸ್ಕರಿಸುವುದು ಇಂತಹಾ ಅತಿಸೂಕ್ಷ್ಮ ವಿಚಾರಗಳನ್ನು ನೋಡಬಹುದು. “ಪೂರ್ಣಾಹುತಿ” ಕತೆಯಲಿ ಈಗಿನ ಕಾಲದ ಯುವಕ ಯುವತಿಯರು, ಅವರ ಆದ್ಯತೆಗಳು, ಸಾಮಾಜಿಕ ಜಾಲತಾಣಗಳನ್ನು ಅವರು ಉಪಯೋಗಿಸುವ ರೀತಿ, ಅದರಿಂದಾಗುವ ದುಷ್ಪರಿಣಾಮಗಳನ್ನು ಪರಿಣಾಮಕಾರಿಯಾಗಿ ಹೇಳಿದ್ದಾರೆ. ಒಬ್ಬ ಯುವತಿ ಹಾಕಿದ ಒಂದು ಫೇಸ್ಭುಕ್ ಸ್ಟೇಟಸ್‌ನಿಂದ ಅವಳ ಮಾನ, ಪ್ರಾಣಗಳನ್ನು ಹೇಗೆ ಕಳೆದುಕೊಳುತ್ತಾಳೆಂದು ಅದ್ಭುತವಾದ ಕತೆಯ ಮೂಲಕ ತಿಳಿಸಿದ್ದಾರೆ. ಮಹಾಭಾರತದ ಕತೆಯನ್ನು ಇಷ್ಟೊಂದು ಆಸಕ್ತಿಕರವಾಗಿಯೂ ಹೇಳಬಹುದು ಎಂಬುದನ್ನು “ಧ್ರೌಪತಮ್ಮನ ಕಥಿ”ಯ ಮೂಲಕ ಹೇಳಿದ್ದಾರೆ. ಧ್ರೌಪತಿ ಮತ್ತು ಕುಂತೀದೇವಿಯರ ಮನಸ್ಥಿತಿಯನ್ನು ತಿಳಿಯಲು ಈ ಕತೆಯನ್ನು ನಾವು ಓದಲೇಬೇಕು. ಕುಡಿತದ ದುಷ್ಪರಿಣಾಮಗಳು, ಅದರಿಂದ ಯಾರೆಲ್ಲಾ, ಹೇಗೆಲ್ಲಾ ತೊಂದರೆ ಅನುಭವಿಸಬೇಕಾಗುತ್ತದೆ, ಮನುಷ್ಯನ ನೈತಿಕತೆ ಯಾವಾಗ್ಯಾವಾಗ, ಹೇಗೆಲ್ಲಾ ಜಾಗೃತವಾಗುತ್ತವೆ ಎಂದು “ಇವತ್ತು ಬೇರೆ” ಎಂಬ ಕತೆಯಲ್ಲಿ ಹೇಳಿದ್ಡಾರೆ.

ಈ ಪುಸ್ತಕದ ಹೆಗ್ಗಳಿಕೆಯೆಂದರೆ ಇಟಲಿ, ಇಂಡೋನೆಷ್ಯಾ ಭಾಷೆ ಸೇರಿದಂತೆ, ಹಲವಾರು ಭಾರತೀಯ ಭಾಷೆಗಳಿಗೆ ಭಾಷಾಂತರಗೊಂಡಿರುವುದು. ಸರಾಗವಾಗಿ ಓದಿಸಿಕೊಂಡು ಹೋಗುವ ಪುಸ್ತಕ. ನೀವೂ ಓದಿ. ಧನ್ಯವಾದಗಳು.

Rampura Raghothama

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಕನ್ನಡ, ವಸುಧೇಂದ್ರ, Uncategorized and tagged , , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s