ಡಾರ್ಕ್ ಮ್ಯಾಟರ್ – ಬ್ಲೇಕ್ ಕ್ರೌಚ್

DM

ಬ್ಲೇಕ್ ಕ್ರೌಚ್ ಮೊದಲು ಇವನ ಬರಹಗಳ ಬಗ್ಗೆ ತಿಳಿದದ್ದು ಕಿಂಡಲ್ ಕೊಂಡ ಹೊಸತರಲ್ಲಿ. Wayward pines ಅನ್ನುವ ಮೂರು ಪುಸ್ತಕ ಸರಣಿಯ ಮೂಲಕ. ಜಗತ್ತೆಲ್ಲ ನಾಶವಾಗಿ ಕೊನೆಗೆ ಉಳಿವ ನಗರದಲ್ಲಿ ಎಚ್ಚರವಾಗುವ ಕಥಾನಾಯಕನಿಗೆ ತಾನೆಲ್ಲಿದ್ದೇನೆ ಏನು ಕತೆ ಎಂದು ಅರಿವಾಗದೆ ,ಹುಡುಕಿಕೊಂಡು ಹೊರಡುವ ಕೊನೆಗೆ ಇದೆಲ್ಲ ನಿಜ ಎಂದು ಅರಿವಾಗುವ ಕತೆ. ಒಳ್ಳೆಯ ಕತೆ.ಅದು ಟಿವಿ ಸರಣಿಯೂ ಅಗಿತ್ತು.
ಅದಾದ ಮೇಲೆ ಅವನ‌ ಬರಹಗಳು ಬರಿಯ ಥ್ರಿಲ್ ಒಂದೇ ಮುಖ್ಯವಾದ ಪದ ಜೋಡಣೆಯಾಗಿ ಬಿಟ್ಟವು. ಮೊನ್ನೆ ಅಂದತ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸುಮ್ಮನೆ ಸರ್ಚ್ ಮಾಡುತ್ತಿದ್ದವ ಇವನ ಹೆಸರು ಟೈಪ್ ಮಾಡುತ್ತಿದ್ದಂತೆ 2016 ರಲ್ಲಿ ಬಿಡುಗಡೆಯಾದ ಈ ಕಾದಂಬರಿ ‘ಡಾರ್ಕ್ ಮ್ಯಾಟರ್’ ನ ಬಗ್ಗೆ ಹೊಗಳಿಕೆ, goodreads ಜಾಲತಾಣದಲ್ಲಿ 4.1/5 ರೇಟಿಂಗ್ ಅಂತೆಲ್ಲ ನೋಡಿ ಕಿಂಡಲಿಗೆ ಇಳಿಸಿಕೊಂಡೆ.ಸುಮಾರು ದಿನ ಅಲ್ಲೇ ಬಿದ್ದುಕೊಂಡಿತ್ತು. ಓದಲು ತಂದ ಹಾರ್ಡ್ ಕಾಪಿಗಳೇ ಸುಮಾರಿರುವಾಗ ಇದನ್ನು ಯಾವಾಗದರೂ ದೂರಪ್ರಯಾಣದಲ್ಲೋ, ಬಸ್ಸಿಗೆ ಕಾಯುವ ಕ್ಷಣ ಬಂದರೆ ಓದಿದರೆ ಸಾಕು ಅಂತ ಇಟ್ಟಿದ್ದೆ.
ಏನಾಯಿತೋ ಗೊತ್ತಿಲ್ಲ ನಿನ್ನೆ ಶುರು ಮಾಡಿದೆ. ಇವತ್ತಿಗಾಗಲೇ ಮುಗಿದೂ ಹೋಯಿತು. ತಲೆ ಹೋಳಾಗುವುದು ಬಾಕಿ.
ಕತೆ ಸರಳವಲ್ಲ.
ಜೇಸನ್ ಒಬ್ಬ ಪ್ರೊಫೆಸರ್. ದೊಡ್ಡ ತಲೆಯಿದ್ದರೂ ಸಂಶೋಧನಾ‌ ಕ್ಷೇತ್ರದಲ್ಲಿ ಮುಂದುವರೆಯದೆ ಪ್ರೀತಿಸಿ ಮದುವೆಯಾಗಿ ಹೆಂಡತಿಯೊಂದಿಗೆ ಮಗನೊಂದಿಗೆ ಕಳೆಯುತ್ತಿರುವವ. ಮದುವೆಯಾಗಿ ಹದಿನೈದು ವರ್ಷವಾಗಿದೆ. ಅವನಿಗಿಂತ ಕಡಿಮೆ ಬುದ್ಧಿಯ ಅವನ‌ ಗೆಳೆಯನಿಗೆ ಅವನು‌ಮಾಡಿದ ಸಂಶೋಧನೆಗೆ ಪ್ರತಿಷ್ಟಿತ ಪ್ರಶಸ್ತಿಯೊಂದು ಬಂದಿದೆ. ಆ ಗೆಳೆಯ ತನ್ನ ಪತ್ನಿಯ ಇಷ್ಟಪಟ್ಟಿರಬಹುದೇ ಅನ್ನುವ ಸಂಶಯ ಇವನಿಗಿದೆ. ಹಾಗೆ ಗೆಳೆಯನ ಪಾರ್ಟಿಗೆ ಹೋಗಿ ವಾಪಸ್ ಬರುವಾಗ ಜೇಸನ್ ಅಪರಿಚಿತನಿಂದ ಅಪಹರಿಸಲ್ಪಡುತ್ತಾನೆ. ಮೂರ್ಛೆ ಹೋಗಿ ಎದ್ದರೆ ಯಾವುದೋ ಲ್ಯಾಬ್ ನಲ್ಲಿದ್ದಾನೆ. ತಾನು ಬೇರೆಯದೇ ಜಗತ್ತಲ್ಲಿರುವುದು ಕ್ರಮೇಣ ಅವನ‌ ಅರಿವಿಗೆ ಬರುತ್ತದೆ. ಈ ಜಗತ್ತಲ್ಲಿ ಜೇಸನ್ ವಿಜ್ಞಾನಿ. ಸಮಾನಾಂತರ ಜಗತ್ತಿಗೆ ದಾರಿ ಕಂಡುಹಿಡಿದವ( ಆ ವಿಷಯ ಇನ್ನೂ ಗುಟ್ಟೇ) . ಹದಿನೈದು ವರ್ಷದ ಹಿಂದೆ ಮದುವೆಯಾಗಬೇಕೇ ,ಸಂಶೋಧೆಯ ದಾರಿ ಆಯ್ದುಕೊಳ್ಳಬೇಕೆ ಎಂಬ ಸಂದಿಗ್ಧದಲ್ಲಿ ಈ ದಾರಿ ಆಯ್ದುಕೊಂಡವ. ಈ ಇನ್ನೊಂದು ಜಗತ್ತಲ್ಲಿ ಮೊದಲಿದ್ದ ಜೇಸನ್ ಒಂದು ಬಾಕ್ಸ್ ಅನ್ನು ಕಂಡುಹಿಡಿದಿದ್ದಾನೆ. ಅದರಲ್ಲಿ ಕೂತು ಒಂದು ಇಂಜೆಕ್ಷನ್ ತಗೊಂಡರೆ(ಕಾಲ ಪ್ರಯಾಣದಲ್ಲಿ ತಲೆಗೇನೂ ಆಗದ ಹಾಗೆ) ಸಮಾನಾಂತರ ವಿಶ್ವಕ್ಕೆ ಹೋಗಬಹುದು. ಆದರೀಗ ಈ ಜಗತ್ತಲ್ಲಿ ಅವರಿಗೆ ಈಗ ಬಂದ ಜೇಸನ್ ತಮ್ಮ ವಿಜ್ಞಾನಿ ಜೇಸನ್ ಅಲ್ಲ ಎಂದು ಗೊತ್ತಾಗಿದೆ. ಅವರಿಂದ ತಪ್ಪಿಸಿಕೊಳ್ಳಲು ಬಾಕ್ಸ್ ಹೊಕ್ಕವನಿಗೆ ವಾಪಸ್ ತನ್ನ ಜಗತ್ತಿಗೆ (ಆ ಡೈಮೆನ್ಷನ್ ಗೆ) ವಾಪಾಸಾಗಲು ದಾರಿ ಗೊತ್ತಿಲ್ಲ. ಅಸಂಖ್ಯಾತ ಜಗತ್ತಿಗೆ ಹೊಕ್ಕು ಬರುತ್ತಾನೆ.ಯಾವುದೂ ಅವನದಲ್ಲ. ಪ್ರತಿಯೊಂದರಲ್ಲೂ ಏನೋ ಒಂದು ಬದಲಾಗಿದೆ. ಒಂದು ಜಗತ್ತಲ್ಲಿ ಎಲ್ಲ ಸರಿ ಇದ್ದರೆ ಅವನ ಹೆಂಡತಿ ಸತ್ತಿದ್ದಾಳೆ.ಇನ್ನೊಂದು ಜಗತ್ತಲ್ಲಿ ಮಗ ಸತ್ತಿದ್ದಾನೆ ಹೆಂಡತಿ ಬದುಕಿದ್ದಾಳೆ, ಮತ್ತೊಂದು ಜಗತ್ತಿನಲ್ಲಿ ಜಗತ್ತೇ ನಾಶವಾಗುವಂತಿದೆ. ಇದೆಲ್ಲದರ‌ ನಡುವೆ ಇಂಜೆಕ್ಷನ್ ಖಾಲಿಯಾಗುತ್ತಿದೆ. ಕೊನೆಗೆ ಅವನು ತಾನು ಬರಿಯ ಪ್ರೊಫೆಸರ್ ಆಗಿದ್ದ ಜಗತ್ತಿಗೆ ವಾಪಾಸಾದರೆ ಅಲ್ಲಿ ಅವನ ಹೆಂಡತಿ ಬೇರೆ ಯಾರೋ ಜೇಸನ್ ಜೊತೆಗಿದ್ದಾಳೆ.
ಅವನಲ್ಲದೆ ಹೀಗೇ ಬಂದ ಇನ್ನೂ ಹಲವಾರು ಜೇಸನ್ ಗಳು ಅಲ್ಲಿ ತಮ್ಮ ಹಳೆಯ ಜೀವನಕ್ಕೆ ಮರಳಲು ಅಲ್ಲಿ ಅಡ್ಡಾಡುತ್ತಿದ್ದಾರೆ.
ಹೇಗೆ ಜೇಸನ್ ತನ್ನ ಪತ್ನಿಯ ತಾನೇ ನಿಜವಾದ ಪತಿ ಎಂದು ಮನವರಿಕೆ ಮಾಡಿಸಿದ? ಹೇಗೆ ಅವರ ಕುಟುಂಬ ಬಚಾವಾಯಿತು? ಇವೆಲ್ಲ ತಿಳಿಯಲು ಈ ಕಾದಂಬರಿ ಓದಿ.
ಮೊದಲನೆಯದಾಗಿ ಈ ವೈಜ್ಞಾನಿಕ ಕಾದಂಬರಿ ಬರಿಯ ಥ್ರಿಲ್ಲರ್ ಅಲ್ಲ.ರಸವತ್ತಾಗಿ ಕೊಂಚ ಥಿಯರಿಯೂ ಹೇಳುತ್ತದೆ. ಅದಲ್ಲದೆ ಸಂಬಂಧಗಳ ಪ್ರಾಮುಖ್ಯತೆ ,ನಾವೆಷ್ಟು ಕಳಕೋತಾ ಇದೀವಿ.ಅಂದರೆ ನಮ್ಮ ಹೆಂಡತಿ ನಮ್ಮ ಮಕ್ಕಳ ಎಷ್ಟು taken for granted ಅಂತಂದುಕೊಂಡು ಬಿಟ್ಟಿದೀವಿ ಅಂತ ಚೆನ್ನಾಗಿ ಮನದಟ್ಟು ಮಾಡಿಸ್ತದೆ.
What a miracle it is to have people to come home every day
To be loved
To be expected
ಅನ್ನುವಂತಹ ಸಾಲುಗಳಿವೆ.
ಅಸಂಖ್ಯಾತ ಜಗತ್ತಿನ ಅಸಂಖ್ಯಾತ ಜೇಸನ್ ಗಳು ಈ ಒಬ್ಬ ಜೇಸನ್ ಎದುರು ನಿನ್ನ ಬದುಕ ನಮಗೆ ಕೊಡು ನಿನಗಿಂತ ಚೆನ್ನಾಗಿ ನೋಡಿಕೊಳ್ಳುತ್ತೇವೆ‌ ಅಂತ ಕೇಳುವುದು.
ಕೊನೆಗೆ ಬಹುಶಃ ಇದು ವಿಧಿ ಅನ್ನುವುದು ಎಲ್ಲಾ ಬಹಳ ಚೆನ್ನಾಗಿ ಬರೆದಿದ್ದಾನೆ.

ಇದೀಗ ಸಿನಿಮಾ ಆಗುತ್ತಿದೆ. ನನಗ್ಗೊತ್ತು. ಇದು ತೆರೆಯ ಮೇಲೆ ಅಂತಹ ಅಚ್ಚರಿ ಮೂಡಿಸಲಿಕ್ಕಿಲ್ಲ. ಯಾಕೆಂದರೆ ಇದರ ಅಪ್ಪನಂತಹ predestination ತರಹದ ಸಿನಿಮಾ ಬಂದಿದೆ. ‌ಎಂತಹದೇ ಸಿನಿಮಾ ಬಂದರೂ mind blown ಅನ್ನುವ ಪದ ಸವಕಲಾಗುವ ಹಂತಕ್ಕೆ ನಾವು ಬಂದಿದ್ದೇವೆ.

ಆದರೆ ಓದು ಕೊಡುವ ಖುಷಿಯೇ ಬೇರೆ.ಅಲ್ಲಿ ನಮ್ಮ ಕಣ್ಣೆದುರು ನಾವೇ ಓಡಿಸಿದಂತೆ‌ ಕತೆ. ಹೀರೋ‌ ನಮ್ಮ ಕಲ್ಪನೆಯವನೇ.
ಅದಕ್ಕೇ ಓದು ಸುಖ.

ಈ ರಾತ್ರಿಗೆ ಒಳ್ಳೆಯ ಓದು.
ಓದಿ ನೋಡಿ.

– ಪ್ರಶಾಂತ್ ಭಟ್

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಇಂಗ್ಲೀಷ್, ಬ್ಲೇಕ್ ಕ್ರೌಚ್, Uncategorized and tagged , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s