’ಕೆಂಗುಲಾಬಿ’ – ಹನುಮಂತ ಹಲಗೇರಿ

kengulabi1ಶ್ರೀಯುತ ಹನುಮಂತ ಹಲಗೇರಿಯವರು ಬರೆದಿರುವ ಈ ಕಾದಂಬರಿಯ ಕೊನೆಯ ಪುಟ ಮುಗಿಸುವಾಗ ಮನಸ್ಸು ಗಾಢ ವಿಷಾದದ ಗೂಡಾಗುತ್ತದೆ. ಶೀರ್ಷಿಕೆಯೇ ಸೂಚಿಸುವಂತೆ “ಕೆಂಗುಲಾಬಿ” ವೇಶ್ಯಾ ಜಗತ್ತಿನ ಸಂಘರ್ಷದ ಬದುಕು ಹೇಗೆ ಸಮಾಜದಲ್ಲಿನ ಮುಳ್ಳಿನ ನಡುವೆ ನಲುಗಿದೆಯೆಂದು ನೈಜವಾಗಿ ಹೇಳಿದ್ದಾರೆ.

ಹಳ್ಳಿ & ಪಟ್ಟಣದಲ್ಲಿ ಬೇರೆ ಬೇರೆ ರೀತಿಯಲ್ಲಿ ಈ ದಂಧೆ ನಡೆಯುತ್ತಿದ್ದರೂ ಉದ್ದೇಶ ಮಾತ್ರ ಒಂದೇ ಆಗಿದೆ.
ಇಲ್ಲಿ ಪಾತ್ರಗಳು ಸ್ವತಃ ಲೇಖಕರು ತಾವೇ ಆಗಿ ನಿರೂಪಿಸಿರುವುದು ಆಪ್ತವಾಗಿದೆ.

ಕಥಾನಾಯಕನ ತಾಯಿ ಅಕ್ಕ ಇಬ್ಬರೂ ಅದೇ ವ್ಯವಸ್ಥೆಗೆ ತಳ್ಳಲ್ಪಟ್ಟವರು. ಆದರೂ ತಾನು ಛಲದಿಂದ ಓದಿ ಕೊನೆಗೆ ಲೈಂಗಿಕ ಕಾರ್ಯಕರ್ತರ ಸಹಾಯ ಮಾಡುವ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರುತ್ತಾನೆ. ಆಕಸ್ಮಿಕವಾಗಿ ದೂರವಾಗಿದ್ದ ತನ್ನ ಪ್ರೇಯಸಿ ಶಾರಿಯನ್ನು ಸಹ ಅದೇ ಜಗತ್ತಿನಲ್ಲೇ ಕಂಡಾಗ ಹೇಗೆ ಅರಗಿಸಿಕೊಂಡಿರಬೇಕು! ಆಕೆಯನ್ನು ಹೇಗಾದರೂ ಆ ಕೂಪದಿಂದ ಪಾರು ಮಾಡಲೇಬೇಕೆಂಬ ತುಡಿತ,ಕನಸು. ಆದರೆ ಅದೆಲ್ಲವನ್ನೂ ಹೇಗೆ ನಿಭಾಯಿಸುತ್ತಾನೆ ಎನ್ನುವುದು ಕಥೆಯ ಹೂರಣ.

ಹಣ ಕೊಟ್ಟು ದೇಹ ಸುಖ ಪಡೆಯುವವರಿಗಿಂತ ಹಣ ಕಿತ್ತುಕೊಂಡು ದೇಹದಲ್ಲಿ ಪಾಲು ಕೇಳುವವರೇ ಭಯಾನಕವಾಗಿರುತ್ತಾರೆ ಎನ್ನುವುದು ಕಟು ವಾಸ್ತವ. ಪೋಲೀಸರು, ರೌಡಿಗಳು, ದಲ್ಲಾಳಿಗಳು, ನ್ಯಾಯಾಧೀಶರು, ಗುಮಾಸ್ತರು, ವಕೀಲರು, ಡಾಕ್ಟರ್ ಹೀಗೆ ಎಲ್ಲಾ ವೃತ್ತಿಯವರೂ ಪ್ರತ್ಯಕ್ಷ ಪರೋಕ್ಷವಾಗಿ ಈ ದಂಧೆಯ ಹಣದ ಪಾಲುದಾರರೇ..

ಶತಶತಮಾನಗಳಿಂದಲೂ ಮಾನವ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ವಿದ್ಯೆ, ನಾಗರೀಕತೆ, ವಿಜ್ಞಾನ, ತಂತ್ರಜ್ಞಾನ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ವಿಕಾಸವಾಗುತ್ತಲೇ ಇದ್ದಾನೆ. ಆದರೂ ಅಂದಿನಿಂದ ಇಂದಿನವರೆಗೂ ಬದಲಾಗದಿರುವುದು ಮನುಷ್ಯನ ಮನಸ್ಥಿತಿ. ಆ ಬದಲಾವಣೆಯಾಗದ ಹೊರತು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯಲು ಸಾಧ್ಯವಿಲ್ಲ.

ಜಾತಿ, ಮತ, ವೃತ್ತಿ ಇವೆಲ್ಲವನ್ನೂ ಬದಿಗಿರಿಸಿದರೆ ಕೊನೆಯಲ್ಲಿ ಉಳಿಯುವುದು ಮನುಷ್ಯ – ಮನುಷ್ಯತ್ವ ಮಾತ್ರ. ಅದಕ್ಕಾದರೂ ಮನುಷ್ಯ ಬೆಲೆ ಕೊಟ್ಟಿದ್ದರೆ ಸಾಕಿತ್ತಲ್ಲವೇ..

ಒಟ್ಟಿನಲ್ಲಿ ಈ ಕಾದಂಬರಿಯು ನಮ್ಮ ವಸ್ತುಸ್ಥಿತಿಯ ಕೈಗನ್ನಡಿ ಯಾಗಿದೆ. ಚಲನಚಿತ್ರವಾಗಿ ಕೂಡ ರೂಪುಗೊಳ್ಳುತ್ತಿರುವುದು ಇದರ ಗರಿಮೆ. ಓದುತ್ತಲು ಓದಿದ ನಂತರವೂ ನಿರಂತರವಾಗಿ ಕಾಡುತ್ತದೆ.. ಕಾಡುತ್ತಲೇ ಇದೆ..

– Souparnika Joshi

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಕನ್ನಡ, ಹನುಮಂತ ಹಾಲಿಗೇರಿ, Uncategorized and tagged , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s