‘ಹಾಯ್ ಬೆಂಗಳೂರು’ ಪತ್ರಿಕೆಯಲ್ಲಿ ಪ್ರಕಟವಾದ ಅಂಕಣ ಬರಹಗಳ ಸಂಕಲನ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ದೊಡ್ಡ ಹೆಸರಾದ ನಾಗರಾಜ ಹವಾಲ್ದಾರ್ ಅವರ ಸಂಗೀತ ಯಾನದ, ರಸ ನಿಮಿಷಗಳ, ಸಂಗೀತಗಾರರ ಕುರಿತಾದ ಆಪ್ತ ಲೇಖನಗಳು.
ಎಲ್ಲೂ ಭಾರವೆನಿಸದ ರಸಾಸ್ವಾದನೆ ನೀಡುತ್ತದೆ. ಪಂಡಿತ ಭೀಮಸೇನ್ ಜೋಶಿ,ಪಂಡಿತ ಸವಾಯಿ ಗಂಧರ್ವ, ಗಂಗೂಬಾಯಿ ಹಾನಗಲ್ ಹೀಗೆ ಮೇರು ವ್ಯಕ್ತಿ ಚಿತ್ರಣ, ರಾಗ ಹುಟ್ಟುವ ಬಗೆ,ರಿಯಾಜ್ (ತಾಲೀಮು) ಬಗ್ಗೆ, ರಾಗ ವಿಸ್ತರಣ ಅಲ್ಲದೆ ಲೇಖಕರ ವೈಯಕ್ತಿಕ ಬದುಕಿನ ಚಿತ್ರಣವೂ ಚೆನ್ನಾಗಿ ಬಂದಿದೆ.  ಹಿಂದೂಸ್ತಾನಿ ಸಂಗೀತದ ಪರಿಚಯ ಇಲ್ಲದವರೂ, ಓದಿ ಖುಷಿಪಡುವ ಬರವಣಿಗೆ. ರಸಶೋಧ!

– Prashanth Bhat

Advertisements