‘ಮುಗಿದ ಯುದ್ಧ’ – ಶಿವರಾಮ ಕಾರಂತ

MY

ಕಾರಂತರ “ಮುಗಿದ ಯುದ್ಧ” ಎಂಬ ಈ ಕಾದಂಬರಿಯಲ್ಲಿ ಬಡ ಶಾಲಾ ಅಧ್ಯಾಪಕ ಅಚ್ಯುತನು ಅನುಭವಿಸುವ ಕಷ್ಟಗಳನ್ನು ಚಿತ್ರಿಸಿದ್ದಾರೆ. ಒಂದು ಊರಿನಿಂದ ಮತ್ತೊಂದು ಊರಿಗೆ ವರ್ಗವಾಗಿ ತೆರೆಳುವ ಅವನ ಕಷ್ಟಗಳಿಗೆ ಕೊನೆಯೇ ಇಲ್ಲ. ಇದರ ಮಧ್ಯೆ ಮಹಾಯುದ್ದ ಶುರುವಾಗುತ್ತದೆ. ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುತ್ತವೆ. ಅವನ ಆರೋಗ್ಯ ಕೈ ಕೊಡುತ್ತದೆ. ಕಷ್ಟಗಳು ಹೆಚ್ಚಿದಂತೆಲ್ಲ ಸಾಲವೂ ಹೆಚ್ಚಾಗುತ್ತದೆ.
“ಬಾಳುವುದೇ ಏಕೆ ? ಏನಿದೆ ಬಾಳ್ವೆಯಲ್ಲಿ ! ಬರಿಯ ಅಸ್ತಿ ಮಾಂಸಗಳನ್ನು ಕಾಪಾಡಲು, ಒಂದು ತುತ್ತಿನ ಚೀಲವನ್ನು ತುಂಬಲು, ಇಷ್ಟೆಲ್ಲಾ ಹೋರಾಟ ಬೇಕೇ” ಎಂಬ ಭೀಕರ ಆಲೋಚನೆಯನ್ನು ತಳೆಯುತ್ತಾನೆ.
ಅದೆಷ್ಟೋ ಬಾರಿ ಅವನ ಮನಸು ಈ ಬದುಕನ್ನು ಮುಗಿಸುವ ಸುಲಭ ದಾರಿಯನ್ನು ಹುಡುಕುತ್ತಿತ್ತು. ಹೆಂಡತಿ ಮಕ್ಕಳನ್ನು ನೆನೆಯುತ್ತಾನೆ, ಅವರಿಗಾಗಿ ಬದುಕಬೇಕು ಎಂದು ಕೊನೆ ತೀರ್ಮಾನಿಸುತ್ತಾನೆ. ಜೀವನದಲ್ಲಿ ಜಿಗುಪ್ಸೆ ಮೂಡಿ ಅಚ್ಯುತನಿಗೆ ದಿನೇ ದಿನೇ ಬುದ್ಧಿ ಸ್ವಾಸ್ಥ್ಯ ಕೆಡುತ್ತಾ ಬರುತ್ತದೆ. ದೈಹಿಕ ಹಾಗು ಮಾನಸಿಕ ಅನಾರೋಗ್ಯದಿಂದಾಗಿ ಅವನು ನಿತ್ಯ ನರಕ ಯಾತನೆ ಅನುಭವಿಸುವಂತಾಗುತ್ತದೆ. ತಾನು ಹೆಚ್ವು ಕಾಲ ಬದುಕಲಾರೆನೆಂದು ಅವನಿಗೆ ಅನಿಸುತ್ತಿರುತ್ತದೆ. ಇದರಿಂದ ಕಂಗಾಲಾದ ಅವನ ಹೆಂಡತಿ ರುಕ್ಮಿಣಿ ಅವನಿಗೆ ಧೈರ್ಯ ಹೇಳುತ್ತಾಳೆ. ಅನಾರೋಗ್ಯ ಹೆಚ್ಚಾದ ಕಾರಣ ಅವನನ್ನು ಡಾಕ್ಟರರ ಬಳಿ ಕರೆದೊಯ್ತುತ್ತಾರೆ ಅವನಿಗೆ ಕ್ಷಯ ರೋಗ ಇರುವುದಾಗಿ ತಿಳಿಯುತ್ತದೆ. ಚಿಕಿತ್ಸೆ ಪಡೆಯಲು ಅವನ ಬಳಿ ಹಣ ಇರುವುದಿಲ್ಲವಾದ ಕಾರಣ ರೋಗ ಉಲ್ಬಣಗೊಳ್ಳುತ್ತದೆ. ಅವನ ಪತ್ನಿ ರುಕ್ಮಿಣಿ ತನ್ನ ಗಂಡ ಆರೋಗ್ಯವಂತನಾಗುತ್ತಾನೆ ಮೊದಲಿನಂತಾಗುತ್ತಾನೆ ಎಂದೇ ಭಾವಿಸಿಕೊಂಡು ಧೈರ್ಯದಿಂದ ಇರುತ್ತಾಳೆ.
ಅವಳ ಧೈರ್ಯ ಕಂಡು ಅಚ್ಯುತ ನೆಮ್ಮದಿಯಿಂದ ಕೊನೆಯುಸಿರೆಳೆಯುತ್ತಾನೆ. ಇತ್ತ ಮಹಾಯುದ್ಧ ಮುಗಿಯುತ್ತದೆ ಜನರ ಜೀವನ ಯಾಥಾಸ್ಥಿತಿಗೆ ಬರುತ್ತದೆ. ಆದರೆ ಬದುಕು ನಡೆಸಲು ಅಚ್ಯುತ ಇರುವುದಿಲ್ಲ. ಜೀವನವೆಂಬ ಯುದ್ಧದಲ್ಲಿ ಅವನು ಸೋಲುತ್ತಾನೆ.

– ತನುಜಾ ಎಸ್ ಗೌಡ

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಕನ್ನಡ, ಶಿವರಾಮ ಕಾರಂತ, Uncategorized and tagged , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s