ಬಿ.ಬಿ. ಅಶೋbullet savariಕ್ ಕುಮಾರ್ ಅವರ “ಬುಲೆಟ್ ಸವಾರಿ” ಪುಸ್ತಕ ಪೊಲೀಸರ ಸಾಹಸ , ಸಮಸ್ಯೆಗಳು ಮತ್ತು ಅವರ ಬುದ್ಧಿಶಕ್ತಿ , ಆತ್ಮಸ್ಥೈರ್ಯಗಳನ್ನು ನಮ್ಮೆದರು ತೆರೆದಿಡುವ ಒಂದು ಉತ್ತಮ ಪುಸ್ತಕ . ಆರಕ್ಷಕರು ಎಂದರೆ ನಾವು ಚಲನಚಿತ್ರಗಳಲ್ಲಿ ನೋಡಿರುವಂತೆ ಕೇವಲ ಲಂಚಕೋರ, ದುರುಳ ಎನ್ನುವ ಅಭಿಪ್ರಾಯ ಬದಲಾಯಿಸಬೇಕು ಎನಿಸುತ್ತದೆ. ಮನುಷ್ಯ ಪೊಲೀಸರು ಎಂದ ಕೂಡಲೇ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದು ಅವರ ಲೇಖನಿಯಿಂದಲೇ ಓದುವುದು ಚೆಂದ. ಜೀವದ ಹಂಗು ತೊರೆದು ಹೋರಾಡುವ ಪೊಲೀಸರ ಸಾಹಸಗಳ ವರ್ಣನೆ ಮೈ ಜುಂ ಎನಿಸುತ್ತದೆ. ರೌಡಿಗಳನ್ನು ಮಟ್ಟ ಹಾಕಿದ ರೀತಿಗಳು, ಚಾಕಚಕ್ಯತೆ ಅದ್ಭುತ. ಹಾಗೂ ಶ್ರೀಯುತರು ತುಂಬಾ ಅದ್ಭುತವಾಗಿ ಬರೆದಿದ್ದಾರೆ. ಒಬ್ಬ ಲೇಖಕರರಾಗಿಯೂ ಶ್ರೀ. ಬಿ.ಬಿ. ಅಶೋಕ್ ಕುಮಾರ್ ಅವರು ತಮ್ಮ ಪ್ರತಿಭೆ ಹೊರ ತಂದಿದ್ದಾರೆ. ಎಲ್ಲ ಪತ್ತೇದಾರಿ ಕತೆ ಪ್ರಿಯರು, ಕ್ರೈಮ್ ಪುಸ್ತಕ ಪ್ರಿಯರು ಓದಿ. ಜೀವದ ಹಂಗು ತೊರೆದು ಸಮಾಜಕ್ಕೆ ಶಾಂತಿ ನೀಡುವ ಪೊಲೀಸರಿಗೊಂದು ಜೈಕಾರ ಹೇಳಬೇಕೆನಿಸುತ್ತಿದೆ. ಇದು ಈ ಪುಸ್ತಕದ ಪರಿಚಯ .

-Ajey Dinakar

Advertisements