’ಜಾನಕಿ ಕಾಲಂ’ – ಜೋಗಿ

janaki column
“ಹಾಯ್ ಬೆಂಗಳೂರ್” ವಾರ ಪತ್ರಿಕೆಯಲ್ಲಿ ಬರುವ ಭಾಗಶಃ ಎಲ್ಲಾ ಬರಹಗಳು ಕ್ರೈಮ್ ಇಲ್ಲವೇ ರಾಜಕೀಯಕ್ಕೆ ಸೇರಿರುತ್ತವೆ ಎಂದು, ಅದನ್ನು ಓದಲು ನನಗೆ ಇಂದಿಗೂ ಮನಸ್ಸು ಬಂದಿಲ್ಲ. ಆದರೂ ಕೆಲವೊಂದು ಕುತೂಹಲಕಾರಿ ವಿಚಾರಗಳನ್ನೋದಲು ಒಂದೆರೆಡು ಬಾರಿ ಖರೀದಿಸಿ ಓದಿದ್ದೆ. ಆಗಲೂ ನನಗೆಲ್ಲೂ ಸಾಹಿತ್ಯಿಕವಾಗಿ ಕಾಣಿಸುವ ಅಂಕಣಗಳಾಗಲಿ, ಸಂದರ್ಶನಗಳಾಗಲಿ ಕಣ್ಣಿಗೆ ಬಿದ್ದಿರಲಿಲ್ಲ. ಜಯಂತ್ ಕಾಯ್ಕಿಣಿಯವರ “ಬೊಗಸೆಯಲ್ಲಿ ಮಳೆ” ಆ ವಾರ ಪತ್ರಿಕೆಯಲ್ಲಿ ಬಂದ ಅಂಕಣಗಳ ಸಂಕಲನವೆಂದು ತಿಳಿದಾಗ , ಅವೆರಡಕ್ಕೂ ಸಂಭಂಧ ಕಲ್ಪಿಸಿಕೊಳ್ಳುವಾಗ ಕಸಿವಿಸಿಯಾಗಿದ್ದೆ. ಕೆ.ಆರ್ ಮಾರ್ಕೆಟ್ಟಿನ ಗಲಾಟೆ, ಗಜಿಬಿಜಿಯ ಮಧ್ಯೆ ಪುಟ್ಟಕಂದನ ಬೊಗಸೆಯ ತುಂಬಾ ಬಣ್ಣ ಬಣ್ಣದ ಹೂವುಗಳನ್ನು ಕಂಡಷ್ಟೇ ಆಶ್ಚರ್ಯವಾಗಿತ್ತು ನನಗಾಗ. ಅಂತಹದೇ ಆಶ್ಚರ್ಯ ಮತ್ತೆ ಅದೇ ಪತ್ರಿಕೆಯ ಅಂಕಣಗಳ ಸಂಕಲನವಾದ “ಜಾನಕಿ ಕಾಲಂ” ಓದಿದಾಗ ಆಯಿತು. ಆ ಪುಟ್ಟ ಹುಡಗಿ ಮತ್ತೆ ಮಾರ್ಕೆಟ್ಟಿನ ಮಧ್ಯೆ ಬಣ್ಣ ಬಣ್ಣದ ಲಂಗವನ್ನು ತೊಟ್ಟು ನನ್ನ ಗಮನ ಸೆಳೆದ ಹಾಗೆ 🙂 . ಕಾಯ್ಕಿಣಿಯವರ ಬರಹಗಳಂತೆ ಜಾನಕಿಯವರ ಕಾಲಂಗಳು (ಅಂಕಣ) ತನ್ನದೇ ಆದ ತಾಜಾತನದಿಂದ ಕೂಡಿದೆ. ಅಲ್ಲಿನ ವಿಚಾರಗಳು, ಅದನ್ನು ಮಂಡಿಸಿರುವ ರೀತಿ ಬಹುದಿನಗಳವರೆಗೆ ಮನಸ್ಸನ್ನು ಕಾಡುತ್ತದೆ. ಕೆಲವೊಂದು ಅಂಕಣಗಳ ಸಾಲುಗಳು ಮತ್ತೆ ಮತ್ತೆ ಓದಿಸಿಕೊಳ್ಳುವಷ್ಟು ಸುಂದರವಾಗಿವೆ.
ಪುಸ್ತಕದ ಅಂಕಣಗಳು ಹೆಚ್ಚಾಗಿ ಕನ್ನಡ ಸಾಹಿತಿಗಳ ಬಗ್ಗೆ, ಅವರ ಲೇಖನಗಳು ಓದುಗರ ಲೋಕದೊಳಗೆ ಮೂಡಿಸುವ ಪರಿಣಾಮಗಳ ಬಗ್ಗೆ ಮಾತಾಡುತ್ತವೆ. ಕುವೆಂಪುವಿನ ಕಾದಂಬರಿಗಳಲ್ಲಿ ಕಾಣುವ ಮಲೆನಾಡ ಒಕ್ಕಲಿಗರ ಬದುಕು ಬವಣೆ, ರಾಮಾಯಣದರ್ಶನಂ ನ ಆದರ್ಶಗಳು ಏಕೆ ಶಿಷ್ಟಾಚಾರದ ಬರಹಗಳಿಂದ ಮೂಡಿಬಂದಿದೆ ? ಅದೇ ಕಾರಂತದ ಕೃತಿಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬ್ರಾಹ್ಮಣ ಕುಟುಂಬ ಜೀವನ, ಸರಳವಾಗಿ ಓದಿಸಿಕೊಂಡು ಬಿಡುತ್ತವೆ ಏಕೆ ? ಎಂಬುದಕ್ಕೆ ಇಲ್ಲಿ ಶುಭ್ರ ಸುಲಭ ಉತ್ತರವಿದೆ. ನವ್ಯಸಾಹಿತ್ಯವನ್ನೂ ಹಿಂದಿಕ್ಕಿ ಅದರ ಪ್ರಭಾವಕ್ಕೆ ಒಳಗಾಗದೆ ಜಯಂತ್ ಕಾಯ್ಕಿಣಿ, ವಿವೇಕ್ ಶಾನಭಾಗ ತಮ್ಮದೇ ಹೊಸ ರೂಪವನ್ನು ಮೈಗೂಡಿಸಿಕೊಂಡರು ಎನ್ನುವುದಕ್ಕೆ ಇಲ್ಲಿ ಉದಾಹರಣೆಗಳು ಸಿಗುತ್ತವೆ. ನಾವು ಕಂಡ ಕಂದಿರದ ಕವಿಗಳ ಅಂತರಂಗದ ಪರಿಚಯ ಅವರ ಅಮೂಲ್ಯ ಕವಿತೆಗಳ ಮೂಲಕ ನಮಗೊದಗುತ್ತದೆ. ಎಂದೊ ಹಾಡಿದ ಕವಿಗೆ ಇಲ್ಲಿನ ಬರಹಗಳು ನಮ್ಮ ಕಿವಿ ನಿಮಿರಿಸುವಂತೆ ಮಾಡುತ್ತವೆ. ಆದಕ್ಕೆ ಉತ್ತಮ ಉದಾಹರಣೆ “ಬೋದಿವಾರನ ಕವಿತೆಗಳು”. ಲಂಕೇಶರ ಕವನಗಳಿಗೂ ನರಸಿಂಹಮೂರ್ತಿಯವರ ಕವಿತೆಗಳಿಗೂ ಅಗಾಧ ವ್ಯತ್ಯಾಸವಿದೆ; ಅವುಗಳನ್ನು ಓದುವ ಓದುಗ ಅವೆರೆಡನ್ನೂ ವಿಭಿನ್ನ ನೆಲೆಗಗಳಲ್ಲಿ ಅನುಭವಿಸುವಾಗ, ಅಲ್ಲಿ ಹುಟ್ಟುವ ಭಾವಾವೇಷಗಳು ಗೊಂದಲವೋ ಅಥವಾ ವಿಶೇಷವೋ ಎಂಬುದನ್ನು ಇಲ್ಲಿ ಸೂಕ್ಷ್ಮವಾಗಿ ವಿಶ್ಲೇಷಿಸಲಾಗಿದೆ.

ಕನ್ನಡ ಅಂಕಣಗಳನ್ನು ಓದುವ ಸಮುದಾಯ ಕಿರಿದಾಗಿದ್ದರೂ, ಅಲ್ಲಿ ತನ್ನ ವಿಭಿನ್ನತೆಯಿಂದ ತನ್ನತ್ತ ಸೆಳೆಯುವ ಕೆಲವೇ ಅಂಕಣ ಸಂಕಲನಗಳಲ್ಲಿ ಜಾನಕಿಯವರ ಕಾಲಂಗಳೂ ಒಂದು. ಮತ್ತೆ ಮತ್ತೆ ಓದಿಸಿಕೊಳ್ಳುವ ಕೃತಿಗಳ ಸಾಲಿಗೆ ಪ್ರಸ್ತುತ ಕೃತಿಯನ್ನೂ ಸೇರಿಸಬಹುದು ಎಂಬುದು ನನ್ನ ಅನಿಸಿಕೆ !

-Chandrashekar Bc

 

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಕನ್ನಡ, ಜೋಗಿ and tagged , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s