ನೇಮಿಚಂದ್ರರ ಕತೆಗಳು

nemi

ನೇಮಿಚಂದ್ರರ ಪ್ರಸ್ತಾಪ ನಿನ್ನೆಯಷ್ಟೇ ಆಗಿದೆ…

ಅವರ ಈ ಕಥಾಸಂಕಲನ ನನಗೆ ತೀರ ಪ್ರಿಯವಾದ ಪುಸ್ತಕ. ಇಲ್ಲಿರುವ 24 ಕತೆಗಳು ಒಂದರಿಂದ ಒಂದು ಭಿನ್ನ ಕಥಾಹಂದರಗಳಾಗಿ, ಒಂದೊಂದೂ ತನ್ನ ವಿಶಿಷ್ಠ ಗುಣದಿಂದ ಸೆರೆಹಿಡಿದು ಬಿಡುವುದು…

ಇಲ್ಲಿನ ಕತೆಗಳ ಸ್ತ್ರೀಪಾತ್ರಗಳು ಹೊಸತಿಗೆ ತೆರೆದುಕೊಂಡು ಬದಲಾವಣೆ ಬಯಸಿದರೂ , ಕಟುವಾದ ಸ್ತ್ರೀಪರವಾಗಲೀ- ಪುರುಷವಿರೋಧಿಯಾಗಲೀ ಅಲ್ಲವೆಂದು ನನ್ನ ಅನ್ನಿಸಿಕೆ..ಕೌಟುಂಬಿಕ ವ್ಯವಸ್ಥೆಗಳು ಜಾಳಾಗಬಾರದೆಂಬ ಕಳಕಳಿ ಕಂಡು ಬರುತ್ತದೆ..ಸಾಮಾಜಿಕ ತಲ್ಲಣಗಳ ಕುರಿತು ವಿವೇಚನಾಯುಕ್ತ ಪರಿಹಾರಗಳನ್ನು ಕಂಡುಕೊಳ್ಳಬೇಕೆಂಬ ತುಡಿತ ಕಂಡು ಬರುತ್ತದೆ…ಮಾನವೀಯ ಮೌಲ್ಯ, ಸಂವೇದನೆಗಳು ಒಳ್ಳೆಯ ಬದುಕಿನ ತಳಹದಿಗಳೆಂಬ ವಿಶ್ಲೇಷಣೆ ಸೂಕ್ಷ್ಮವಾಗಿ ಗೋಚರಿಸುತ್ತದೆ…

ಎಲ್ಲಕ್ಕಿಂತ, ಇವು ಸುಮಧುರ ಭಾವಗೀತೆಗಳಂಥ ಭಾವಮಾಧುರ್ಯವನ್ನು ತುಂಬಿಕೊಂಡ ಕತೆಗಳಾಗಿವೆ..ಹೇಳುವ ರೀತಿ, ಭಾಷಾಶೈಲಿ, ಮನುಷ್ಯಪ್ರೀತಿಯ ಸಂವೇದನೆಗಳು ಸಮುದ್ರದ ಮಂದ ಅಲೆಗಳಂತೆ ನವಿರಾಗಿ ತೇಲಿತೇಲಿ ಬರುತ್ತಾ, ನಮ್ಮ ಮನಸ್ಸನ್ನು ಲಹರಿಯ ಗುಂಗಿಗೆ ಸಿಕ್ಕಿಸಿಬಿಡುತ್ತವೆ….

ಒಮ್ಮೆ ಇವುಗಳ ಲೋಕದಲ್ಲಿ ತಲೆ ತೂರಿಸಿದರೆ, ನಿರಾಯಾಸವಾಗಿ ಆ ಕತೆಗಳು ನಮ್ಮ ಮನಸ್ಸನ್ನು ತಮ್ಮ ತೆಕ್ಕೆಗೆ ಎಳೆದುಕೊಳ್ಳುತ್ತವೆ..

ಇದು ಉತ್ಪ್ರೇಕ್ಷೆಯಲ್ಲ ಎನ್ನುವುದು ನನ್ನ ದನಿ.. ಆಸಕ್ತರು ಓದಿ… ಒಳ್ಳೆಯ ಪುಸ್ತಕ…

-ಎಸ್.ಪಿ.ವಿಜಯಲಕ್ಷ್ಮಿ

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಕನ್ನಡ, ನೇಮಿಚಂದ್ರ, Uncategorized and tagged . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s