’ಆಯತನ’ – ಬ.ಲ.ಸುರೇಶ್

ಆಧ್ಯಾತ್ಮವನ್ನು, ಇತಿಹಾಸವನ್ನು ಒಟ್ಟಾಗಿಸಿಕೊಂಡು ಕಾದಂಬರಿ ಬರೆಯುವುದು ಬಹು ಸವಾಲಿನ ಕೆಲಸ. ಆಧ್ಯಾತ್ಮವನ್ನು ತಿಳಿಸುತ್ತಾ ಅದಕ್ಕೆ ಕಾಲ್ಪನಿಕ ಇತಿಹಾಸವನ್ನು ಸೇರಿಸಿ ಸರಾಗವಾಗಿ ಓದಿಸಿಕೊಂಡು ಹೋಗುವಂತೆ ಮಾಡುವ ಕಾದಂಬರಿಯೇ #ಆಯತನ.

ಶ್ರೀ ನಟೇಶ ಪೋಲೆಪಲ್ಲಿಯವರ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ಈ ಕಾದಂಬರಿಯನ್ನು ಶ್ರೀ ಬ.ಲ.ಸುರೇಶ್ ಅವರು ಚೆನ್ನಾಗಿ ಚಿತ್ರಿಸಿದ್ದಾರೆ. ನಟೇಶರೇ ಹೇಳಿಕೊಂಡಂತೆ, ತಮ್ಮ ಕನಸಿನಲ್ಲಿ ಕಂಡ ಚಿತ್ರಣವನ್ನು ಸರಿಯಾಗಿ ಜೋಡಿಸಿ ಒಂದು ಉತ್ತಮ ಕಾದಂಬರಿಯಾಗಿ ಕೊಟ್ಟಿದ್ದಾರೆ.

ಸ್ವಾತಂತ್ರ್ಯಕ್ಕೂ ಮುನ್ನಾದಿನಗಳ ಚಿತ್ರಣ, ಆ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕಥೆ—ವ್ಯಥೆ, ಇತ್ಯಾದಿ ವಿಷಯಗಳು ಈ ಕಾದಂಬರಿಯಲ್ಲಿವೆ. ಕಥಾನಾಯಕನಾದ ಕೀರ್ತಿಯು ಆಧ್ಯಾತ್ಮ, ಯೋಗ ಇತ್ಯಾದಿಗಳಲ್ಲಿ ಸಿದ್ದಿ ಪಡೆದು ತನ್ನ ಹೆಂಡತಿಯ ಜೊತೆಗೂಡಿ ದೇಹತ್ಯಜಿಸುವ ಮೂಲಕ ಮೋಕ್ಷಪಥಕ್ಕೆ ತೆರೆದುಕೊಳ್ಳುತ್ತಾನೆ.

ಕಾದಂಬರಿಯುದ್ದಕ್ಕೂ ವೇದ,ಉಪನಿಷತ್, ಶಂಕರಾಚಾರ್ಯ, ಬಸವಣ್ಣ,ವಿವೇಕಾನಂದರ ಸೂಕ್ತಿಗಳು ಬಳಕೆಯಾಗಿವೆ. ಒಂದು ಒಳ್ಳೆಯ, ಉತ್ತಮ ಕಾದಂಬರಿ

-Vighneshwara Manja Maranakatte

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಕನ್ನಡ, ಬ.ಲ.ಸುರೇಶ್, Uncategorized and tagged , , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s