‘ಜುಗಾರಿ ಕ್ರಾಸ್’ – ’ಪೂಚಂತೇ’

jugari cross1ಒಂದು ಪುಸ್ತಕ ಓದಿದ ಮೇಲೆ ಅದರ ಪರಿಚಯ ಬರೆಯುವುದು, ಪುಸ್ತಕದಲ್ಲೇನಿದೆ ಎನ್ನುವುದನ್ನು ಸ್ಥೂಲವಾಗಿ ಪರಿಚಯಿಸಿ, ಇತರ ಸದಸ್ಯರಲ್ಲಿ ಓದಬೇಕೆನ್ನುವ ಕುತೂಹಲ ಮೂಡಿಸುವುದಕ್ಕಾಗಿ.

ಆದರೆ ಜುಗಾರಿ ಕ್ರಾಸ್ ಕಾದಂಬರಿಯ ಪರಿಚಯ ಅಪ್ರಸ್ತುತ.ಗುಂಪಿನಲ್ಲಿರುವ ಬಹುತೇಕ ಎಲ್ಲ ಸದಸ್ಯರೂ ಓದಿರಬಹುದಾದ ಕಾದಂಬರಿ.ಕಾದಂಬರಿ ಓದಿದ ಮೇಲೆ ನಮಗನಿಸುವ ಅನುಭವವನ್ನು ಹೇಳಬಹುದಷ್ಟೇ.

ಸಹ್ಯಾದ್ರಿ ಕಾಡುಗಳಲ್ಲಿ ಇತ್ತಿಚೆಗೆ ನಡೆಯುತ್ತಿರುವ ಕಾಳದಂಧೆ, ವಿಸ್ತಾರವಾಗಿ ಬೆಳೆದು, ಎಷ್ಟು ಮುಗ್ಧ ಜನರನ್ನು ತನ್ನ ಜಾಲದಲ್ಲಿ ಸಿಕ್ಕಿಸಿಕೊಂಡು ಅವರ ಪ್ರಾಣಕ್ಕೆ ಎರವಾಗುತ್ತಿದೆ, ಎಂಬುವುದನ್ನು ಸುಂದರವಾಗಿ ಚಿತ್ರಿಸಿದ್ದಾರೆ.

ತಮ್ಮ ಅರಿವಿಗೆ ಬರುವ ಮೊದಲೇ, ಇಂಥದ್ದೇ ಒಂದು ಜಾಡಿನಲ್ಲಿ ಸಿಕ್ಕಿಬೀಳುವ, ಅಥವಾ ಸಿಕ್ಕಿಬಿದ್ದಂತೆ ಭಾವಿಸುತ್ತಾ, ಕೆಂಪು ಕಲ್ಲಿನ ಹುಡುಕಾಟವನ್ನು ಅದರ ಬೆನ್ನಟ್ಟಿದವರ ನಿಗೂಢ ನಾಪತ್ತೆಯನ್ನು ಇಪ್ಪತ್ನಾಲ್ಕು ಗಂಟೆಗಳಲ್ಲಿ, ಒಂದು ಸ್ವಪ್ನದಂತೆ ನಡೆದುಹೋಗುವ ಸುರೇಶ, ಗೌರಿಯ ಅನುಭವವನ್ನು ಕಥೆಯಾಗಿಸಿದ್ದಾರೆ.

ಕಾದಂಬರಿಯ ಏಕೈಕ ಪ್ರಧಾನ ಸ್ತ್ರೀ ಪಾತ್ರವಾದ ಗೌರಿಯ ಧೈರ್ಯ, ಸಮಸ್ಯೆಗಳು ಬಂದಾಗ ಅವುಗಳನ್ನು ನೋಡುವ ರೀತಿ ಅದ್ಭುತವೆನಿಸುತ್ತದೆ.

ಕ್ಯಾಪ್ಟನ್ ಖದ್ದೂಸ್ ಎಕ್ಸ್‌ಪ್ರೆಸ್ ಬಸ್ಸಿನ ಪ್ರಯಾಣ, ಪರ್ವತ ಶಿಖರಗಳಲ್ಲಿ, ಕಂದಕಗಳ ಮೇಲೆ ಸಂಚರಿಸುವ ರೈಲಿನ ಹಳಿಗಳ ಮೇಲೆ ಮಂಜು ಕವಿದು, ಚಕ್ರಗಳಿಗೆ ಹಿಡಿತ ಸಿಗದೇ ಸ್ಲಿಪ್ ಆಗುತ್ತಾ ಸಾಗುವ ರೈಲಿನ ರುದ್ರರಮಣೀಯ ವರ್ಣನೆಗಳು ಓದುವಾಗ ಮೈಜುಮ್ ಎನ್ನಿಸುತ್ತದೆ. ಕಾದಂಬರಿಯಲ್ಲಿ ಬರುವ ಅಂತಹ ದೃಶ್ಯಗಳನ್ನು ನಾವೂ ಒಮ್ಮೆ ನೋಡಬೇಕೆನ್ನಿಸುವ ಮನದ ಬಯಕೆ ಹತ್ತಿಕ್ಕಲಾಗದು.

ಪ್ರತಿ ಹಂತದಲ್ಲೂ ಕೂತೂಹಲವನ್ನು ಕೆರಳಿಸುತ್ತ, ನಮ್ಮನ್ನು ಪೂರ್ಣವಾಗಿ ಆವರಿಸಿಕೊಂಡುಬಿಡುವ ಪೂರ್ಣಚಂದ್ರ ತೇಜಸ್ವಿಯವರ ನಿರೂಪಣೆ ಅದ್ಭುತ. ಕಾದಂಬರಿ ಮುಗಿದ ಮೇಲೆ ನಾವೂ ಕೂಡ ಒಂದು ಸ್ವಪ್ನದಿಂದ ಹೊರಬಂದಂತೆ ಅನ್ನಿಸುವುದಂತೂ ನಿಜ.
ಧನ್ಯವಾದಗಳು.

Kavitha Bhat

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಕನ್ನಡ, ಪೂರ್ಣಚಂದ್ರ ತೇಜಸ್ವಿ, Uncategorized and tagged , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s