ವೆಂ.ಮು. ಜೋಶಿ ರವರ ‘ಮುತ್ತಿನಹಾರ’ 17 ಸಣ್ಣ ಕಥೆಗಳ ಸಂಗ್ರಹ, ‘ಅಪೂರ್ಣಾ’ ಇದರಲ್ಲಿರುವ ಒಂದು ಕಥೆ – 1943 ನೇ ಇಸ್ವಿಯ ಆಗಸ್ಟ್ ನಲ್ಲಿ ನಡೆದಂತೆ, ಭಾರತೀಯ ಸೈನ್ಯ ಪಡೆಯ ಮುಖ್ಯಸ್ಥ ಕೊಡಗಿನ ಮಡಿಕೇರಿಯ ಸುಭೇದಾರ ಅಚ್ಚಪ್ಪ, ನಿವೃತ್ತಿಯ ನಂತರ 2ನೇ ಮಹಾಯುದ್ಧದ ಪ್ರಯುಕ್ತ ಮತ್ತೆ ಸಮವಸ್ತ್ರ ಧರಿಸಿ, ಒಂದು ಗುಪ್ತ ಕಾರ್ಯಾಚರಣೆ ಸಲುವಾಗಿ ಬರ್ಮಾ ದೇಶಕ್ಕೆ 125 ಸೈನಿಕ ದಳದೊಂದಿಗೆ ಬಂದಿದ್ದಾನೆ, ಈತನಿಗೆ 20 ವರ್ಷ ಗಳ ಹಿಂದೆಯೇ ಸೈನ್ಯದ ಮೆಡಿಕಲ್ ಕೋರ್ ನಲ್ಲಿನ ನರ್ಸ್ ಅನ್ನಪೂರ್ಣ ರೊಂದಿಗೆ ಪ್ರೇಮ ವಿವಾಹವಾಗಿದೆ, ಎಲ್ಲಾ ಇದ್ದರೂ ಮಕ್ಕಳಿಲ್ಲದ ಒಂದು ಕೊರತೆ ಮಾತ್ರ ಇದೆ. ಗುಪ್ತ ಕಾರ್ಯಾಚರಣೆ ಸಲುವಾಗಿ ಯುದ್ಧ ಭೂಮಿಯಲ್ಲಿರುವ ಅಚ್ಚಪ್ಪನಿಗೆ ಪತ್ನಿಯಾದ ಅನ್ನಪೂರ್ಣಳಿಂದ ಪತ್ರ ಬಂದಿದೆ, ಅದರಲ್ಲಿ ಈಗ ಅಚ್ಚಪ್ಪ ಜೊತೆಗೆ ಕಾರ್ಯಚರಣಗೆ ಬಂದಿರುವ ಕೊಡಗಿನವನಾದ ಮೋಹನನೆಂಬ ಯುವ ಸೈನಿಕನನ್ನು ದತ್ತು ಪುತ್ರನನ್ನಾಗಿ ಪಡೆಯುವ ಬಗ್ಗೆ ಅಚ್ಚಪ್ಪನ ಅಭಿಪ್ರಾಯ ಕೇಳಿದ್ದಾಳೆ. ಅದಕ್ಕೆ ಸಮ್ಮತಿಸಿ ಒಂದು ಮೃತ್ಯು ಪತ್ರ ಮತ್ತು ಅನ್ನಪೂರ್ಣಳಿಗೆ ಒಂದು ಪತ್ರವನ್ನು ಬರೆದು ಭದ್ರವಾಗಿ ಅವುಗಳನ್ನು ತನ್ನ ಹ್ಯಾವರಸ್ಯಾಕಿನಲ್ಲಿರಿಸಿದ. ಅಚ್ಚಪ್ಪ ನಿರ್ದಿಷ್ಟ ಕೆಲಸವನ್ನು ಸಾಧಿಸಿ, ಹಿಂತಿರುವಾಗ ಶತ್ರುಗಳ ಗುಂಡು ತಗುಲಿ, ಇನ್ನೂ ತಾನು ಬದುಕುಳಿಯುವ ಸಾಧ್ಯತೆ ಇಲ್ಲವೆಂದು ಹ್ಯಾವರಸ್ಯಾಕ್ನಲ್ಲಿದ್ದ ಪತ್ರಗಳನ್ನು ಅನ್ನಪೂರ್ಣಳಿಗೆ ತಲುಪಿಸಲು ಮೋಹನನಿಗೆ ಹೇಳಿ ಅಚ್ಚಪ್ಪ ಕೊನೆಯುಸಿರೆಳೆಯುತ್ತಾನೆ. ಉಳಿದ ಸೈನಿಕರ ಮೇಲೆ ಮತ್ತೆ ಶತ್ರುಗಳ ದಾಳಿ ಮಾಡಿದಾಗ ಮೋಹನ ಗಂಭೀರವಾಗಿ ಗಾಯಗೊಂಡು ಅನ್ನಪೂರ್ಣಳಿರುವ ಆಸ್ಪತ್ರೆಗೆ ಸೇರುತ್ತಾನೆ. ಮೇಜರ್ ವಿಲ್ಸನ್ ಮೂಲಕ ಅಚ್ಚಪ್ಪ ಬರೆದಿದ್ದ ಪತ್ರಗಳು ಮತ್ತು ಅಚ್ಚಪ್ಪನ ಮರಣದ ಸುದ್ದಿ ಅನ್ನಪೂರ್ಣ ಳಿಗೆ ತಿಳಿಯುತ್ತದೆ, ಅದೇ ಸಮಯದಲ್ಲಿ ಮೋಹನ ಸಹ ಕೊನೆ ಉಸಿರೆಳೆಯುತ್ತಾನೆ.
ಅನ್ನಪೂರ್ಣ ನಕ್ಕಳು, ನಕ್ಕೇ ನಕ್ಕಳು. ಇದ್ದ ಗಂಡ ಹೋಗಿದ್ದ, ಹೊಸದಾಗಿ ಬಂದಿದ್ದ ಮಗ ಹೋದ, ಒಂದರ ಮೇಲೊಂದು ಹೊಡೆತ. ಅನ್ನಪೂರ್ಣ ನಗತೊಡಗಿದಳು, ಅವಳ ನಗುವಿಗೆ ಕೊನೆಯೇ ಉಳಿಯಲಿಲ್ಲ. ಅನ್ನಪೂರ್ಣ ಹುಚ್ಚಿಯಾದಳು.

ಹೆಸರಾಂತ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಇದೇ ಕಥೆಯನ್ನ, ಹಲವು ಬದಲಾವಣೆಗಳೊಂದಿಗೆ, ಪ್ರಖ್ಯಾತ ನಟ ವಿಷ್ಣುವರ್ಧನ್ ಮತ್ತು ನಟಿ ಸುಹಾಸಿನಿ ಅವರ ಅಭಿನಯದಲ್ಲಿ, ‘ಮುತ್ತಿನಹಾರ’ ಎಂಬ ಚಲನಚಿತ್ರವನ್ನಾಗಿ ನಿರ್ದೇಶನ ಮಾಡಿದ್ದಾರೆ……

muttina haara

Uma Shankar

Advertisements