ಶ್ರೀಮತಿ ಸುಧಾಮೂರ್ತಿಯವರ ‘ಡಾಲರ್  ಸೊಸೆ’ ಕಾದಂಬರಿಯು ಪ್ರಸ್ತುತ ಸಾಮಾಜಿಕ ಸಮಸ್ಯೆಯ ಕುರಿತ ಕಥಾವಸ್ತುವನ್ನು ಹೊಂದಿದೆ. ಸರಳ ಸಜ್ಜನಿಕೆಯ ಸಾಕಾರಮೂರ್ತಿಯಂತಿರುವ ಅವರ ವ್ಯಕ್ತಿತ್ವದಷ್ಟೇ ಅವರ ಕಾದಂಬರಿಗಳೂ ಸರಳ. ಸಾಮಾನ್ಯ, ಸರಳ ಶಬ್ದಗಳಿಂದ ಕೂಡಿರುವ ಬರಹ, ನಿರೂಪಣೆ ಸುಲಭವಾಗಿ ಓದಿಸಿಕೊಂಡು ಹೋಗುವುದು ಅವರ ಕಾದಂಬರಿಗಳ ವಿಶೇಷ.

ವಿದೇಶಿ ವ್ಯಾಮೋಹ ಇಂದಿನ ಜನಾಂಗಕ್ಕೆ ಎಷ್ಟರ ಮಟ್ಟಿಗೆ ಆಕ್ರಮಿಸಿಕೊಂಡಿದೆಯೆಂದರೆ, ನರ್ಸರಿ ಮಕ್ಕಳಿಂದ ಹಿಡಿದು ಹಿರಿಯರವರೆಗೂ, ತಮ್ಮ ದ್ಯೇಯಗಳಲ್ಲಿ, ಗುರಿಗಳಲ್ಲಿ ಅಮೇರಿಕಾದ ಕನಸು ಕಾಣುವುದು ಸಾಮಾನ್ಯವೆ. ಜಗತ್ತಿನ ಅನೇಕ ಜನರನ್ನು ತನ್ನತ್ತ ಸೆಳೆದುಕೊಳ್ಳುವ ಆಕರ್ಷಣೆಯ ಜಾಲಕ್ಕೆ ಬೆರಗಾಗುವಂತೆ ಮಾಡುತ್ತದೆ. ಆರಂಭದಿಂದಲೂ ಬಡತನದಲ್ಲಿ ಜೀವಿಸಿ, ಶ್ರೀಮಂತರ, ಉಳ್ಳವರ ತಾತ್ಸಾರಕ್ಕೆ ಒಳಗಾಗುವ ಮಹತ್ವಾಕಾಂಕ್ಷಿ ಗೌರಮ್ಮ, ತಮ್ಮ ಮಕ್ಕಳಲ್ಲಿ ಒಬ್ಬರನ್ನಾದರೂ ಅಮೇರಿಕಾಕ್ಕೆ ದುಡಿಯಲು ಕಳಿಸಿ ಡಾಲರ್ ಎಣಿಸಿ ಶ್ರೀಮಂತರಾಗುವ ಕನಸು ಕಾಣುತ್ತಾರೆ, ಅಲ್ಲದೆ ಅವರ ಮಗ ಅಮೇರಿಕಾ ಸೇರಿ ಅವರ ಕನಸು ಬಹುತೇಕ ಸಫಲವಾಗುತ್ತದೆ, ಅವರ ಕನಸಿನಲ್ಲಿ ಅಮೇರಿಕೆಯಲ್ಲಿ ದುಃಖ, ದುಮ್ಮಾನಗಳಿಲ್ಲ, ದಾರಿದ್ರ್ಯ ಬಡತನವಿಲ್ಲ, ಅಶಾಂತಿಯಂತೂ ಮೊದಲೇ ಇಲ್ಲ, ಬೇಡಿದ್ದನ್ನು ಕೋಡುವ ಕಲ್ಪವೃಕ್ಷ, ಸ್ವರ್ಗವೆಂದು ತಿಳಿದಿರುತ್ತಾರೆ.ಇನ್ನೂ ಅಮೇರಿಕಾದಲ್ಲಿರು ಮಗನಿಗೆ ಶ್ರೀಮಂತರ ಹೆಣ್ಣು ಸಿಕ್ಕಾಗ ಸ್ವರ್ಗಕ್ಕೆ ಮೂರೇ ಗೇಣು.

ಅಮೇರಿಕಾದ ಉದಾರಸ್ತೆ ಡಾಲರ್ ಸೋಸೆಯಿಂದಾಗಿ ದೇಶಿ ಸೋಸೆಯನ್ನು ಕಡೆಗಣಿಸುತ್ತಾರೆ, ಆದರೆ ಅಮೇರಿಕಾಗೆ ಹೋಗುವ ಅವಕಾಶ ಬಂದು ಹಿಗ್ಗಿ ಅಮೇರಿಕಾ ಸೇರಿದ ಮೇಲೆ ಒಂದು ವರ್ಷದಲ್ಲಿ ಡಾಲರ್ ಸೋಸೆಯ ನಡತೆ, ಅಲ್ಲಿಯ ಜನರ ಜೀವನ, ಸಮಸ್ಯೆಗಳಿಂದ ಸರಿಯಾದ ಪಾಠ ಕಲಿತು ಮರಳುತ್ತಾರೆ.

“ನದಿಯ ಆಚೆಗಿರುವ ಹುಲ್ಲುಗಾವಲು ಸದಾ ಹಸಿರಂತೆ” ಎನ್ನುವುದು ತುಂಬ ಸತ್ಯ.

dollar sose

Kavitha Bhat

Advertisements