M

ಬುದ್ಧಿಜೀವಿಗಳು ಯಾವಾಗಲೂ ಹಿಂದೂ ಧರ್ಮದ ತಂಟೆಗೆ ಬರುತ್ತಾರೆ ಆದರೆ ಇತರರ ಬಗ್ಗೆ ಉಸಿರೆತ್ತುವುದಿಲ್ಲ ಎನ್ನುವವರು ಒದಲೇಬೇಕಾದ ಕೃತಿ ಮುಸ್ಲಿಂ.ಮೊದಲನೆಯದಾಗಿ ರವಿ ಬೆಳೆಗೆರೆ ಅವರ ವೃತಿಪರತೆ ಗೆ Hat’s off.ಒಂದು ರೀತಿಯಲ್ಲಿ heavy risk ತೆಗೆದುಕೊಂಡು ಈ ಕೃತಿ ರಚಿಸಿದ್ದಾರೆ ಅನಿಸುತ್ತದೆ. ಪುಸ್ತಕ ಓದಿ ಮುಗಿಸುವುದರಲ್ಲಿ ಅಫನಿಸ್ತಾನದ ಸುತ್ತ ಒಂದು ಸುತ್ತು ಹಾಕಿಕೊಂಡ ಬಂದ ಅನುಭವವಾಗುತ್ತದೆ.ನೀವು ಇತಿಹಾಸದ ವಿದ್ಯಾರ್ಥಿ ಆಗಿದ್ದರೆ ಈ ಕೃತಿ ಬಿಟ್ಟು ಬಿಡದೆ ಓದಿಸಿಕೊಂಡು ಹೋಗುತ್ತದೆ.ಈ ಕೃತಿ ಅಫನಿಸ್ತಾನ ದೇಶದ ಭೂಗೋಳ,ಇತಿಹಾಸ, ಅದರಲ್ಲಿನ ಬುಡಕಟ್ಟುಗಳು ಸರ್ವಾಧಿಕಾರಿ ಮೂಲಭೂತವಾದಿ ಆಡಳಿತ, ವೈಯುಕ್ತಿಕ ಸ್ವಾತಂತ್ರ್ಯ ಹತ್ತಿಕ್ಕುವ ಕಠೋರ ಕಾನೂನುಗಳ ದರ್ಶನ ಆಗುತ್ತದೆ.ಒಸಾಮಾ ಬಿನ್ ಲಾಡೆನ್ ರಾಕ್ಷಸ ವ್ಯಕ್ತಿತ್ವವು ಅನಾವರನಗೊಂಡಿದೆ.
ಅಫನಿಿಸ್ತಾನ ನೋಡಿದ್ರೆ ನಿಜಕ್ಕೂ ನಮ್ಮ ದೇಶ ಸ್ವರ್ಗ ಅಂತ ಅನಿಸದೆ ಇರದು ನಮ್ಮ ದೇಶದಲ್ಲಿ ನಾವು ಎಷ್ಟು ಸ್ವತಂತ್ರವಾಗಿದ್ದೇವೆ ಅಲ್ಲವಾ ಒಂದು ಕ್ಷಣ ನಿಮಗೆ ಅನಿಸದೆ ಇರುವುದಿಲ್ಲ ಅದರ ಜೊತೆಗೆ ಒಂದು ದೇಶಕ್ಕೆ ಧರ್ಮ ಗ್ರಂಥಗಳೇ ಕಾನೂನಾದರೆ ಹೇಗೆ ವಿನಾಶಕ್ಕೆ ಹೋಗುತ್ತದೆ ಎನ್ನುವುದಕ್ಕೆ ಅಫನಿಸ್ತಾನ ಎಲ್ಲರಿಗೂ ಎಚ್ಚರಿಕೆಗಂಟೆ.
Really I enjoyed this book ಆದರೂ ನನ್ನನ್ನು ಕಾಡಿದ ಸದಾ ಕಾಡಿಸುವ ಪ್ರಶ್ನೆ ಹಾಗೆಯೇ ಉಳಿಯುತ್ತದೆ
ಮುಸ್ಲಿಂ ಉಗ್ರಗಾಮಿ ಆಗಲು ಏನು ಕಾರಣ?ಬಡತನವಾ?ಮತಿ ಭ್ರಾಂತಿಯಾ?

– ಸುರೇಶ್ ಕುಮಾರ್ ಕೆ

Advertisements