’ಅಂಧಃಕಾರದಲ್ಲಿ ಸೂರ್ಯ’ – ಯಂಡಮೂರಿ ವೀರೇಂದ್ರನಾಥ

andhakaradalli sooryaಈ ವಿಶಾಲವಾದ ವಿಶ್ವದಲ್ಲಿ ನಿಗೂಢವಾಗಿಯೇ ಉಳಿದಿರುವ ಅನ್ಯಗ್ರಹಜೀವಿಗಳು ನಿಜಕ್ಕೂ ಇದ್ದಾರಾ? ಇದ್ದರೆ ಅವರಿಂದ ಭೂಮಿಗೆ ಯಾವ ರೀತಿಯ ತೊಂದರೆಗಳಾಗಬಹುದು? ಅಥವಾ ಅವರಿಂದ ಸಹಾಯವೇ ದೊರಕಬಹುದಾ? ಅವರ ವಿಜ್ಞಾನ ಮತ್ತು ತಂತ್ರಜ್ಞಾನ ನಮಗಿಂತ ಎಷ್ಟು ಮುಂದುವರೆದಿದೆ? ಇಂತಹ Scientific ಥ್ರಿಲ್ಲರ್ ಕಾದಂಬರಿಯೇ ಅಂಧಕಾರದಲ್ಲಿ ಸೂರ್ಯ.
ಯಂಡಮೂರಿಯವರ ಕಾದಂಬರಿಗಳಲ್ಲಿ ಪ್ರೀತಿ, ಪ್ರೇಮ ಮಾನವ ಸಂಬಂಧಗಳ ಬಗ್ಗೆ ಅದ್ಭುತವಾದ ವ್ಯಾಖ್ಯಾನಗಳನ್ನು ನೋಡಿದ್ದೇವೆ, ಹಾಗೇ ಇಂತಹ ವೈಜ್ಞಾನಿಕ ಕಥಾವಸ್ತುಗಳನ್ನಿಟ್ಟುಕೊಂಡ ಕಾದಂಬರಿಗಳೂ ಅದ್ಭುತವಾಗಿವೆ. ಯಾವ ಬಗೆಯ ಕಥಾವಸ್ತುಗಳೇ ಇರಲಿ ಸುಂದರ ನಿರೂಪಣೆಯೊಂದಿಗೆ ಓದುಗರಿಗೆ ಪ್ರಿಯರಾಗುತ್ತಾರೆ.

ಅವರ ಕಾದಂಬರಿಗಳಲ್ಲಿಯೇ ಮೊದಲು ಕನ್ನಡಕ್ಕೆ ಬಂದ ನಕ್ಷತ್ರ ಜಾರಿದಾಗ ಕಾದಂಬರಿ ಓದಿ,ನಿಜಕ್ಕೂ ಆಶ್ಚರ್ಯಗೊಂಡಿದ್ದೆ, ಈ ಬಗೆಯ ಥ್ರಿಲ್ಲರ್ ಕಾದಂಬರಿಗಳು ಅಲ್ಲಿಯವರೆಗೆ ಓದಿರಲಿಲ್ಲ. ಅಂಧಕಾರದಲ್ಲಿ ಸೂರ್ಯ ಓದಿದಾಗಲಂತೂ ನಭೋಮಂಡಲದ ವೈಚಿತ್ರ್ಯಗಳು, ಮುಂದುವರಿದ ವಿಜ್ಞಾನ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ವಿಜ್ಞಾನಿಗಳು ಮೊದಲಾದವುಗಳ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸಿದೆ.

ವಸ್ತುಗಳಿಂದ ಶಕ್ತಿಯನ್ನು ಸೃಷ್ಟಿಸುವಾಗ, ಶಕ್ತಿಯಿಂದ ವಸ್ತುಗಳನ್ನು ಸೃಷ್ಟಿಸಬಹುದು, ಹಾಗೇ ತಮಗೆ ಬೇಕಾದ ಶಕ್ತಿಯನ್ನು ಗ್ರಹಗಳಿಂದ, ನಕ್ಷತ್ರಗಳಿಂದ ಪಡೆಯಲು ಅಲ್ಫಾ ಗ್ರಹವಾಸಿಗಳು ಸೂರ್ಯನನ್ನು ಬಳಸಲು ಯತ್ನಿಸುತ್ತಾರೆ. ಬೇಕಾದಷ್ಟು ದೊಡ್ಡ ದೊಡ್ಡ ನಕ್ಷತ್ರಗಳಿರುವಾಗ ಸೂರ್ಯನನ್ನೇ ಆರಿಸಿಕೊಳ್ಳಲು ಏನು ಕಾರಣ? ಸೂರ್ಯನ ಶಕ್ತಿ ಅವರು ದೋಚಿಕೊಂಡರೆ ಸೂರ್ಯನ ಶಕ್ತಿಯಿಂದಲೇ ಭೂಮಿಯ ಮೇಲೆ ಬದುಕುತ್ತಿರುವ ಕೋಟ್ಯಂತರ ಜೀವಿಗಳ ಗತಿಯೇನು? Inter Planetary Society ಗೆ ತಮ್ಮ ದೂರು ನೀಡಲು ಅಂತರಿಕ್ಷ ಯಾನಕ್ಕೆ ತೆರಳುವ ಐದು ಜನರ ಪಯಣವನ್ನು, ಅನಂತಾನಂತ ಶೂನ್ಯದಲ್ಲೂ, ಮರಳಿ ಬರುವ ಸಾಧ್ಯತೆ ಇಲ್ಲದ ಲಕ್ಷ ಕೋಟಿ ಮೈಲಿಗಳ ಪ್ರಯಾಣದಲ್ಲೂ,ಅನೂಹ್ಯ, ಯಶ್ವಂತ್, ವಾಯುಪುತ್ರನ ನಡುವಿನ ಪ್ರೀತಿ ಪ್ರೇಮದಂತಹ ಮಾನವ ಸಹಜ ಭಾವನೆಗಳು, ಮಾನಸಿಕ ಗೊಂದಲಗಳು, ಸಂದಿಗ್ಧ ಪರಿಸ್ಥಿತಿಗಳು, ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ.
ಕಾದಂಬರಿಯ ಅಂತ್ಯದಲ್ಲಿ ತಮ್ಮ ಶಕ್ತಿಗೆ ಅಲ್ಪಾ ಗ್ರಹವಾಸಿಗಳು ಸೂರ್ಯನನ್ನೆ ಆರಿಸಿಕೊಳ್ಳಲು ಕೊಡುವ ಕಾರಣ, ನಿಜಕ್ಕೂ ಬೆಚ್ಚಿಬೀಳಿಸುವಂತದ್ದು. ಆಧುನಿಕತೆಯ ಕಡೆಗೆ ದಾಪುಗಾಲು ಹಾಕುತ್ತಾ, ತಮ್ಮ ಸ್ವಾರ್ಥಕ್ಕಾಗಿ ಪ್ರಾಣಿಸಂಕುಲಗಳನ್ನು ನಿರ್ದಯವಾಗಿ ಕೊಲ್ಲುತ್ತಿರುವ ಮಾನವ ಕುಲದ ವರ್ತನಗಳ ಬಗ್ಗೆ ತಲೆತಗ್ಗಿಸುವಂತೆ, ಒಮ್ಮೆ ಯೋಚಿಸುವಂತೆ ಮಾಡುತ್ತದೆ.
ಅಂತರಿಕ್ಷ ಯಾನದ ಅಪಾಯಗಳು, ಸಾಹಸಗಳು ರೋಚಕವಾಗಿ ಓದಿಸಿಕೊಂಡು ಹೋಗುತ್ತದೆ.

ಒಂದೇ ಕಂತಿನಲ್ಲಿ ಓದಿ ಮುಗಿಸಬಹುದಾದ ಕಾದಂಬರಿ, ರೋಚಕತೆಯ ಜೊತೆಗೆ ಲೇಖಕರ ಆಳವಾದ ವಿಚಾರ, ವಿಶ್ಲೇಷಣೆ, ಕಾದಂಬರಿಯ ಗುಂಗಿನಿಂದ ಆಚೆ ಬರಲು ಬಿಡದೇ ತನ್ನ ಆಕರ್ಷಣೆಯ ಸುತ್ತ ಸುತ್ತುವಂತೆ ಮಾಡುತ್ತದೆ.

-ಕವಿತಾ ಭಟ್

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಕನ್ನಡ, ಯಂಡಮೂರಿ ವೀರೇಂದ್ರನಾಥ್, Uncategorized and tagged , , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s