‘ವಕ್ರ ರೇಖೆ’ – ಭಾರತೀಸುತ

VR

ಭಾರತೀಸುತ ಅವರ ಸೊಗಸಾದ ಪ್ರಾದೇಶಿಕ ಕಾದಂಬರಿ. ಕರಾವಳಿ ಪ್ರದೇಶದ ಗ್ರಾಮಗಳಲ್ಲಿನ ಸ್ವಾತಂತ್ರ್ಯ ಪೂರ್ವ & ಸ್ವಾತಂತ್ರ್ಯದ ನಂತರದ ದಿನಗಳ ರಾಜಕೀಯ,ಸಾಮಾಜಿಕ, ಸಾಂಸ್ಕೃತಿಕ ವಿಚಾರಗಳನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ನಿರೂಪಿಸಿದ್ದಾರೆ.ಅಲ್ಲದೇ ಕರಾವಳಿಯ ಉಪಭಾಷೆ & ಆಡುಭಾಷೆಯನ್ನು ಬಳಸಿಕೊಂಡಿರುವುದು ಪ್ರಾದೇಶಿಕತೆಗೆ ಕೈಗನ್ನಡಿಯಂತಿದೆ.
ಈ ಕಾದಂಬರಿಯಲ್ಲಿ ನಮ್ಮನ್ನು ಹೆಚ್ಚು ಗಮನ ಸೆಳೆಯುವುದು & ಕಾಡುವುದು ಕೃಷ್ಣವೇಣಿಯ ಪಾತ್ರ. ವಯಸ್ಸು ಎಂಟಾಯಿತೆಂದು ಮನೆಯಲ್ಲಿ ರಾಮನ ಹೆಗಡೆಯವರ ಮಗ ಶೀನನ ಜೊತೆ ಲಗ್ನ ನಿಶ್ಚಯದ ಮುಂಚೆ ನಿಶ್ಚಯದ ನಂತರ ಅವಳ ಚೇಷ್ಟೆಗಳು,ಮಾತುಗಳು, ನಡೆತೆಗಳು ಅತ್ತಿಗೆ ಮೂಕಾಂಬಿಕೆ ಅತ್ತೆ ಪರಮತ್ತೆಯನ್ನು ತಬ್ಬಿಬ್ಬಾಗುವಂತೆ ಕೇಳುವ ಪ್ರಶ್ನೆಗಳು,ಅವಳಲ್ಲೇ ಹುಟ್ಟುವ ಪ್ರಶ್ನೆಗಳು, ಲಗ್ನದ ಸಂಧರ್ಭದಲ್ಲಿ ವಧುವಾಗಿ ಹೊರಗಡೆ ಸುತ್ತುವುದು,ಲಗ್ನದ ನಂತರ ಗಂಡ ಶೀನನ್ನು ಗೋಳಾಡಿಸುವ ಪ್ರಸಂಗಳು, ಕೆಲ ದಿನಗಳಲ್ಲೇ ದೀಪವಾಳಿ ಹಬ್ಬಕ್ಕೆ ಬರುವಾಗ ದಾರಿಯಲ್ಲಿ ಕಳ್ಳರ ದಾಳಿಗೆ ಗಂಡ ಬಲಿಯಾದಾಗ ಅವಳ ವರ್ತನೆ ಎಲ್ಲವೂ ಸೊಗಸಾಗಿ ಮೂಡಿಬಂದಿವೆ

– ಮಹಾಲಿಂಗಪ್ಪ ಉಪ್ಪಾರಹಟ್ಟಿ

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಕನ್ನಡ, ಭಾರತೀಸುತ, Uncategorized and tagged , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s