‘ಕಿರಗೂರಿನ ಗಯ್ಯಾಳಿಗಳು’ – ಕೆ. ಪಿ. ಪೂರ್ಣಚಂದ್ರ ತೇಜಸ್ವಿ

KG

 

ದಿವ೦ಗತ ಶ್ರೀ ಪೂರ್ಣಚ೦ದ್ರ ತೇಜಸ್ವಿಯವರ ‘ಕಿರಗೂರಿನ ಗಯ್ಯಾಳಿಗಳು’ ಓದಿದೆ..ತು೦ಬಾ ಚೆನ್ನಾಗಿ..ಸು೦ದರವಾಗಿ ಮಲೆನಾಡಿನ ಜೀವನದ ದಿನ ನಿತ್ಯದ ಬದುಕಿನಲ್ಲಿ ಯಾವ ಯಾವ ರೀತಿಯ ರೋಧ ಪ್ರತಿರೋಧದ ತಿಕ್ಕಾಟಗಳು..ವಾಚಾಮಗೋಚರ ಬೈಗುಳಗಳು..ಒಬ್ಬರಮೇಲೊಬ್ಬರ ಕೆಸರೆರಚಾಟಗಳು ನಡೆಯುತ್ತವೆ ಚಿತ್ರಿಸಿದ್ದಾರೆ..ಆದರೆ ನನ್ನ ಹುಟ್ಟು ಮಲೆನಾಡಿನ ಸೆರೆಗಿನಲ್ಲಿಯೇ ಆದ್ದರಿ೦ದ ಆ ಪರಿಸರವನ್ನು ಕ೦ಡು ಬೇಳೆದದ್ದರಿ೦ದ ಈ ಲೇಖನದಲ್ಲಿಯ ಬರುವ ಘಟನೆಗಳು ನನಗೆ ವಿಶೇಷತೆಯೆನಿಸುವುದಿಲ್ಲ…ಇದರ ಬಾಹ್ಯದಲ್ಲಿ ಬೆಳೆದವರಿಗೆ ಇದರಲ್ಲಿಯ ಘಟನೆಗಳು…ಸ೦ವಾದಗಳು ಒ೦ದು ತರಹದ ಮಜವನ್ನು ಕೊಡಬಹುದು..ಓದಿ..ಪೂರ್ಣಚ೦ದ್ರರವರ ಅತ್ಯ೦ತ ಸರಳ ಭಾಷೆಯ..ಮಲೆನಾಡಿನ ಆಗಿನ ನೈಜ ಚಿತ್ರಣದ ಸವಿಯನ್ನ ಆಸ್ವಾದಿಸಬಹುದು….

ಈಗೆರಡು ದಿವಸಗಳ ಹಿ೦ದೆ ಮತ್ತೊ೦ದು ಅತ್ಯುತ್ತಮ ಪುಸ್ತಕ ಓದಿ ಮುಗಿಸಿದೆ..ವಿಠಲ್ ವೆ೦ಕಟೇಶ್ ಕಾಮತ್ ರವರ ‘ಇಡ್ಲಿ,ಆರ್ಕಿಡ್ ಮತ್ತು ಆತ್ಮಬಲ’.ಅದ್ಭುತ ಪುಸ್ತಕ..ವಿಠಲ್ ವೆ೦ಕಟೇಶ್ ಕಾಮತ್ ರವರು ಮೂಲತ: ಉದ್ಯಮಿ. ಮು೦ಬೈಯಲ್ಲಿಯ ಸ್ಟಾರ್ಸ್ ಹೊಟೆಲ್ ಗಳಲ್ಲಿ ಒ೦ದಾದ ‘The Orchid Ecotel Hotel’ನ ಮಾಲಿಕರು.ಅವರು ಬರೆದ ಈ ಪುಸ್ತಕದಲ್ಲಿ ತಾವು ತುಳಿದು ಬ೦ದ ಹೋರಾಡಿದ ಜೀವನ ಗಾಥೆಯ ಜೀವನ ಚರಿತ್ರೆಯನ್ನೇ ಬಿ೦ಬಿಸಿದ್ದಾರೆ..ಅವರ ಕುಟು೦ಬದ ದುರ್ದಿನಗಳನ್ನ,ಅವರು ತನ್ನ ಹುಟ್ಟನ್ನ ಸಾರ್ಥಕಗೊಳಿಸಿಕೊಳ್ಳಲು ಪಟ್ಟ ಕಷ್ಟ ಕಾರ್ಪಣ್ಯಗಳನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ….ಓಬೆರೊಯ್ ಹೊಟೆಲ್ ಗೆ ಸರಿಸಮಾನವಾಗಿ ಒ೦ದು ಹೊಟೆಲ್ ನ್ನು ಕಟ್ಟುವ ಅವರ ಹರಸಾಹಸದ ಹಿ೦ದಿರುವ ಅವರ ಸಾಹಸದ ಧೈರ್ಯವನ್ನು ಈ ಪುಸ್ತಕದ ರೂಪದಲ್ಲಿರುವ ಪ್ರತಿಯೊ೦ದು ಸಾಲನ್ನು ಓದಿದರೆ ಮೈ ಝುಮ್ ಎನ್ನುತ್ತದೆ..ನನಗೂ ಈ ಪುಸ್ತಕದ ತಲೆಬರಹವನ್ನು ನೋಡಿ,ವಿಚಿತ್ರವೆನಿಸಿತ್ತು..ಲೈಬ್ರರಿಯನ್ ರ ಒತ್ತಾಯದ ಮೇರೆಗೆ ತ೦ದು ಓದಿದಾಗ ಇಷ್ಟು ದೊಡ್ಡ ಉದ್ಯಮಿಯ ಹಿ೦ದೆ ಇಷ್ಟು ಕಠೋರ ಯಶೋಗಾಥೆಯ ಇದೆಯೆ೦ದಾಗ ನನ್ನ ಮನಸ್ಸು ಒ೦ದು ಸಲ ಹಿ೦ಡಿದ೦ತಾಯ್ತು…ದಯವಿಟ್ಟು ದಯವಿಟ್ಟು ಓದಿ….ನನಗೆ ತು೦ಬ ತು೦ಬ ಇಷ್ಟವಾದ ಪುಸ್ತಕ…

– ಸೀತಾ ಹೆಗ್ಡೆ

 

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಕನ್ನಡ, ಪೂರ್ಣಚಂದ್ರ ತೇಜಸ್ವಿ, Uncategorized and tagged , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s