ಒಂದು ಮನ ಮಿಡುಯುವ ಕಥೆ ಬರೆದಿದ್ದೇನೆ ಹೇಗಿದೆ ಹೇಳಿ
ಸಿಗರೇಟ್ ಹೊಗೆಯನ್ನು ಸುರುಳಿ ಸುರುಳಿಯಾಗಿ ಬಿಡುತ್ತ ಡಿಸೆಂಬರ್ ತಿಂಗಳ ಹಿತವಾದ ಬಿಸಿಲಿನಲ್ಲಿ ಆಫೀಸ್ನಲ್ಲಿ ಲಂಚ್ ಮುಗಿಸಿ ಹಾಗೆಯೇ ಬಳಿಯಿದ್ದ ಪಾರ್ಕ್ ಬಳಿಯ ರಸ್ತೆಯಲ್ಲಿ ಅಡ್ಡಾಡುತ್ತಿದ್ದ ವಿಜಯನಿಗೆ ಹೊಗೆಯ ಘಾಟು ಮೂಗಿಗೆ ಏರಿ ಒಂದು ಬಗೆಯ ಖುಷಿಯನ್ನು ನೀಡಿತು.ಎರಡು ವರ್ಷದ ಹಿಂದೆಯಷ್ಟೇ ಬಿ.ಇ ಮುಗಿಸಿ ಸ್ಯಾಂಸಂಗ್ ಕಂಪನಿ ಸೇರಿದ್ದ ಅವನ ಜೇವನ ಬಹಳ ಆನಂದದಾಯಕವಾಗಿ ನಡೆಯುತ್ತಿತ್ತು.ಊರಿನಲ್ಲಿದ್ದ ಅಮ್ಮ ಮತ್ತು ತಂಗಿಗೆ ಒಂದಷ್ಟು ಹಣ ಕಳಿಸುವುದಷ್ಟೇ ಅವನ ಜವಾಬ್ದಾರಿ. ಉಳಿದ ದುಡ್ಡನ್ನೆಲ್ಲ ತನ್ನ ಮೋಜು ಮಸ್ತಿಗೆಂದು ಖರ್ಚುಮಾಡಿಕೊಂಡು ಹಾಯಾಗಿ ಓಡಾಡಿಕೊಂಡಿದ್ದ ಅವನಿಗೆ ಈ ವಾರದ ಕೊನೆಯಲ್ಲಿ ಯಾವ ಸಿನಮಕ್ಕೆ ಹೋಗುವುದು ರೆಸ್ಟೋರೆಂಟಿಗೆ ಹೋಗುವುದು ಎಲ್ಲಿ ಕ್ರಿಕೆಟ್ ಮ್ಯಾಚ್ ಫುಟಬಾಲ್ ಮ್ಯಾಚ್ ಎಂಬುದನ್ನು ಬಿಟ್ಟರೆ ಬೇರೆ ಆಲೋಚನೆಯೇ ತಲೆಯಲ್ಲಿ ಇರುತ್ತಿರಲಿಲ್ಲ ಇತ್ತೀಚೆಗೆ ಅವನಿಗೆ ಕಾರಿನ ಗೀಳು ಹತ್ತಿಸಿದ ಸ್ನೇಹಿತರಿಂದಾಗಿ ಅವನು ಹೊಸ ಕಾರ್ ಕೊಳ್ಳುವ ಆಲೋಚನೆಯಲ್ಲಿದ್ದ ಅದರ E.M .I ಎಲ್ಲ ವಿಚಾರಿಸಿ ತನಗೆ ಹೊಂದುವ ಕಾರ್ ಒಂದನ್ನು ಸೆಲೆಕ್ಟ್ ಮಾಡಿದ್ದ ಅವನು ಇನ್ನೇನು ಅದಕ್ಕೆ ಅಡ್ವಾನ್ಸ್ ಕೊಡಲು ಸಂಜೆ ಹೋಗಬೇಕಾಗಿತ್ತು.ಹೀಗೆ ರಂಗು ರಂಗಿನ ಬದುಕಿನೊಂದಿಗೆ ಖುಷಿಯಾಗಿ ಓಡಾಡಿಕೊಂಡು ಇದೇ ಯೋಚನೆಯಲ್ಲಿ ವಾಕ್ ಮಾಡುತ್ತಿದ್ದ ಅವನ ಎದುರು ದುತ್ತೆಂದು ಭೈರಾಗಿ ಒಬ್ಬ ಬಂದು ನಿಂತ. ಕಣ್ಣಿಗೆ ರಾಚುವಂತೆ ವಿಭೂತಿ ಕುಂಕುಮ ಧರಿಸಿ ಅಘೋರಿಯಂತೆ ಕಾಣಿಸುತ್ತಿದ್ದ ಅವನು ತೀಕ್ಷ್ಣವಾದ ಸುಡುವಂಥ ಕಣ್ಣುಗಳಿಂದ ವಿಜಯನನ್ನು ನೋಡುತ್ತಾ ನಿಂತ. ಅವನನ್ನು ಕಂಡು ವಿಜಯ್ ಒಂದು ಕ್ಷಣ ಬೆಚ್ಚಿದರು ಕೂಡಲೇ ಚೇತರಿಸಿಕೊಂಡು ಭೈರಾಗಿ ಪಕ್ಕದಲ್ಲಿ ನುಸುಳಿ ಹೋಗಲು ಪ್ರಯತ್ನಿಸಿದ ಅವನಿಗೆ ಬೈರಾಗಿಯ ಕೈ ತಡೆಯಿತು, ಥತ್ ಇವನದೊಂದು ಕಿರಿ ಕಿರಿ ಎಂದು ಜೇಬಿಗೆ ಕೈಹಾಕಿ ತಕ್ಷಣಕ್ಕೆ ಸಿಕ್ಕಿದ ೧೦೦ರ ನೋಟೊಂದನ್ನು ಅವನತ್ತ ತೂರಿ ಮುಂದೆ ಹೆಜ್ಜೆ ಹಾಕಿದ. ಮತ್ತೆರಡು ನಿಮಿಷದಲ್ಲಿ ಅದೇ ಭೈರಾಗಿ ಮುಂದೆ ಪ್ರತ್ಯಕ್ಷ ಆದಾಗ ವಿಜಯನಿಗೆ ರೇಗಿತು ಏನಯ್ಯ ಆಗಲೇ ಕಾಸು ಕೊಟ್ಟೆನಲ್ಲ ಮತ್ತೇನು ನಿನ್ನದು ಪಿರಿ ಪಿರಿ ಎಂದು ಸಿಡುಕಿ ಅವನತ್ತ ನೋಡಿದ ಅದಕ್ಕುತ್ತರವಾಗಿ ಮುಗುಳ್ನಕ್ಕು ಅವನನ್ನು ನೋಡಿದ ಬೈರಾಗಿ ನೋಡು ಮಗು ನೀನು ಕೈ ಬಿಚ್ಚಿ ನೂರು ರೂಪಾಯಿ ಕೊಟ್ಟಿದ್ದೀಯ ಅದಕೆ ನಿನ್ನ ಕೋರಿಕೆಯನಾದರೂ ತೀರಿಸಬೇಕು ಎನ್ನಿಸಿತು ಅದಕ್ಕೆ ಮತ್ತೆ ಬಂದೆ ಹೇಳು ನಿಂಗೆಂದರೂ ಕೆಲಸ ಆಗಬೇಕೆಂದಿದ್ದರೆ ನಾನು ಮಾಡಿಸುತ್ತೇನೆ ಎಂದ. ಕೂಡಲೇ ಗಹಗಹಿಸಿ ನಕ್ಕ ವಿಜಯ್ ಅಲ್ಲ ನೀನೇ ಒಬ್ಬ ತಿರುಪೆ ಎತ್ತೋ ಭೈರಾಗಿ ನೀನು ನಂಗೇನು ಕೊಡ್ತಿಯಪ್ಪ ಹೆಚ್ಚೆಂದರೆ ನಿನ್ನ ಹರಿದ ಜೋಳಿಗೆ ಇಲ್ಲ ಕಿತ್ತು ಹೀಗಿರೋ ಈ ನಿನ್ನ ಚೊಂಬು, ಇವೆಲ್ಲ ಅಂತೂ ನನಗೆ ಬೇಡ ಹಾಗಾಗಿ ಮರ್ಯಾದೆಯಾಗಿ ಕೊಟ್ಟ ನೂರರಲ್ಲಿ ಏನಾದರೂ ತಿಂದು ಯಾವದಾದರು ಮೂಲೆ ಸೇರಿಕೋ ಇಲ್ಲ ಅಂದರೇ ಅದನ್ನೂ ಕಿತ್ತು ಕೊಂಡೇನು ಹುಷಾರ್! ಇವನ ಬೆದರಿಕೆಗೆ ಮಣಿಯದ ಬೈರಾಗಿ ಆಯಿತು ಮಗು ನಿಂಗೆ ನಂಬಿಕೆ ಇಲ್ಲದಿದ್ದರೂ ಪರವಾಗಿಲ್ಲ ನನಗೆ ನನ್ನ ದೈವದಿಂದ ನಿಂಗೆ ಒಂದು ಸಹಾಯ ಮಾಡಲು ಅಪ್ಪಣೆಯಾಗಿದೆ ನೀನು ಕೇಳದಿದ್ದರೂ ನಾನೇ ನಿನಗೊಂದು ವಿಶೇಷ ಶಕ್ತಿ ಕೊಡುತ್ತೇನೆ ಅದರಿಂದ ಇನ್ನು ಮುಂದಿನ ಐದು ನಿಮಿಷದಲ್ಲಿ 20 ವರ್ಷದ ಹಿಂದೆ ತೀರಿಕೊಂಡ ನಿನ್ನ ಅಪ್ಪ ನಿನ್ನ ಮುಂದೆ ಪ್ರತ್ಯಕ್ಷ ಆಗಿ ನಿನ್ನೊಂದಿಗೆ ೧೦ ನಿಮಿಷ ಇರುತ್ತಾರೆ ಅವರೊಂದಿಗೆ ನೀನು ಏನು ಬೇಕಾದರೂ ಮಾತನಾಡಬಹುದು ನಾನು ಹೊರಟೆ ಎಂದ ಬೈರಾಗಿಯನ್ನು ತಡೆದು ನಿಲ್ಲಿಸಿದ ವಿಜಯ್ ಆಶ್ಚರ್ಯದಿಂದ ಅಲ್ಲ ೨೦ ವರ್ಷದ ಹಿಂದೆ ನನ್ನ ತಂದೆ ತೀರಿಕೊಂಡ್ರು ನಿನಗೆ ಹೇಗೆ ಗೊತ್ತಾಯ್ತು ನಿಜವಾಗಿ ಈಗ ನೀನು ಹೇಳಿದ್ದೆಲ್ಲ ಆಗುತ್ತಾ ಎಂದು ಬೆರಗು ಗಣ್ಣಿನಿಂದ ಕೇಳಿದ ಹೌದಪ್ಪ ನಿನ್ನಷ್ಟೇ ಸತ್ಯ ಎಲ್ಲಿ ಒಂದು ಕ್ಷಣ ಆ ಉರಿಯುವ ಸೂರ್ಯನ ಕಡೆ ನೋಡು ಎಂದ ಅದರಲ್ಲೇನು ವಿಶೇಷ ಎಂದು ಅತ್ತ ತಿರುಗಿ ಮತ್ತೆ ಇತ್ತ ತಿರುಗುವಷ್ಟರಲ್ಲಿ ಭೈರಾಗಿ ನಾಪತ್ತೆ.ಹುಂ ಯಾರೋ ಹುಚ್ಚ ಏರಬೇಕು ನಾನು ಅವನ ಮಾತು ಕೇಳುತ್ತ ಟೈಮ್ ವೇಸ್ಟ್ ಮಾಡಿದೆ ಎಂದು ಹೆಜ್ಜೆ ಹಾಕಿದ ವಿಜಯ್ ಮತ್ತೆರಡು ನಿಮಿಷದಲ್ಲಿ ಅವನನ್ನು ಮರೆತೇ ಬಿಟ್ಟ . ಪುನ್ಹ ಸಿಗರೇಟ್ ಸುರುಳಿಯೊಂದಿಗೆ ಕಾರಿನ ಬಗ್ಗೆ ಕನಸ್ಸು ಕಾಣಲಾರಂಭಿಸಿದ ಅವನನ್ನು ಪಕ್ಕದಲ್ಲೇ ಗೊರ ಗೊರ ಕೇಮ್ಮೊಂದು ಈ ಲೋಕಕ್ಕೆ ಮರಳಿ ತಂದಿತು.. ಯಾರೆಂದು ನೋಡಿದಾಗ ಅವನೊಂದಿಗೆ ಹೆಜ್ಜೆ ಹಾಕುತ್ತಿದ್ದ ಸುಮಾರು ೩೫ ರ ಪ್ರಾಯದ ವ್ಯಕ್ತಿ ಅವನನ್ನೇ ನೋಡಿ ಮುಗುಳ್ನಕ್ಕಿತು ಇವನನ್ನು ಎಲ್ಲೋ ನೋಡಿದೆನಲ್ಲ ಎಂದು ಯೋಚಿಸುತ್ತಿದ್ದಾಗ ತಮ್ಮ ಮನೆಯಲ್ಲಿ ನೇತುಹಾಕಿದ್ದ ,ಕೂದಲನ್ನು ನೀಟಾಗಿ ಹಿಂದೆ ಬಾಚಿ ಮುಗುಳ್ನಗು ಬೀರುತ್ತಿದ್ದ ಅವನ ಅಪ್ಪನ ಫೋಟೋ ನೆನಪಿಗೆ ಬಂತು ಹಾಗಾದರೆ ಇದು ಎಂದು ಮತ್ತೆ ಅವನತ್ತ ನೋಡಿದಾಗ ಅದೇ ನಗುವಿನೊಂದಿಗೆ .ಹೌದು ಮಗು ಅದು ನಾನೇ ನಿನ್ನ ಅಪ್ಪ ಎಂದಾಕ್ಷಣ ಇವನಿಗೆ ಮೈಯೆಲ್ಲಾ ಅದುರಿದಂತಾಯ್ತು. ಅಲ್ಲ ಇದು ಸತ್ಯವೇ ಎಂದು ಚಿವುಟಿ ನೋಡಿಕೊಂಡ ಅವನು ಐದು ನಿಜ ಎಂದು ಗೊತ್ತಾಗಿ ಕಣ್ಣು ತುಂಬಾ ನೀರು ತುಂಬಿಕೊಂಡು ಅಪ್ಪ ಎಂದ.. ಅಷ್ಟೇ ಮುಂದೆ ಮಾತನಾಡಲು ಧ್ವನಿ ಹೊರಡಲಿಲ್ಲ. ಹಾ ಮಗು ನಾನೇ ಹೆಚ್ಚು ಉದ್ವೇಗಕ್ಕೆ ಒಳಗಾಗುವ ಅಗತ್ಯವಿಲ್ಲ ಯಾಕೆಂದರೆ ನಾನು ನಿನ್ನೊಂದಿಗಿರುವಿದು ೧೦ನಿಮಿಷ್ ಮಾತ್ರ ಏನಾದರು ಕೇಳಬೇಕೆಂದಿದ್ದರೆ ಕೇಳು ಎಂದಾಕ್ಷಣ ಇವನಿಗೆ ಮೈಯೆಲ್ಲಾ ಪುಳಕವಾಗಿ ಅಪ್ಪ ನೀವೀಗ ಎಲ್ಲಿದ್ದೀರಿ ಅಲ್ಲಿ ಯಾರೆಲ್ಲ ಇದ್ದಾರೆ ಎಂದೆಲ್ಲ ಶುರು ಮಾಡಿದ ನೋಡು ಮಗು ನನ್ನ ಈಗಿನ ಬಗ್ಗೆ ನೀನು ಏನೇ ಪ್ರಶ್ನೆ ಕೇಳಿದರು ಅದಕ್ಕುತ್ತರ ನನ್ನ ಮೌನ ಅಷ್ಟೇ . ಅದನ್ನು ಬಿಟ್ಟು ಬೇರೆ ಏನಾದರು ಕೇಳುವ ಆಸೆ ಇದ್ದಾರೆ ಕೇಳು. ಕೂಡಲೇ ಅವನಿಗೆ ನೆನ್ನೇಯಷ್ಟೇ ಸ್ನೇಹಿತರೆಲ್ಲ ಅವರರವರ ತಂದೆಯ ಬಗ್ಗೆ ಚರ್ಚೆ ಮಾಡಿದ್ದು ನೆನಪಿಗೆ ಬಂದಿದ್ತು.ಎಲ್ಲರೂ ನಮ್ಮ ಅಪ್ಪ ನನಗೆ ಚಿಕ್ಕವನಿದ್ದಾಗ ಪ್ಲೆ ಸ್ಟೇಷನ್ ಕೊಡಿಸದ್ದರು ,ಸೈಕಲ್, ಮೋಟಾರ್ ಸೈಕಲ್ ಎಂದೆಲ್ಲ ಮಾತನಾಡಿದರೆ ಇವನ ಬಳಿ ಅಂತಹ ನೆನಪುಗಳು ಯಾವುದು ಇರಲಿಲ್ಲ ಅವನಿಗೆ ಅಪ್ಪ ಎಂದರೆ ನೆನಪಾಗುವುದು ಒಂದೇ, ಮೂರು ಹೊತ್ತು ತನಗೆ ದನಕ್ಕೆ ಬಡಿಯುವಂತೆ ಹೊಡೆಯುತ್ತಿದ್ದುದು,ಅದೇ ಮತ್ತೆ ನೆನಪಿಸಿಕೊಂಡು ಸಿಟ್ಟಿನಿಂದ ಅಲ್ಲಪ್ಪ ನೀವು ನನಗೆ ಎಷ್ಟೊಂದು ಹೊಡೆಯುತ್ತಿದಿರಿ ಮಾತು ಮಾತಿಗೆ ಕಿವಿ ಹಿಂಡುವುದೇನು ,ತಲೆಯನ್ನು ತೆಂಗಿಕಾಯಿ ಚಿಪ್ಪು ಒಡೆಯುವಂತೆ ಗೋಡೆಗ ಬಡಿಯುತ್ತಿದ್ದಿರಿ ಯಾಕೆ ಅಷ್ಟೊಂದು ಹಿಂಸೆ ನೀಡುತ್ತಿದ್ದೀರಿ ಹೇಳಿ ಎಂದ.ಮಗು ನಾನು ಅವತ್ತು ಅಷ್ಟು ಶಿಸ್ತಿನಿಂದ ನಿನ್ನನ್ನು ಬೆಳಸದಿದ್ದರೆ ನೀನು ಇಂದು ಈ ಮಟ್ಟದಲ್ಲಿ ಇರುತ್ತಿದೆಯಾ ಯೋಚಿಸು ಎಂದಾಗ ವಿಜಯನಿಗೆ ಅದೂ ಹೌದೆಂದಿನಿಸಿತ್ತು.ಮತ್ತೇನೂ ಕೇಳಲು ನೆನಪಿಗೆ ಬರದೇ ಹೇಳದೆ ಅಪ್ಪ ನೀನು ನಾನು ಹೀಗೆ ವಾಕಿಂಗ್ ಹೋಗುವ ಹಾಗೆ ಹೋಗುತ್ತಿದೆಯಾ ಎಂದು ಕೇಳಿದ ಅದಕ್ಕೆ ಅವನನ್ನೇ ಅತೀ ನೋವಿನಿಂದ ನೋಡಿದ ಅವರಪ್ಪ ,ಮಗು ನನಗೆ ಅಂತ ಭಾಗ್ಯ ಇರಲಿಲ್ಲ ನಾನು ಮತ್ತು ನಿನ್ನ ಅಮ್ಮ ಸೂರ್ಯ ಹುಟ್ಟಿದಾಗಿನಿಂದ ಹಿಡಿದು ರಾತ್ರಿಯವರಿಗೆ ನಮ್ಮ ಪುಟ್ಟ ಹೋಟೆಲ್ನಲ್ಲಿ ದುಡಿದರೆ ನಾಕು ಕಾಸು ಬಂದು ದಿನ ನಿತ್ಯ ಖರ್ಚಿಗಾಗುತ್ತಿತ್ತು ವಾಕಿಂಗ್ ಹೋಗುವುದೆಲ್ಲ ಒಂದು ಕನಸಾಗಿತ್ತು.ಹಾ ರಾತ್ರಿ ೧೦ಘಂಟೆಯ ವೇಳೆಗೆ ನಾನು ನಿಮ್ಮಮ್ಮ ಆಗಾಗ ಅಪರೂಪಕ್ಕೆ ಒಂದು ರೌಂಡ್ ತಿರುಗಾಡುತ್ತಿದೆವು ಎಂದಾಗ ಹೊ ಹೊ ರೋಮ್ಯಾಂಟಿಕ್ ಮೂಡ್ನಲ್ಲಿ ಅಲ್ವೇ ಎಂದು ಕಿಸ್ಸಕ್ಕನೆ ನಕ್ಕ ವಿಜಯ್ ಅಪ್ಪನ ಮುಖ ನೋಡಿದ.ಹುಂ ನಿನ್ನಂತ ಹುಡುಗರೆಲ್ಲ ಹಾಗೆ ಅಂದುಕೊಳ್ಳಬಹುದು ಆದರೆ ನಾವು ಮಾತನಾಡುತ್ತಿದ್ದುದೆಲ್ಲ ಅಂದು ಉಳಿದ ನಾಕು ಕಾಸಿನ ಬಗ್ಗೆ, ೨-3 ವರುಷದವನಿದ್ದ ನಿನಗೆ ಹರಿದ ಅಂಗಿಯನ್ನು ಬಿಟ್ಟು ಹೊಸದೊಂದು ಕಾಟನ್ ಅಂಗಿ ಕೊಡಿಸವುದು ಮುಂದೆ ನಮಗಾಗಿ ಒಂದು ಪುಟ್ಟ ಮನೆ ಅದಕ್ಕೆ ದುಡ್ಡು ಹೊಂದಿಸುವುದು ಹೀಗೆ ನಮ್ಮ ಆಲೋಚನೆಯಲ್ಲ ಹೆಚ್ಚು ಕಡಿಮೆ ನಿನ್ನ ಬಗ್ಗೆ ನಿನ್ನ ಮುಂದಿನ ಭವಿಷ್ಯದ ಬಗ್ಗೆಗೆ ಇತ್ತು.ಮುಂದಿನ ೩-೪ ವರ್ಷದಲ್ಲಿ ನಾವಿಬ್ಬರೂ ನಮ್ಮ ಎಲ್ಲ ಆಸೆಗಳನ್ನೂ ಬದಿಗೊತ್ತಿ ಪೈ ಪೈ ಸೇರಿ ಒಂದು ಚಿಕ್ಕ ಮನೆ ಮಾಡಿದೆವು,ಆ ಸಮಯದಲ್ಲಿ ನಾನಾಗಲಿ ನಿನ್ನ ಅಮ್ಮನಾಗಲಿ ಬಹಳ ಕಷ್ಟ ಪಟ್ಟೆವು.ನನ್ನ ವಿಷಯ ಹಾಗಿರಲಿ ಇನ್ನು ಹೆಚ್ಚಿಗೆ ಸಮಯ ಉಳಿದಿಲ್ಲ.ನಿನ್ನ ಬಗ್ಗೆ ಹೇಳು ನಿನ್ನ ಜೀವನ ಹೇಗಿದೆ ಚೆನ್ನಾಗಿದೆಯಾ ಎನ್ನುತ್ತಿದಂತೆಯೇ ಎದೆಯುಬ್ಬಿಸಿ ವಿಜಯ್ ಹೇಳತೊಡಗಿದ ಅಪ್ಪ ನಿಮ್ಮ ಮಗ ಈಗ ಕಾರ್ ತೆಗೆದು ಕೊಳ್ಳುತ್ತಿದ್ದಾನೆ ಅಲ್ಲದೆ ನಾನಂತೂ ವೀಕ್ ಎಂಡ್ ಪಾರ್ಟಿ ಸಿನಿಮಾ ಎನ್ನುತ್ತಾ ಬಹಳ ಮಾಜವಾಗಿ ಇದ್ದೇನೆ ಎಂದು ಹೇಳಿದ.ಹೂ ಹೌದಪ್ಪ ಸಣ್ನಗೆ ಬರುತ್ತಿರುವ ನಿನ್ನ ಹೊಟ್ಟೆ ನೋಡಿದರೆ ಗೊತ್ತಾಗುತ್ತದೆ,ಅದಿರಲಿ ಊರಿನಲ್ಲಿ ಇರುವ ತಾಯಿ ತಂಗಿಗೆ ಏನಾದರೂ ವ್ಯವಸ್ಥೆಮಾಡಿದ್ದೀಯಾ ಎನ್ನುತ್ತಿದಂತೆಯೇ ಅದಕ್ಕೇನು ಚಿಂತೆ ಇಲ್ಲಪ್ಪ ತಿಂಗಳಿಗೆ ನಾನು ಐದು ಸಾವಿರ ಕಳಿಸುತ್ತಿದ್ದೇನೆ ಎಂದು ಹೆಮ್ಮೆಯಿಂದ ಹೇಳಿದ. ಹೌದೇ ಮಗು ಬಹಳ ಸಂತೋಷ ಹೀಗೆ ಕೇಳುತ್ತೆಂದು ತಪ್ಪು ತಿಳಿಯಬೇಡ ನೀನು ದಿನಕ್ಕೆ ಎಷ್ಟು ಸಿಗ್ರೆಟ್ ಸೇದುತ್ತೀಯ ,ಒಂದು ಪ್ಯಾಕ್ ಅಪ್ಪ,ಅದರ ಬೆಲೆ ಎಂದಾಗ ೧೦೦ ರೂಪಾಯಿ ಎಂದ ಅವನ ಮಾತಿಗೆ ಅಂದರೆ ತಿಂಗಳಿಗೆ ಮೂರು ಸಾವಿರ, ಹೋಟೆಲ್ ಖರ್ಚು ಎಂದಾಗ ಏನು ವಾರಕ್ಕೆ ಎರಡುಸಾವಿರ ಎಂದ ವಿಜಯ್ .ಮತ್ತೆ ಬಾರ್ ಕ್ರಿಕೆಟ್, ಫುಟಬಾಲ್ ಮ್ಯಾಚ್ ಎನ್ನುತ್ತಿದಾಗ ಮಧ್ಯದಲ್ಲೇ ತಡೆದ ವಿಜಯ್ ನೋಡಪ್ಪ ಸುತ್ತಿ ಬಳಸಿ ಯಾಕೆ ಕೇಳ್ತಿಯಾ ನನ್ನ ಮನೆ ಬಾಡಿಗೆ ಬಿಟ್ಟು ನನ್ನ ತಿಂಗಳ ಖರ್ಚು ಮೂವತ್ತು ಸಾವಿರ ಅಂದ. ಅಲ್ಲ ಮಗು ನಿಂಗೆ ಒಬ್ಬನಿಗೆ ಅಷ್ಟೊಂದು ಖರ್ಚಾದರೆ ನಿನ್ನ ಅಮ್ಮ ತಂಗಿ ಇಬ್ಬರೂ ಸೇರಿ ಐದು ಸಾವಿರ ಸಾಕೆ ಹೇಳು ಎಂದ ಅಪ್ಪನ ಮಾತು ಅವನಿಗೆ ಕಪಾಳಕ್ಕೆ ಭಾರಿಸಿದಂತಾಯಿತು. ಆದರೂ ಸೈರಿಸಿಕೊಂಡ ವಿಜಯ್, ಅಪ್ಪ ನಾನು ಸಂಪಾದಿಸೋದು ನಾನೇ ಅನುಭವಿಸೋದರಲ್ಲಿ ತಪ್ಪೇನಿದೆ ಎಂದ ತಪ್ಪೇನಿಲ್ಲಪ್ಪ ಆದರೆ ನಿನ್ನ ಅಮ್ಮನ ಬಳಿ ಎಷ್ಟು ಸೀರೆ ಇದೆ ಎಂದು ಯಾವಾಗಲಾದರೂ ನೋಡಿದ್ದೀಯಾ ಅವಳು ಹೊಸ ಸೀರೆ ಉಟ್ಟು ವರುಷಗಳಾದವು ಪಾಪ ಮನೆ ಕಟ್ಟುವುದಕ್ಕೆ ಅಂತ ಪೈ ಪೈ ಸೇರಿಸುವಾಗ ಈಗಿನ ನಿನ್ನ ಪ್ರಾಯದವಳೇ ಆದ ಅವಳು ತನ್ನ ಒಡವೆ ವಸ್ತ್ರ ಆಸೆಯನ್ನೆಲ್ಲ ಬದಿಗೊತ್ತಿ ಗಾಣದೆತ್ತು ದುಡಿದಂತೆ ದುಡಿದ್ದಕ್ಕೆ ಒಂದು ಮನೆಯಾಯಿತು. ನೆರೆ ಹೊರೆಯವರೆಲ್ಲ ಹಬ್ಬ ಹರಿದಿನದಂದು ಹೊಸ ಬಟ್ಟೆ ಧರಿಸಿ ಸಂಭ್ರಮಿಸುವುದ ನೋಡಿ ಅವಳು ಹತಾಶಳಾಗಿ ಕುಳಿತಾಗಲಿಲ್ಲ ನಾನೇ ಅವಳಿಗೆ ಸಮಾಧಾನ ಹೇಳುತ್ತಿದ್ದೆ.ನೋಡು ಈ ಮನೆಯೊಂದಾಗಲಿ ಆಮೇಲೆ ನಿನಗೆ ಬೇಕಾದ್ದನ್ನು ಕೊಡಿಸುತ್ತೇನೆ.ಆದರೆ ಅವಳ ದುರಾದೃಷ್ಟಕ್ಕೆ ಮನೆ ಕಟ್ಟಿ ವರುಷದಲ್ಲೇ ನಾನೇ ಹೋಗಿಬಿಟ್ಟೆ .ಸೀರೆ ಇರಲಿ ಅವಳು ಯಾವಾ ಪ್ರವಾಸ ತಾಣಕ್ಕೋ ಹೋಗಿಲ್ಲ ಸುತ್ತಿಲ್ಲ ಯಾವತ್ತಾದ್ರೂ ಅವಳನ್ನು ಒಂದು ತೀರ್ಥ ಕ್ಷೇತ್ರಕ್ಕೋ ಪ್ರವಾಸ ತಾಣಕ್ಕೋ ಕರೆದುಕೊಂಡು ಹೋಗಬೇಕೆಂದು ಎಂದು ನಿನಗನ್ನಿಸಲಿಲ್ಲವೇ ನಿನ್ನ ಪ್ರಾಯದಲ್ಲೇನಾದರೂ ಅವಳೇನಾದರೂ ಅವಳ ಸುಖ ನೋಡಿಕೊಂಡಿದ್ದರೆ ಇರಲಿಕ್ಕೆ ಒಂದು ಮನೆಯು ಇಲ್ಲದೆ ನೀನು ಓದಲು ಆಗದೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಕೊಳೆಯಬೇಕಿತ್ತು ಗೊತ್ತಾ ಅಂದಾಗ ಎಂದಾಗ ವಿಜಯನಿಗೆ ಯಾರೋ ಸುತ್ತಿಗೆಯಿಂದ ತಲೆಗೆ ಬಾರಿಸಿದಂತಾಯಿತು, ಛೆ ಹೌದಲ್ಲ ನಾನ್ಯಾಕೆ ಎಷ್ಟು ದಿನ ಯೋಚಿಸಲಿಲ್ಲ ಎನಿಸಿ ತುಂಬಾ ನಾಚಿಕೆಯಾಯಿತು. ಅಲ್ಲ ಮಗು ಬದುಕೆಲ್ಲ ನಿನಗಾಗಿ ಕಷ್ಟ ಪಟ್ಟ ಅವಳನ್ನು ಈಗಲಾದರೂ ಸುಖವಾಗಿಡುವ ಜವಾಬ್ದಾರಿ ನಿನ್ನದಲ್ಲವೇ ಎಂದು ಅಪ್ಪ ಹೇಳಿದಾಗ ವಿಜಯನಿಗೆ ಅಳುವೇ ಬಂದಿತು, ಕಣ್ಣು ತುಂಬಿ ಬಂದು ಇಲ್ಲಪ್ಪ ಖಂಡಿತ ಇನ್ನು ಅವಳನ್ನು ದೇವತೆಯಂತೆ ನೋಡಿಕೊಳ್ಳುತ್ತೇನೆ ಅವಳಿಗೆ ಯಾವುದೇ ಕೊರತೆ ಬರದಂತೆ ಅವಳನ್ನು ನೋಡುವ ಸಂಪೂರ್ಣ ಹೊಣೆ ನನ್ನದು ಎಂದು ಹೇಳಿದ. ಕಣ್ಣಿನಲ್ಲಿ ತುಂಬಿ ಕೊಂಡ ನೀರಿನಿಂದಾಗಿ ದೃಷ್ಟಿ ಮಂಜು ಮಂಜಾಗಿ ಅವನು ಕಣ್ಣೊರೆಸಿಕೊಂಡು ನೋಡುವಷ್ಟರಲ್ಲಿ ಬೈರಾಗಿ ಹೇಳಿದ ಸಮಯ ಮುಗಿದು ಹೋಗಿ ಅವನಪ್ಪ ಮಾಯವಾಗಿ ಆಗಿತ್ತು.

ಇದು ನಿಜವೋ ಭ್ರಮೆಯೋ ಅವನಿಗರ್ಥವಾಗಲಿಲ್ಲ ಆದರೆ ಮಾತನಾಡಿದ್ದೆಲ್ಲ ನೆನಪಿನಲ್ಲೇ ಇದ್ದುದುರಿಂದ ಕೂಡಲೇ ತಡ ಮಾಡದೆ ಪರಿಚಯದ ಟ್ರಾವೆಲ್ ಏಜೆಂಟ್ಗೆ ಫೋನ್ ಮಾಡಿ ಆದಷ್ಟು ಹತ್ತಿರದ ತಾರೀಕಿನಲ್ಲಿ ೧೦ ದಿನದ ದಕ್ಷಿಣ ಭಾರತ ಟ್ರಿಪ್ ಒಂದಕ್ಕೆ ಮೂರು ಸೀಟ್ ಬುಕ್ ಮಾಡಲು ಹೇಳಿ ನಿರಾಳವಾದ ಮನಸ್ಸಿನಿಂದ ಆಫೀಸ್ ಸೇರಿದ.

ಇವನು ಆಫೀಸಿಗೆ ಬರುತ್ತಿದಂತೆಯೇ ಇವನ ಸಹೋದ್ಯಗಿ, ಅಯ್ಯೋ ಎಲ್ಲಿ ಹೋಗಿದ್ದೆಯಲ್ಲೋ ಮಾರಾಯ ಆಗಿನಿಂದ ೫-೬ ಸಲ ಲ್ಯಾಂಡ್ ಲೈನಿನಲ್ಲಿ ನಿಂಗೆ ಕರೆ ಬಂದಿದೆ ಯಾವುದೊ ಅರ್ಜೆಂಟ್ ಕರೆ ಇರಬೇಕು ಮತ್ತೆ ಬರಬಹುದು ನೋಡು ಎಂದ. ಎರಡೇ ನಿಮಿಷದಲ್ಲೇ ಮತ್ತೊಮ್ಮೆ ರಿಂಗಾದಾಗ ತೆಗೆದುಕೊಂಡ ವಿಜಯ್ ಅದು ತಂಗಿಯ ಕರೆ ಎಂದು ಗೊತ್ತಾಗಿ ಅವಳು ಅಣ್ಣ…ಎಂದು ಹೇಳುವುದನ್ನು ತುಂಡರಿಸಿ ತನ್ನದೇ ಸಂಭ್ರದಿಂದ ಮೀನಾ ನಿಂಗೊಂದು ಸಿಹಿ ಸುದ್ದಿ ನಾನು ನಿನಗೆ ಅಮ್ಮನಿಗೆ ದಕ್ಷಿಣ ಭಾರತ ಪ್ರವಾಸ ಟಿಕೆಟ್ ತೆಗೆದ್ದಿದೀನಿ ಅಲ್ಲದೆ ನಾಳೆಯೇ ನಿನಗೆ ಮತ್ತು ಅಮ್ಮನಿಗೆ ಹೊಸ ಬಟ್ಟೆ ಎಲ್ಲ ತೆಗೆದುಕೊಂಡು ಬರುತ್ತಿದೀನಿ …..ಅವನ ಮಾತು ಮುಗಿಯುವ ಮುಂಚೆಯೇ ಆ ಬದಿಯಿಂದ ಜೋರಾಗಿ ಅಳುವ ಶಬ್ದ ಕೇಳಿ ಯಾಕೆ ಏನಾಯ್ತು ಮೀನಾ ಎಂದಾಗ ಬಿಕ್ಕುತ್ತಲೇ ಅವಳು ಅವಳು ಅಣ್ಣ ಈಗ ಅರ್ಧ ಗಂಟೆ ಹಿಂದೆ ಎದೆ ನೋವು ಅಂತ ಮಲಗಿದ ಅಮ್ಮ ಹಾಗೆ ನಮ್ಮನೆಲ್ಲ ಬಿಟ್ಟು ಹೋಗಿಬಿಟ್ರಣ್ಣ….ಮುಂದಿನದು ಕೇಳಲಾಗದೆ ಧಡಾರನೆ ಚೇರಿನಲ್ಲಿ ಕುಸಿದುಬಿದ್ದ ಅವನ ಮುಂದೆ ಹಾದು ಹೋಗಿದ್ದು ನೋವು ತುಂಬಿದ ಅಪ್ಪನ ಮುಖ.ಒಮ್ಮೆಲೇ ಅವನಿಗೆ ಅವನ ಹೊಸಕಾರು ಮೋಜಿನ ಜೀವನ ಎಲ್ಲ ಮುದುರಿದ ಕಾಗದದ ಹೂವಿನಂತೆ ಭಾಸವಾಯ್ತು.

– ಶೈಲೇಂದ್ರ ರಾವ್, ನೋಯ್ಡಾ

Advertisements