‘ಹಳ್ಳಿಯ ಹತ್ತು ಸಮಸ್ತರು’ – ಶಿವರಾಮ ಕಾರಂತ

ಆ ಹಳ್ಳಿಯ ರಸಿಕರೂ, ಈ ಊರಿನ ಸಮಸ್ತರೂ !
=============================

ಒಬ್ಬನೇ ಕೂತಿದ್ದೇನೆ. ಬೋರಾಗುತ್ತಿದೆ. ಇದ್ದಕ್ಕಿದ್ದಂತೆ ಎದುರು ಬೀದಿಯಲ್ಲಿ ಬೊಂಬಾಯಿ ಮಿಠಾಯಿ ಮಾರುವವನ ಕೂಗು ಮತ್ತು ಘಂಟೆ ಸದ್ದು ಕರ್ಣ ಪಟಲಗಳಿಗೆ ಹಿತವಾಗಿ ತಾಕುತ್ತದೆ. ಹಿಂದಣ ಬೀದಿಯಲ್ಲಿ ಶೃತಿಬದ್ಧವಾಗಿ ಅಲ್ಲದಿದ್ದರೂ ಹಿತವಾಗಿ ನುಡಿಸುತ್ತಿದ್ದ ಸಂಕ್ರಾಂತಿಯ ಕೋಲೇ ಬಸವನ ಶಹನಾಯಿ ಕಲರವ ಹಾಗೇ ಕಿವಿಯ ಒಳಹೊಕ್ಕು ಮಿದುಳ ಒಳಹೊಕ್ಕು ಮೃದು ರೇಶಿಮೆ ಶಾಲಿನಲ್ಲಿ ಸುತ್ತಿದಂಥಾ ಬಾಲ್ಯದ ನೆನಪನ್ನು ತಾಕಿತು.

ಹಿಂದೆಯೇ ಊರ ನೆನಪು…… ಊರವರ ನೆನಪು……. ಊರ ಇಂಚಿಂಚಿನ ನೆನಪುಗಳ ಗುದಮುರಿಗೆ !

ತಕ್ಕಳಿ……ಮನಸು ಜೋಗದ ಜಲಪಾತ…. ! ಎದುರಿಗೆ ನೆನಪ ಪ್ರಪಾತ….. !

ಅದೇ, ಪೇಟೆ ಬೀದಿಯಲ್ಲಿ ಅಂಗಡಿ ಇಟ್ಟುಕೊಂಡಿದ್ದರಲ್ಲ…..ಅವರ ಹೆಸರೇನು ?? ಅಪ್ಪನ ಲೆಕ್ಕಕ್ಕೆ ಬರೆಸಿ, ಪೆಪ್ಪರ್ಮೆಂಟಿನ ಸುಳ್ಳು ಸಾಲ ತಂದಿದ್ದು ನೆನಪಿದೆ, ಆದರೆ ಆತನ ಹೆಸರು ನೆನಪಾಗುತ್ತಿಲ್ಲ.
ಆ ಗೌಳಿಗರ ಜಗ್ಗ, ತಮಟೆಯ ಅಮಾಸೆ, ಐಸ್ಕ್ಯಾಂಡಿ ಭೀಮಣ್ಣ, ರಾಜಪ್ಪ ಮೇಷ್ಟ್ರು, ಕನ್ನಡ ಪಂಡಿತ SNN, ಲಾಳ ಹೊಡೆಯುತ್ತಿದ್ದ ಅಲ್ಲೀ ಸಾಬ, ಸೈಕಲ್ ಶಾಪಿನ ಭಾಷಾ, ಗೌಡರ ನಾಗರಾಜ, ಗೊಲ್ಲರ ಪರಮೇಶಿ, ಕೊನೆ ಕೊಯ್ಲಿನ ರಾಜು, ಸೇರಿಗಾರ್ರ ಶಿವರಾಮ, ಹುಚ್ಚ ಈಶ್ವರ, ಶರಾಬು ಅಂಗಡಿ ಕೃಷ್ಣಪ್ಪ, ಕುಡುಕ ಕಿಟ್ಟಿ, ಇಂಜೆಕ್ಷನ್ ಕೊಡಲು ಶಾಲೆಗೆ ಬರುತ್ತಿದ್ದ ಲತಾ ಸಿಸ್ಟರ್ರು, ಮಾರಮ್ಮನ ಗುಡಿಯ ಪೂಜಾರಿ, ವರ್ಷದ ರಥೋತ್ಸವ, ಸುಗ್ಗಿ, ಮೂರು ವರ್ಷಕ್ಕೊಮ್ಮೆ ನಡೆಯುವ ಮಾರಮ್ಮನ ಜಾತ್ರೆ, ನಾನೇ ಕೆತ್ತಿದ ಬುಗುರಿ, ಗೆಳೆಯರೊಡನಾಡಿದ ಲಗೋರಿ, ಹುಸಿ ಜಗಳ, ಊಟ ಬಿಟ್ಟದ್ದು, SSLC ಪಾಸಾಗಿದ್ದಕ್ಕೆ ಅಮ್ಮ ಕೊಡಿಸಿದ ವಾಚು, ಅದರ ಡಯುಲ್ ನ ಕಲರ್ರು ….. ಉಫ್….. ನನಗೇ ಆಶ್ಚರ್ಯ ! ಎಲ್ಲರೂ, ಎಲ್ಲವೂ ನೆನಪಿದ್ದಾರೆ….. ಹೆಚ್ಚು ಕಡಿಮೆ……

“ಬಾರ್ ಬಾರ್ ಆತೀಹೈ ಮುಝ್ಕೋ ಮಧುರ್ ಯಾದ್ ಬಚಪನ್ ತೇರಿ……. ಗಯಾ ಲೇ ಗಯಾ ತೂ ಜೀವನ್ ಕೀ ಸಬ್ಸೇ ಮಸ್ತ್ ಖುಶೀ ಮೇರಿ……” ಮಾಧ್ಯಮಿಕ ಶಾಲೆಯಲ್ಲಿ ಓದಿದ ಸುಭದ್ರಾ ಕುಮಾರಿ ಚೌಹಾಣ್ ನೆನಪಾದರು !

ಆ ಬಾಲ್ಯಕ್ಕೆ ಮತ್ತೆ ಹೋಗಲಾಗುತ್ತಾ ? ಹುಟ್ಟಿದೂರಿಗೆ ಹೋಗಬೇಕೆಂದರೂ ಬರೋಬ್ಬರಿ 10-12 ಗಂಟೆಗಳ ಪ್ರಯಾಣ ಮಾಡಬೇಕು………. ಬದುಕೇನು ಟೈಮ್ ಮಷೀನಾ ಇಲ್ಲಾ ಹಾಲಿವುಡ್ ಸಿನಿಮಾನಾ ? ಸೆಕೆಂಡಿನಲ್ಲಿ ಬಾಲ್ಯಕ್ಕೋ ಹುಟ್ಟಿದೂರಿಗೋ ಹೋಗೋದಕ್ಕೆ…………

ಮತ್ತೆ ಬೋರಾಯಿತು…….. ಮೇಜಿನ ಮೇಲಿನ ಪುಸ್ತಕದ ರಾಶಿ ನೋಡಿದೆ. ಯಾವುದಾದ್ರೂ ಒಂದು ಓದಬಲ್ ಪುಸ್ತಕವಿದ್ಯಾ ?

ಒಂದೇನು…. ಎರಡು ಸಿಕ್ಕವು !!!!! ಪುಟ ತಿರುಗಿಸಿದೆ…….. ಅನಾಮತ್ತು ಸ್ವಾತಂತ್ರ್ಯ ಪೂರ್ವದಲ್ಲಿದ್ದೆ !! ಸೆಕೆಂಡುಗಳಲ್ಲಿ 70-80 ವರ್ಷಗಳ ಹಿಂಪಯಣ !!

ಇಬ್ಬರು ಲೇಖಕರೂ ಪಶ್ಚಿಮ ಘಟ್ಟದ ಸರೀ ಆಚೀಚಿನವರು. ಒಬ್ಬರು ನದೀ ತಟದ ಬದುಕನ್ನು ಕಂಡವರಾದರೆ, ಇನ್ನೊಬ್ಬರು ಶರಧಿಯು ಬಾಗಿಲಿಗೇ ಎಡತಾಕುವೆಡೆಯಲ್ಲಿ ಜೀವನ ಕಟ್ಟಿಕೊಂಡವರು. ಇಬ್ಬರೂ ಗಾಂಧಿವಾದಿಗಳು. ಇಬ್ಬರೂ ಮೂಢನಂಬಿಕೆಗಳ ವಿರುದ್ಧ, ಜಾತಿಪದ್ದತಿಯ ವಿರುದ್ಧ ಹೋರಾಡಿದವರು. ಇಬ್ಬರೂ ಹೆಚ್ಚು ಕಡಿಮೆ ಸಮವಯಸ್ಕರು ! ಕಾರಂತರು 1902ರಲ್ಲಿ ಹುಟ್ಟಿದ್ದರೆ, ಗೋರೂರರು 1904ರಲ್ಲಿ ಹುಟ್ಟಿದ್ದರು ! ಇಬ್ಬರೂ 90ರ ದಶಕದಲ್ಲೇ ತೀರಿಕೊಂಡರು (ಕಾರಂತ 1997. ಗೋರೂರು 1991) !!

ಗೋರೂರು ರಾಮಸ್ವಾಮಿ ಅಯ್ಯಂಗಾರರ ’ನಮ್ಮ ಊರಿನ ರಸಿಕರು’, ಲಲಿತ ಪ್ರಬಂಧ ಜಾತಿಯದ್ದು. ಸುಂದರ ಸುರಳೀತ ಸುಮಧುರ. ಭಾಷೆಯಾಗಲಿ, ವಸ್ತುವಾಗಲಿ, ನಗೆಯುಕ್ಕಿಸುತ್ತಲೇ ಮನದೊಳಗಿಳಿಯುತ್ತದೆ. ಅದು ನವಿಲುಗರಿಯ ಕಚಗುಳಿ !

halliya hattu samastaruಶಿವರಾಮ ಕಾರಂತರ ’ಹಳ್ಳಿಯ ಹತ್ತು ಸಮಸ್ಥರು’, ತೀರಾ ಸುರಳೀತವೂ ಅಲ್ಲದ ಅತ್ತ ಕಠಿಣವೂ ಅಲ್ಲದ ಮಾಹಿತಿಪೂರ್ಣ ಪುಸ್ತಕ. ಕಾರಂತರ ಪುಸ್ತಕಗಳ specialty & limitation ಅಂದ್ರೆ ಅವರು ಬಳಸುವ ಪದಗಳು. ಅವುಗಳ ಅರ್ಥ ತಿಳಿಯಬೇಕೆಂದರೆ ಡಿಕ್ಷನರೀನೇ ಹುಡುಕಬೇಕು ! ಆದರೆ ಕಾರಂತರ ಕೃತಿಗಳನ್ನು ಓದಿದ ಮೇಲೆ, ಅರ್ಥ ಮಾಡಿಕೊಂಡ ಮೇಲೆ ಬೇರೆಯವರ ಕೃತಿಗಳು ಸಪ್ಪೆ ಅನಿಸುತ್ತವೆ !

ಈ ಪುಸ್ತಕಗಳೆರಡೂ ದಿವಿನಾಗಿವೆ……… ಡಿವೈನಾಗಿವೆ !

ಎರಡನ್ನೂ ಓದಿದ ಮೇಲೆ ಪಾತ್ರಗಳು ಅಲ್ಲಿಂದಿಲ್ಲಿಗಾಗಿ ಗೊಂದಲವಾಗುವುದುಂಟು. ಅದು ಲೇಖಕರ ತಪ್ಪಲ್ಲ. ಅದು ಕೃತಿಗಳು ಆವರಿಸಿಕೊಳ್ಳುವ ಪರಿ !

’ರಸಿಕರು’ 142 ಪುಟಗಳ ಮತ್ತು ’ಸಮಸ್ಥರು’ 117 ಪುಟಗಳ, A best leisure reading ! ಕಳೆದು ಹೋಗುತ್ತೀರಿ……..ಬಿಲೀವ್ ಮಿ & ಟ್ರೈ ಇಟ್ !!

-ಸುಧೀರ್ ಪ್ರಭು

Uma Shankar ಈ ಪುಸ್ತಕಗಳ ಬಗ್ಗೆ ನಿಮ್ಮ ಬರಹ ಓದಿದಾಗ ನನಗೆ ನಾನೋದಿರುವ ಇದೇ ರೀತಿಯ ಬರಹಗಳ ಮ.ಶ್ರಿಧರಮೂರ್ತಿಯವರ ‘ನೆರೆಹೊರೆಯವರು’ ಹಾಗೂ ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರ ‘ ಬೈಲಹಳ್ಳಿಯ ಸರ್ವೆ’ ಮತ್ತು ‘ಗರುಡ ಗಂಭದ ದಾಸಯ್ಯ’ ಪುಸ್ತಕಗಳಲ್ಲಿ ಚಿತ್ರಿತವಾಗಿರುವ ಗ್ರಾಮೀಣ ಪರಿಸರದ ವ್ಯಕ್ತಿ ಚಿತ್ರಣದ ಸುಂದರ ದೃಶ್ಯಗಳು ಮತ್ತೆ ನೆನಪಿಗೆ ಬಂದವು…

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಕನ್ನಡ, ಶಿವರಾಮ ಕಾರಂತ, Uncategorized and tagged , , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s