karedare bareಯತಿರಾಜ್ ವೀರಾಂಬುಧಿ ಅವರ ಈ ಕಾದಂಬರಿ ಸೀತಾಪತಿ ಎಂಬ ಕಿತಾಪತಿಯಿಂದ ಶುರುವಾಗುತ್ತದೆ.. ಭಾನು ಎಂಬ ಕಥೆಯ ನಾಯಕಿಯ ಅಪಹರಣದಿಂದ ಶುರು ಆಗುತ್ತದೆ ಈ ಕಥೆ.. ಭೂತಕಾಲದ ಜೊತೆಗೆ ವರ್ತಮಾನವನ್ನು ನಡೆಸಿಕೊಂಡು ಹೋಗುತ್ತದೆ.. ಕನ್ನಡದ ಜನಪ್ರಿಯ ಹಾಡುಗಳನ್ನ ತುಂಬಾ ಮನೋಹರವಾಗಿ ಈ ಕಾದಂಬರಿಯಲ್ಲಿ ಬಳಸಲಾಗಿದೆ.. ಜೊತೆಗೆ ಡಿವಿಜಿ ಅವರ ಮಂಕುತಿಮ್ಮನ ಕಗ್ಗವೂ ಇದೆ.. ಭಾನು ಸಮರಸಿಂಹರ ವಾದ ವಿವಾದಗಳು ಎಲ್ಲೋ ಒಮ್ಮೆ ನಮ್ಮ ಕಾಲೇಜು ದಿನಗಳನ್ನ ನೆನಪು ಮಾಡಿಸುತ್ತವೆ.. ಹಾಸ್ಯಮಯವಾಗಿ ಒಂದಷ್ಟು ಥ್ರಿಲ್ ಒಳಗೊಂಡಿದೆ.. ಆದರೆ ಸೀತಾಪತಿಯಂತಹ ಗಂಡ ಯಾವ ಹೆಣ್ಣಿಗೂ ಯೋಗ್ಯನಲ್ಲ.. ಒಮ್ಮೆ ಇದನ್ನು ಓದಬಹುದು.. ಕನ್ನಡ ಹಾಡುಗಳೊಂದಿಗೆ ಓದಿಸಿಕೊಂಡು ಹೋಗುವ ಕಾದಂಬರಿ “ಕರೆದರೆ ಬಾರೆ”

-ಸ್ವಾತಿ ಹೆಗಡೆ

Advertisements