‘ಒಂದು ಹುಲ್ಲಿನ ಕ್ರಾಂತಿ’ – ಮನಸೊಬು ಫುಕುವೊಕಾ

OHK

*ಸಹಜ ಕೃಷಿ, ಸಹಜ ಬದುಕು, ಸಹಜ ಆಹಾರ ಮತ್ತು ಸರಳತೆ.*

‘ನೀವು ಯಾವಾಗ ರುಚಿಯಾಗಿರುವುದನ್ನು ತಿನ್ನಬಯಸುವುದಿಲ್ಲವೋ ಆಗ ತಿನ್ನುವುದರ ನಿಜವಾದ ಸ್ವಾದವನ್ನು ಸವಿಯುವಿರಿ. ಸರಳವಾದ ಮತ್ತು ಸಹಜವಾದ ಆಹಾರವನ್ನು ಸಿದ್ಧಗೊಳಿಸಬಹುದು ಆದರೆ ಸ್ವಾದವನ್ನು ಸವಿಯಬಲ್ಲ ನಾಲಿಗೆಯನ್ನು ಸಿದ್ಧಗೊಳಿಸುವುದು ಕಷ್ಟ.’

‘ಸ್ವಾದವುಳ್ಳ ಆಹಾರದ ಸ್ವಾದ ಅದರ ಸ್ವಂತದ್ದಲ್ಲ. ಆಹಾರದ ರುಚಿ ತಿನ್ನುವವನ ಮನಸ್ಸನ್ನು ಅವಲಂಬಿಸಿದೆ.’

‘ಮನುಷ್ಯರು ಆಹಾರವನ್ನು ತಮ್ಮ ಕೈಗಳಿಂದ ತಿನ್ನುವುದಿಲ್ಲ. ತಮ್ಮ ಮನಸ್ಸಿನಿಂದ ತಿನ್ನುತ್ತಾರೆ.’

‘ಹರ್ಷ ಮತ್ತು ನೆಮ್ಮದಿಯನ್ನು ಪಡೆಯಲು ಪ್ರಯತ್ನ ನಡೆಸಿಯೇ ಮನುಷ್ಯ ಅವುಗಳನ್ನು ಕಳೆದುಕೊಳ್ಳುತ್ತಾನೆ ಎಂಬುದರಲ್ಲಿಯೇ ಸಹಜ ಕೃಷಿಯ ವಿಚಾರದ ತಿರುಳು ಹುದುಗಿದೆ. ಕೃಷಿಯ ಅಂತಿಮ ಗುರಿ ಕೇವಲ ಬೆಳೆಗಳನ್ನು ತೆಗೆಯುವುದಲ್ಲ; ಮಾನವತೆಯನ್ನು ಬೆಳೆಸಿಕೊಳ್ಳುವುದು ಹಾಗೂ ಉತ್ತಮಪಡಿಸಿಕೊಳ್ಳುವುದು ಆಗಿದೆ.’

ಈ ಮೇಲೆ ನಾನು ಉಲ್ಲೇಖಿಸಿರುವ ಮಾತುಗಳು ಜಪಾನಿನ ಶ್ರೇಷ್ಠ ಸಹಜ ಕೃಷಿ ತಜ್ಞ *ಮಸನೊಬು ಫುಕುವೊಕ* ಅವರದ್ದು. ಅವರ ಮಾತುಗಳು ಮೊದಲ ಗ್ರಹಿಕೆ ಮತ್ತು ಮೇಲ್ನೋಟಕ್ಕೆ ಅಸಹಜ ಅಥವಾ ವೈರುಧ್ಯದ ರೀತಿ ಕಾಣಬಹುದು ಆದರೆ ನಿಧಾನಕ್ಕೆ ಅವುಗಳನ್ನು ಪಚನ ಮಾಡಿಕೊಂಡಾಗ ಅವುಗಳ ನೈಜ ಅರ್ಥ ಆಗುತ್ತದೆ.

ತಮ್ಮ ಬದುಕಿನ ತಪಸ್ಸಿನಲ್ಲೇ ಪ್ರಕೃತಿಯ ಜೊತೆಗಿನ ಅನುಸಂಧಾನದ ಮೂಲಕ ಸಹಜ ಕೃಷಿಯನ್ನು ಶೋಧಿಸಿದವರು ಅವರು. ಅವರೇ ಹೇಳುವಂತೆ ಸಹಜ ಕೃಷಿ ಅಂದರೆ ಕೇವಕ ಕೃಷಿ ಮಾತ್ರವಲ್ಲ ಅದು ಸಹಜ ಬದುಕು, ಸಹಜ ಆಹಾರ, ಸಹಜ ಚಿಂತನೆ ಹೀಗೆ ಎಲ್ಲವೂ ಸಹಜವೇ.. ಸುಂದರವೇ.. ಸಮೃದ್ಧವೇ..

ನಾಲ್ಕೈದು ದಶಕಗಳ ಅವರ ಪ್ರಯತ್ನದಿಂದ ಅವರು ಶೋಧಿಸಿ, ಸಾಧಿಸಿ ತೋರಿಸಿದ ಸಹಜ ಕೃಷಿಯ ನಾಲ್ಕು ಪ್ರಮುಖ ತತ್ವಗಳೆಂದರೆ..
೧. ಭೂಮಿಯನ್ನು ಉಳುಮೆ ಮಾಡದಿರುವುದು..
೨. ಕಾಂಪೋಸ್ಟ್ ಗೊಬ್ಬರ ಅಥವಾ ಯಾವುದೇ ರಾಸಾಯನಿಕ ಗೊಬ್ಬರವನ್ನು ಉಪಯೋಗಿಸದಿರುವುದು.
೩.ಕಳೆ ತೆಗೆಯದಿರುವುದು ಹಾಗೂ ಕಳೆ ನಾಶಕಗಳನ್ನು ಬಳಸದಿರುವುದು.
೪.ರಾಸಾಯನಿಕ ವಸ್ತುಗಳ ಮೇಲಿನ ಅವಲಂಬನೆಯಿಂದ ದೂರ ಉಳಿಯುವುದು.

ಕೃಷಿಯ ಪ್ರಾಥಮಿಕ ಪರಿಚಯ ಇರುವ ಯಾರೇ ಸಹಜ ಕೃಷಿಯ ತತ್ವಗಳನ್ನು ಓದಿದರೆ ಅಚ್ಚರಿ ಪಡಬಹುದು. ಉಳದೆ, ಗೊಬ್ಬರ ಬಳಸದೆ, ಕಳೆ ತೆಗೆಯದೆ ಬೆಳೆ ಬೆಳೆಯುವುದು ಹೇಗೆ..?? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು.

ಫುಕುವೊಕ ತಮ್ಮ ಸಹಜ ಕೃಷಿಯ ಮೂಲಕ ಆಧುನಿಕ ಕೃಷಿ ಪದ್ಧತಿಯ ಕೃಷಿಯಿಂದ ಸಿಗುವ ಇಳುವರಿಗಿಂತ ಹೆಚ್ಚಿನ ಇಳುವರಿ ಪಡೆಯಬಹುದು ಎಂಬುದನ್ನು ತಮ್ಮ ಪ್ರಯೋಗಗಳ ಮೂಲಕ ತೋರಿಸಿಕೊಟ್ಟಿದ್ದಾರೆ.

ಅವರೊಬ್ಬ ಕರ್ಮಠ, ಸರಳ ಬದುಕಿನ, ಸಹಜತೆಯ ತತ್ವಜ್ಞಾನಿ ಆಗಿದ್ದವರು. ತಮ್ಮ ವಿಚಾರಗಳನ್ನು *’One Grass Revaluation* ಎಂಬ ಪುಸ್ತಕದಲ್ಲಿ ಮಂಡಿಸಿದ್ದಾರೆ. ಅದನ್ನು *’ಒಂದು ಹುಲ್ಲಿನ ಕ್ರಾಂತಿ’* ಹೆಸರಿನಲ್ಲಿ ಕನ್ನಡಕ್ಕೆ ಸಂತೋಷ ಕೌಲಾಗಿ ಅವರು ಅನುವಾದ ಮಾಡಿದ್ದಾರೆ.

ಸುಮ್ಮನೆ ಒಮ್ಮೆ ಓದಿ ನೋಡಿ..
ನಿಮ್ಮನ್ನು ತುಂಬಾ ಪ್ರಭಾವಿಸಬಲ್ಲ ಕೃತಿಗಳಲ್ಲಿ ಅದು ಒಂದು.

– ಮುರಳಿಮೋಹನ್ ಎಂ ವಿಶ್ವಮಾನವ

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಕನ್ನಡ, ಮನಸೊಬು ಫುಕುವೊಕಾ, Uncategorized and tagged , , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s