TERU

ತುಂಬಾ ವಿಶಿಷ್ಠವಾದ ಕಾದಂಬರಿ.ಇದು ಉತ್ತರ ಕನ್ನಡ ಭಾಷೆಯಲ್ಲಿ ರಚನೆಯಾಗಿದೆ. ಧರಮಟ್ಟಿ ಗ್ರಾಮದ ವಿಠ್ಠಲ ದೇವರ ತೇರು ಕೆಳವರ್ಗದ ದ್ಯಾವಪ್ಪನ ವಂಶದ ಮೇಲೆ ಹರಿದು ಬಂದಿದ್ದು ಕಥೆಯ ಎಳೆ. ಧರಮಟ್ಟಿಯಲ್ಲಿ ರಂಗೋ ಪಟವರ್ಧನ್ ಕಟ್ಟಿಸಿದ ತೇರು ಮೊದಲ ಜಾತ್ರಾ ಉತ್ಸವದಲ್ಲಿ ಚಲಿಸದೇ ನಿಂತು ಬಿಡುತ್ತದೆ. ಇದಕ್ಕಾಗಿ ತೇರಿಗೆ ನರಬಲಿ ಕೊಡಬೇಕು ಎಂದು ನಿರ್ಧಾರವಾಗುತ್ತದೆ. ಆದರೆ ನರಬಲಿ ಕೊಡುವುದಕ್ಕೆ ಮೆಲ್ವರ್ಗದವರು ನೆಪಗಳನ್ನೆಳಿ ತಪ್ಪಿಸಿಕೊಳ್ಳುತ್ತಾರೆ.ಕೊನೆಗೆ ಕೆಳವರ್ಗದ ಒಂಬತ್ತು ಜನ ಮಕ್ಕಳು & ಗರ್ಭಿಣಿಯಾಗಿರುವ ಹೆಂಡತಿ ಇರುವ ದಿನದ ತುತ್ತಿಗೂ ಪರದಾಡುವ ದ್ಯಾವಪ್ಪನ(ಪ್ರಾಚೀನದವನು) ನಡುಮಗ ಚಂದ್ರಮ ನನ್ನು ಬಲಿಕೊಡಲು ನಿರ್ಧರಿಸುತ್ತಾರೆ.ಇದಕ್ಕೆ ಪ್ರತಿಯಾಗಿ ಕಳ್ಳಿಗದ್ದಿಯಲ್ಲಿ ದ್ಯಾವಪ್ಪನ ಕುಟುಂಬಕ್ಕೆ ಎಂಟು ಎಕರೆ ಭೂಮಿ ಕೊಡಲಾಯಿತು. ಅಂದಿನಿಂದ ಪ್ರತಿ ವರ್ಷವೂ ದ್ಯಾವಪ್ಪನ ಮನೆತನದವರು ಜಾತ್ರೆಯ ಸಂದರ್ಭದಲ್ಲಿ ತೇರಿನ ಚಕ್ರಕ್ಕೆ ಹಣೆ ಒಡೆದುಕೊಳ್ಳುವ “ರಕ್ತ ತಿಲಕ”ದ ಸೇವೆ ಪ್ರಾರಂಭವಾಗುತ್ತದೆ‌‌.ಅಲ್ಲದೇ ದ್ಯಾವಪ್ಪನ ಮನೆತನದ ಗೌರವ ಹೆಚ್ಚಿತ್ತಲ್ಲದೆ ಧರಮಟ್ಟಿಯ ಜನರಲ್ಲಿ ದ್ಯಾವಪ್ಪನಲ್ಲಿ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದರು.
ಈ ಸೇವೆಯನ್ನು ನಿಷ್ಠೆಯಿಂದ ನಡೆಸಿಕೊಂಡು ಬರುತ್ತಿದ್ದ ಈ ಮನೆತನ ಕಾಲಚಕ್ರ ಉರಳಿದಂತೆ ಬದಲಾಗುತ್ತದೆ. ಜೆಪಿ(ಜಯಪ್ರಕಾಶ್ ನಾರಾಯಣ್) ಅಂತವರ ಪ್ರಭಾ‌ವಕ್ಕೆ ಒಳಗಾದ ದ್ಯಾವಪ್ಪ(ಆಧುನಿಕದವನು) ಪ್ರಾರಂಭದಲ್ಲಿ ನಿಷ್ಠೆಯಿಂದ ಸೇವೆ ಮಾಡಿದರೂ ಕಾಲಕ್ಕೆ ತಕ್ಕಂತೆ ಧರಮಟ್ಟಿಯ ಜನರ ಧಾರ್ಮಿಕ ನಂಬಿಕೆಗಳು ಬದಲಾಗಿ ದ್ಯಾವಪ್ಪನನ್ನು ಕೀಳಾಗಿ ಕಾಣುತ್ತಾರೆ. ಇದರಿಂದಾಗಿ ಬೆಸತ್ತ ದ್ಯಾವಪ್ಪ ಊರನ್ನು ತೊರೆದು ಬಾಬಾ ಆಮ್ಟೆಯವರ ಸೇವಾಶ್ರಮ ಸೇರುತ್ತಾನೆ.
ಪ್ರಭುತ್ವಕೇಂದ್ರಿತ ಸಮಾಜ ಹುಟ್ಟು ಹಾಕಿದ ತಳಬುಡವಿಲ್ಲದ ಧಾರ್ಮಿಕಸಂಕಥನವೊಂದು ಕಾಲಚಕ್ರದ ಅಡಿಯಲ್ಲಿ ಸಿಲುಕಿ ಕಣ್ಮರೆಯಾಗಿದ್ದನ್ನು ನೈಜವಾಗಿ ಚಿತ್ರಿಸಿದ್ದಾರೆ.

– ಮಹಾಲಿಂಗಪ್ಪ ಉಪ್ಪಾರಹಟ್ಟಿ

Advertisements