‘ಪೀಠಾಧಿಪತಿಯ ಪತ್ನಿ’ – ಮೂಲ – ತೆಹಮಿನಾ ದುರ್ರಾನಿ, ಕನ್ನಡಕ್ಕೆ – ರಾಹು

PP

ಪಾಕಿಸ್ತಾನಿ ಸಾಮಾಜಿಕ ಕಾರ್ಯಕರ್ತೆ ಮತ್ತು ಲೇಖಕಿಯಾಗಿರುವ ತೆಹಮಿನಾ ದುರ್ರಾನಿಯ ‘ಪೀಠಾಧಿಪತಿಯ ಪತ್ನಿ’ಯನ್ನು ಕನ್ನಡಕ್ಕೆ ‘ರಾಹು’ ಅನುವಾದಿಸಿದ್ದು, ಓದಿದಾಗ ಒಂದು ಗಾಢ ವಿಷಾದ ಮೂಡುತ್ತದೆ! ಮೂಲ ಕೃತಿಯ ಹೆಸರು `Blasphemy’. ಈ ಕೃತಿಯನ್ನು ಓದಿದ ಮೇಲೆ ಗೂಗಲಿಸಿದಾಗ ತಿಳಿದದ್ದು.. ಇದೂ ಓರ್ವಳ ಆತ್ಮಕತೆಯೇ.. ನಿಜ ಕಥೆಯಾಧಾರಿತವೇ.. ಅತಿ ಪ್ರಸಿದ್ಧ ವ್ಯಕ್ತಿಯ ಕ್ರೌರ್ಯದ ಕಥಾ ಚಿತ್ರಣವೇ. ಅಬ್ಬಾ… ಎಂಥಾ ಕ್ರೌರ್ಯದ ಪ್ರಕಾಷ್ಠೇ!! ಓದುತ್ತಿರುವಷ್ಟೂ ಹೊತ್ತು ಮನಸ್ಸು ಕಾದಂಬರಿಯ ಪ್ರಮುಖ ಮತ್ತು ಅತಿ ಕ್ರೂರಿ ಪಾತ್ರವಾದ `ಪೀರ್ ಸಾಯಿ’ಯ ಆ ದೊಡ್ಡ ಹವೇಲಿಯಲ್ಲೇ ಬಂಧಿತವಾಗಿರುತ್ತದೆ! ಧರ್ಮವನ್ನು ತಮಗೆ ಬೇಕಂತೇ ತಿರುಚಿ ಅದೆಷ್ಟೆಲ್ಲಾ ರೀತಿಯಲ್ಲಿ ಹೆಣ್ಣನ್ನು ಬಂಧಿಸಿ, ಕಟ್ಟು ಕಳೆ, ನಿರ್ಬಂಧಗಳನ್ನು ಹೇರಿ, ಭೋಗ ವಸ್ತುವನ್ನಾಗಿ ಅನುಭವಿಸಿ, ಅಟ್ಟ ಹಾಸ ಮರೆಯುವ ನಾನಾ ಚಿತ್ರಣಗಳು, ಮಜಲುಗಳನ್ನು ಹರವಿಟ್ಟ ಬಗೆಯನ್ನು….. ವಿವರಿಸಲು ಶಕ್ತಿ ಸಾಲದು!! ಪಶುವಿಗಿಂತಲೂ ಕಡೆಯ ಜೀವನ ಅಲ್ಲಿನ ಹೆಣ್ಮಕ್ಕಳ ಪಾಲಿಗಿದೆ ಎನ್ನುವುದು ಮತ್ತೊಮ್ಮೆ ದಿಟವಾಗಿದೆ ಇಲ್ಲಿ!
ತೆಹಮಿನಾಳ ‘ಆರನೆಯ ಹೆಂಡತಿ’ ಅವಳದ್ದೇ ಆತ್ಮ ಕಥೆಯಾಗಿದ್ದು… ಪಾಕಿಸ್ತಾನದ ಹೊಲಸು ರಾಜಕೀಯ/ಸಾಮಾಜಿಕ ಚಿತ್ರಣವನ್ನು ತೆರೆದಿಡುವಂತಹದ್ದೆಂದು ತಿಳಿದು ಅದನ್ನೂ ಓದಿದೆ. ಅದರ ಕುರಿತೂ ಇಲ್ಲಿ ಹಾಕುವೆ. ಪಾಕಿಸ್ತಾನದಲ್ಲೇ ಇದ್ದುಕೊಂಡು ಅಲ್ಲಿದ್ದವರ ಜೊತೆ ಸೆಣಸಾಡಿ ಇಷ್ಟು ನಿರ್ಭೀಡೆಯಿಂದ ಬರೆದ ಆಕೆಯ ಧೈರ್ಯ ಮೆಚ್ಚತಕ್ಕದ್ದೇ. ಇದಕ್ಕಾಗಿ ಆಕೆ ಬೆಲೆ ತೆತ್ತಿದ್ದೂ ಬಹಳವೇ ಅನ್ನೋದು ಗೂಗಲಿಸಿದರೆ ತಿಳಿದು ಬರುತ್ತದೆ. ಪದೇ ಪದೇ ಜಗತ್ತಿನೆಲ್ಲಡೆ ಹಬ್ಬುತ್ತಿರುವ ಭಯೋತ್ಪಾದಕರ ಅಟ್ಟಹಾಸವನ್ನು ಕಂಡಾಗ, ಇಂತಹ ಪುಸ್ತಕಗಳನ್ನು, ಅನೇಕಾನೇಕ ಬರಹಗಳನ್ನು ಓದುವಾಗೆಲ್ಲಾ ಅನಿಸುತ್ತಲೇ ಇರುತ್ತದೆ… ಯಾವ ಜನ್ಮದ ಪುಣ್ಯವೋ.. ಭಾರತದಲ್ಲಿ ಹುಟ್ಟಿದೆ. ಅಪ್ಪಿ ತಪ್ಪಿ ಪಾಕಿಸ್ತಾನದಲ್ಲಿ ಹುಟ್ಟಿದ್ದರೆ ಈ ರೀತಿ ಬರೆಯುವುದೂ ಕನಸೇ ಆಗುತ್ತಿತ್ತು. ಅದೊಂದು ಶಾಪಗ್ರಸ್ಥ ದೇಶದಂತೇ ಗೋಚರಿಸುತ್ತದೆ.. ಎಂದೆಂದೂ ಮುಗಿಯದ ಶಾಪವನ್ನು ಹೊತ್ತು ನರಳುತ್ತಿರುವಂತೆ!

~ತೇಜಸ್ವಿನಿ.

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಕನ್ನಡ - ಅನುವಾದಿತ, ರಾಹು, Uncategorized and tagged . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s