Girish A V ಅನುಪಮಾ ನಿರಂಜನ್ – ದಿನಕ್ಕೊಂದು ಕಥೆ

Girish A V ನಾನು ಚಂದಮಾಮಾ ಓದಿದ್ದು ಆರಂಭದಲ್ಲಿ, ಇದರ ಒಂದು ಭಾಗ ಬಹುಮಾನ ಬಂದಿತ್ತು 🙂 ಚಿಕ್ಕ ಮಕ್ಕಳಿಗೆ ಚೆನ್ನಾಗಿದೆ…
Sathish Kannadi Shivarm karanth ಮಕ್ಕಳಿಗೆ ಅಂತ ತುಂಬ ಬರೆದಿದ್ದಾರೆ.ಅಷ್ಟು ಎಲ್ಲು ಸಿಗಲ್ಲ.ಮತ್ತು ತುಂಬಾ ಚೆನ್ನಾಗಿ ಬರೆದಿದ್ದಾರೆ.

Surendra Ramaiah ಸುಧಾಮೂರ್ತಿಯವರು ಕೂಡ ಮಕ್ಕಳ ಕಥೆಗಳನ್ನು ಬರೆದಿದ್ದಾರೆ.

Suma Aradhya ರೋಹಿತ್ ಚಕ್ರತೀರ್ಥರ “ಅಜ್ಜಿ ಹೇಳಿದ ಕತೆಗಳು” ಚೆನ್ನಾಗಿದೆ 👍 ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗಿದೆ.

Srinidhi TG ಥಟ್ಟನೆ ನೆನಪಿಗೆ ಬಂದಿದ್ದು ಇವೆರಡು ಹೆಸರು:
ಜಿ. ಪಿ. ರಾಜರತ್ನಂ – ಮಕ್ಕಳ ಸಾಹಿತ್ಯ ಸಮಗ್ರ ಸಂಪುಟಗಳು ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಸಿಗುತ್ತವೆ.
ನಾ. ಕಸ್ತೂರಿ – ಇವರು ರಚಿಸಿರುವ ಆಲಿಸ್ ಇನ್ ವಂಡರ್‌ಲ್ಯಾಂಡಿನ ಕನ್ನಡ ರೂಪಾಂತರ ‘ಪಾತಾಳದಲ್ಲಿ ಪಾಪಚ್ಚಿ’ ಮೂಲಕೃತಿಗಿಂತ ಹೆಚ್ಚು ಖುಷಿಕೊಡುತ್ತದೆ.

Girish A V ದೇವುಡು ಅವರೂ ಬರೆದಿದ್ದಾರೆ ಮಕ್ಕಳ ಕಥೆಗಳನ್ನು…

Girish A V ಗಿರಿಮನೆ ಶ್ಯಾಮರಾವ್ ಅವರದೂ ಕೆಲವು ಮಕ್ಕಳ ಪುಸ್ತಕವಿರಬೇಕು

Girish A V ಭೂಮಧ್ಯ ರೇಖೆಗೆ ಪಯಣ, ಬೆನ್ ಹರ್, ಮಾಯಾಮನುಷ್ಯ, ಪಶ್ಚಿಮದ ಪಯಣಿಗರು ಈ ಥರಹ ಆಂಗ್ಲ ಕ್ಲಾಸಿಕ್ ಕನ್ನಡಾನುವಾದ ಹೊಂದಿದೆ. ಮಕ್ಕಳಿಗೆ ಆಸಕ್ತಿಯನ್ನು ಮೂಡಿಸುತ್ತದೆ.

Girish A V ಮಾಸ್ತಿಯವರದು ಒಂದು ಕಥಾಸಂಗ್ರಹವಿರ ಬೇಕು ಮಕ್ಕಳಿಗೆ ಹಿಡಿಸುವ ಸಣ್ಣಕತೆಗಳದು

 ತರಂಗ ಸಂಪಾದಕಿ ಸಂಧ್ಯಾ ಪೈ ಅವರು ‘ತರಂಗ’ದಲ್ಲಿ ಮಕ್ಕಳಿಗಾಗಿ ಬರೆಯುತ್ತಿದ್ದ ಕತೆಗಳನ್ನು ಸೇರಿಸಿ ಸಂಕಲನ ಹೊರತಂದಿದ್ದ ನೆನಪು.
Deepak Bypura ಡಾ. ಎಚ್ ಎಸ್ ವೆಂಕಟೇಶಮೂರ್ತಿ ರವರ ಕೆಲವು ಕೃತಿಗಳು

Prashanth Srikantaiah ಡಾ! ಅನುಪಮಾ ನಿರಂಜನ ರವರ “ದಿನಕ್ಕೊಂದು ಕಥೆ” ಯ 12 ಪುಸ್ತಕದ ಸಂಚಿಕೆಗಳು

Rahul K ಆರ್.ಕೆ.ನಾರಾಯಣ ಅವರ ಸ್ವಾಮಿ ಮತ್ತು ಸ್ನೇಹಿತರು

Ashoka Bhagamandala Sampatooru vishwanath

Ashoka Bhagamandala T K Rama rao avara Dibbada bangale … mareyalarada pusthaka…

Niranjan Chandrashekar ಪಂಚತಂತ್ರ ಕಥೆಗಳು

Raghu Nandan G P Rajaratnam

Krishna Prasad ನನಗೆ ಥಟ್ಟನೆ ಹೊಳೆದದ್ದು ಸಂಪಟೂರು ವಿಶ್ವನಾಥ್ ಹಾಗೂ ಪ.ರಾಮಕೃಷ್ಣಶಾಸ್ತ್ರಿಗಳ ಕಥೆಗಳು! ಆಗಿನ ಕಾಲಕ್ಕೆ ತಪ್ಪದೆ ಪ್ರಜಾಮತ,ಸುಧಾ,ವಾರಪತ್ರಿಕೆ,ತರಂಗ ಇತ್ಯಾದಿ ಪತ್ರಿಕೆಗಳಲ್ಲಿ ಇವರ ಕತೆಗಳು ಬರುತ್ತಿದ್ದವು…

Purushothama Rao Sa.raghunatha, C.M.Govindareddy, also to be.considered.

Manju M Doddamani 8ತರಗತಿಯಲ್ಲಿ ಓದುತ್ತಿರುವ ಅಂತಃಕರಣ ನ ಪುಸ್ತಕಗಳನ್ನು ಒಮ್ಮೆ ನೋಡಿ ಮಕ್ಕಳ ಕಥೆಗಳ ಮತ್ತು ಬಾಲ್ಯಕ್ಕೆ ಸಂಬಂದಿಸಿದ ಹಲವು ಪುಸ್ತಕಗಳನ್ನ ಬರೆದಿದ್ದಾರೆ.. ಈ ಚಿಕ್ಕ ವಯಸ್ಸಿನಲ್ಲಿ ಸುಮಾರು 21 ಪುಸ್ತಕಗಳನ್ನು ಬರೆದಿದ್ದಾರೆ Ganesh Kodur ಅವರ ಅಕ್ಕನ ಮಗ ಬೆನಕ ಬುಕ್ ಬ್ಯಾಂಕ್ ಪ್ರಕಾಶನದಲ್ಲಿ ಸಿಗುತ್ತವೆ..

Rahul K ನಾ.ಡಿಸೋಜಾ ಅವರು ಸುಮಾರು ಮಕ್ಕಳ ಪುಸ್ತಕ ಬರೆದಿದ್ದಾರೆ, ಸ್ವಲ್ಪ ಸಮಯ ಕೊಡಿ ಪೂರ್ತಿ ವಿವರ ಕೊಡುತ್ತೇನೆ

Yallappa M Myatri ಹ.ಸ.ಬ್ಯಾಕೋಡ ಸರ್ ಇವರು ಮಕ್ಕಳಿಗಾಗಿನೇ ಬರೆಯುತ್ತಿರುವ ಸದ್ಯದ ಕವಿಗಳಲ್ಲಿ ನಾಡಿನ ಇವರು ಒಬ್ಬರೂ, ಸುಮಾರು 16-17 ಪುಸ್ತಕಗಳು ಬಿಡುಗಡೆ ಆಗಿದ್ದು, ಕಥೆ, ಕಾದಂಬರಿ, ನಾಟಕ ಈ ಪ್ರಕಾರಕ್ಕೆ ಸೇರಿದ ಮಕ್ಕಳ ಸಾಹಿತ್ಯವೇ ಇವರ ಕೈ ಚಳಕದಿಂದ ಮೂಡಿಬಂದಿದ್ದು, ಇವರು ಬರೆದ ಪ್ರತಿ ಪುಸ್ತಕಕ್ಕೆ ಕ.ಸಾ.ಪ ದಿಂದ ದತ್ತಿ ಪSee More

Priya Srinivas ಅನುಪಮ ನಿರಂಜನ ಅವರ ದಿನಕ್ಕೊಂದು ಕಥೆ series,ಸಿಸು ಸಂಗಮೇಶ ಅವರ ಆಸೆಬುರುಕ ಆಶಾ colourful book with many stories…was my favorite in my childhood…

Girish A V ಮರೆತಿದ್ದೆ..‌ಟಾಲ್ಸ್ಟಾಯ್ ಅವರ ಕಥೆಗಳು ಮಕ್ಕಳಿಗಾಗಿ ಬರೆದದ್ದು ಸೊಗಸಾಗಿದೆ (ದೊಡ್ಡವರಿಗೂ)….ಇಲ್ಲೊಂದಿದೆ ನೋಡಿ…https://m.facebook.com/story.php?story_fbid=778874368938328&substory_index=0&id=234166033409167Manage
Image may contain: 1 person, beard and text

ಪುಸ್ತಕ ಪರಿಚಯ ೧೨೦: ಟಾಲ್‍ಸ್ಟಾಯ್ ಅವರ ಕಥೆಗಳು
ಅ: ಶ್ರೀ ಎಲ್.ಗುಂಡಪ್ಪ

ಕೌಂಟ್ ಲಿಯೋ ಟಾಲ್‍ಸ್ಟಾಯ್ ೧೮೨೮ ಸೆಪ್ಟೆಂಬರ್ ೯ ರಂದು, ರಷ್ಯಾದ ಮಾಸ್ಕೋದಿಂದ ೨೦೦ ಕಿ.ಮೀ ದೂರದಲ್ಲಿರುವ ಹಳ್ಳಿ ಯಾಸ್ನಾ ಪೊಲ್ಯಾನದಲ್ಲಿ ಜನಿಸಿದರು. ಅವರದು ಶ್ರೀಮಂತ ಕೀರ್ತಿವಂತ ಕುಟುಂಬ (ಅದಕ್ಕೇ “ಕೌಂಟ್” ಎಂಬ ಬಿರುದು ಹೆಸರಿನಲ್ಲಿರುವುದು). ಬಾಲ್ಯದಲ್ಲೇ ತಮ್ಮ ತಂದೆ ತಾಯಿಯನ್ನು ಕಳೆದುಕೊಳ್ಳುವ ಅವರನ್ನು ಪೊರೆದವರು ಬಂಧುಗಳು. ೧೮೪೪ರಲ್ಲಿ ಕಾನೂನಿನ ಅಧ್ಯಯನದಲ್ಲಿ ತೊಡಗುವ ಅವರು, ಅದನ್ನು ಮುಂದುವರೆಸಲಾಗದೆ ತಮ್ಮ ಹಳ್ಳಿಗೇ ಮರಳುತ್ತಾರೆ. ಮುಂದೆ ಮೋಜಿನ ಜೀವನ ಸಾಗುತ್ತದೆ. ಕೊನೆಗೊಮ್ಮೆ ಜೂಜಿನಲ್ಲಿ ನಷ್ಟವಾದಾಗ ಸೈನ್ಯಕ್ಕೆ ಸೇರುತ್ತಾರೆ. ಆ ಕಾಲಘಟ್ಟದಲ್ಲೇ ಅವರು ಬರೆಯಲು ತೊಡಗುವುದು. ಕುಲೀನ ಕುಟುಂಬದಲ್ಲೇ ಬೆಳೆದ ಧಾಷ್ಟತೆಯ ಧಾಟಿ, ಅಹಿಂಸೆ, ತತ್ವಜ್ಞಾನದ ಹಾದಿಯತ್ತ ಹೊರಳುತ್ತದೆ. ಅದಕ್ಕೆ ಅವರು ೧೮೫೭ ಮತ್ತು ೧೮೬೦-೬೧ ರಲ್ಲಿ ನಡೆಸಿದ ಯುರೋಪಿನ ಪ್ರಯಾಣ. ಪ್ಯಾರಿಸ್ ನಲ್ಲಿ ಸಾರ್ವಜನಿಕವಾಗಿ ನಡೆಸಿದ ತಲೆದಂಡವನ್ನು ಕಣ್ಣಾರೆ ಕಂಡವರಂತೆ ಅವರು. ಮುಂದೆ ಎಲ್ಲೂ, ಯಾವುದೇ ಸರಕಾರದ ಹುದ್ದೆಯನ್ನು ಮಾಡುವುದಿಲ್ಲ ಎಂದು ಪ್ರತಿಜ್ಞೆಮಾಡುತ್ತಾರೆ. ಜರ್ಮನ್ ಭಾಷೆಗೆ ಅನುವಾದಗೊಂಡ “ತಿರುಕ್ಕೊರಳ್” ಮತ್ತು ಅಹಿಂಸೆಯ ಮಾರ್ಗದಿಂದ ಇನ್ನಷ್ಟು ಪ್ರೇರೇಪಣೆ ದೊರಕುತ್ತದೆಯಂತೆ. ಸಾಹಿತ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಅವರು, ಸುಸಂಸ್ಕೃತ ಮನೋಧರ್ಮ, ಧಾರ್ಮಿಕತೆ, ಜನಪರ ಕಾಳಜಿ, ಶ್ರೇಷ್ಠ ಮಾನವೀಯಗುಣಗಳ ಚಿಂತನೆಯನ್ನು ಬರಹದಲ್ಲಿ ಮೂಡಿಸುತ್ತಾರೆ. ಅದರಲ್ಲೂ ಅವರು ಬರೆದ ಸಣ್ಣ ಕಥೆಗಳಂತೂ ಹೃದಯಸ್ಪರ್ಶಿ. ತಮ್ಮ ೮೨ನೇ ವಯಸ್ಸಿನಲ್ಲಿ ನ್ಯೂಮೋನಿಯಾದಿಂದ ಮರಣಿಸುತ್ತಾರೆ. ಅವರ ವಿಶ್ವವಿಖ್ಯಾತ ಕೃತಿಗಳು: ವಾರ್ ಅಂಡ್ ಪೀಸ್, ಅನ್ನಾಕರೆನಿನಾ. ಇತರೆ ಕೃತಿಗಳು: ದಿ ಕೊಸಾಕ್ಸ್, ರಿಸರಕ್ಷನ್, ಫ್ಯಾಮಿಲಿ ಹ್ಯಾಪಿನೆಸ್, ದಿ ಡೆತ್ ಆಫ್ ಇವಾನ್ ಲಿಂಚ್ ಇತ್ಯಾದಿಗಳು. ಇಂದು ನಾವು ಪರಿಚಯಿಸಿಕೊಳ್ಳುವುದು ಟಾಲ್‍ಸ್ಟಾಯ್ ಅವರ ೨೩ ಕಥೆಗಳನ್ನು ಒಳಗೊಂಡ ಅದ್ಭುತ ಪುಸ್ತಕ. ಅದನ್ನು ಕನ್ನಡದ್ದೇ ಕಥೆಗಳೆಂಬಂತೆ ಶ್ರೀ ಎಲ್. ಗುಂಡಪ್ಪನವರು ಸೊಗಸಾಗಿ ಅನುವಾದಿಸಿದ್ದಾರೆ. ಬನ್ನಿ ಇದರಲ್ಲಿರುವ ಕಥೆಗಳತ್ತ ಒಂದು ಕಿರುನೋಟ ಬೀರುವ.

ಈ ಅನುವಾದಿತ ಕೃತಿ, ಮೊದಲಿಗೆ ೧೯೩೪ ರಲ್ಲಿ ಮುದ್ರಣಗೊಂಡು, ನಂತರ ೨೦೧೬ ರವರೆಗೂ ಐದು ಮುದ್ರಣಗಳ ಕಂಡಿದೆ!! ಸುಮಾರು ೩೫೮ ಪುಟಗಳನ್ನೊಳಗೊಂಡ ಪುಸ್ತಕದಲ್ಲಿ ಏಳು ಅಧ್ಯಾಯಗಳಿವೆ. ಅನುಕ್ರಮವಾಗಿ: ೧. ಮಕ್ಕಳ ಕಥೆಗಳು, ೨.ಜನಪ್ರಿಯ ಕಥೆಗಳು, ೩. ಒಂದು ಕಿನ್ನರ ಕಥೆ, ೪. ಚಿತ್ರಗಳಿಗೆ ಬರೆದ ಕಥೆಗಳು, ೫. ತಿದ್ದಿ ಹೇಳಿದ ನಾಡ ಕಥೆಗಳು, ೬. ಫ್ರೆಂಚಿನಿಂದ ಅನುವಾದಗೊಂಡ ಕಥೆಗಳು, ೭. ಶೋಷಣೆಗೊಳಗಾದ ಯುಹೂದ್ಯರ ನೆರವಿಗಾಗಿ ಬರೆದುಕೊಟ್ಟ ಕಥೆಗಳು. ಓದಿದ ನಂತರ ಒಂದೊಂದು ಕಥೆಗಳೂ ಮನಸ್ಸಿನ ಮೇಲೆ ಬೀರುವ ಪರಿಣಾಮ ಗಾಢ. ನಿಜಕ್ಕೂ ಪ್ರತಿಯೊಬ್ಬರೂ ಜೀವನದಲ್ಲಿ ಓದಲೇ ಬೇಕಾದ ಪುಸ್ತಕವಿದು. ಕೆಲವು ಮನೋಜ್ಞ ಕಥೆಗಳು:

ದೇವರು ಸತ್ಯವನ್ನು ಕಾಣುತ್ತಾನೆ, ಆದರೆ ನಿಧಾನಿಸುತ್ತಾನೆ: ತನ್ನದಲ್ಲದ ತಪ್ಪಿಗೆ ಯೌವನದಲ್ಲಿ ಶಿಕ್ಷೆಗೆ ಗುರಿಯಾಗಿ, ಸೈಬೀರಿಯಾದಲ್ಲಿ ಸೆರೆಯಾಳಾಗಿ ನೆರೆತನ ಕಾಣುವ ನಾಯಕ. ಅವನಿಗೆ ತನಗೆ ಶಿಕ್ಷೆಯಾದ ಕಾರಣ ಒಂದು ದಿನ ತಿಳಿದು ಬರುತ್ತದೆ. ಅದಕ್ಕೆ ಕಾರಣರಾದವನ ಮೇಲೆ ಸೇಡನ್ನು ತೀರಿಸಿಕೊಳ್ಳುವ ಅವಕಾಶವೂ ದೊರೆಯುತ್ತದೆ. ಆದರೆ ತನ್ನ ಶ್ರೇಷ್ಠತೆಯನ್ನು ಹೇಗೆ ನಾಯಕ ಮೆರೆಯುತ್ತಾನೆ ಎಂಬ ಪರಿಯಂತೂ ಆದರ್ಶಪ್ರಾಯವಾಗುತ್ತದೆ. ತಮ್ಮದಲ್ಲದ ತಪ್ಪಿಗೆ ಬಲಿಯಾಗುವ ಎಷ್ಟೋ ಮನಗಳಿಗೆ ಸಾಂತ್ವನ ಹೇಳುವಂತ ಕಥೆಯಿದು.

ಇಬ್ಬರು ಮುದುಕರು: ತಮ್ಮ ಇಳಿವಯಸ್ಸಿನಲ್ಲಿ ಮನೆಯ ಜವಾಬ್ದಾರಿಯನ್ನು, ವ್ಯವಹಾರವನ್ನು ಮಕ್ಕಳಿಗೆ ಒಪ್ಪಿಸಿ, ಸಿರಿವಂತ ಮತ್ತು ಬಡವ ಗೆಳೆಯರೀರ್ವರು ತೀರ್ಥಯಾತ್ರೆಯನ್ನು ಕೈಗೊಳ್ಳುವ ವಿಶಿಷ್ಟ ಕಥೆ. ಅವರ ತೀರ್ಥಯಾತ್ರೆ ಸಫಲವಾಯಿತೆ. ಅದರ ಫಲ ನಿಜಕ್ಕೂ ದೊರಕಿದ್ದು ಯಾರಿಗೆ. ಎಂದು ತಾತ್ವಿಕ ಅಂತ್ಯಕಾಣುವ ಸುಂದರ ಕಥೆ.

ಕಡೆಗಣಿಸಿದ ಕಿಡಿ ಮನೆಯನ್ನು ಸುಡುತ್ತದೆ: ಹಳ್ಳಿಯೊಂದರಲ್ಲಿ ನೆರೆಯಲ್ಲಿದ್ದ ಆಪ್ತ ಕುಟುಂಬವೆರಡರ ನಡುವೆ ಕ್ಷುಲ್ಲುಕ ಕಾರಣವೊಂದಕ್ಕೆ ಹುಟ್ಟಿಕೊಳ್ಳುವ ವೈಷಮ್ಯದ ಕಿಡಿ, ಹೇಗೆ ಪ್ರತಿಷ್ಠೆಗಳ ಹೋರಾಟವಾಗಿ ತಿರುಗಿಕೊಂಡು, ಪ್ರಬಲಗೊಂಡು ಆ ಕುಟುಂಬಗಳ ನೆಮ್ಮದಿಯನ್ನು ಹಾಳುಗೆಡವಿಬಿಡುತ್ತದೆ. ಮುಂದೆ ಆ ವೈಷಮ್ಯವು ಪರಮಾವಧಿಯನ್ನು ತಲುಪಿದಾಗ ನಡೆವ ಅನಾಹುತ. ಇಂದು ಸಹನೆಯನ್ನೇ ಕಳೆದುಕೊಂಡು ಬದುಕುತ್ತಿರುವವರಿಗೆ ಕಿವಿ ಹಿಂಡಿ ಬುದ್ಧಿ ಹೇಳುವಂತಿದೆ.

ಒಬ್ಬನಿಗೆ ಎಷ್ಟು ನೆಲಬೇಕು: ಎಷ್ಟೇ ಜಮೀನು ದೊರಕಿ, ಅಭಿವೃದ್ಧಿ ಹೊಂದುತ್ತಿದ್ದರೂ ಅಗ್ಗವಾಗಿ ಭೂಮಿ ದೊರಕುತ್ತದೆ ಎಂದಾಗ ಅದನ್ನು ಅರಸಿ ಹೊರಡುವ ಕೃಷಿಕ, ತಾನು ಅಂದುಕೊಂಡದ್ದಕ್ಕಿಂತಲೂ ವಿಭಿನ್ನವಾಗಿ ವ್ಯವಹಾರ ಕುದುರಿದಾಗ, ಕಡುಲಾಲಸೆಯಿಂದ ಮುನ್ನಡೆದಾಗ ನಡೆವ ಘಟನೆಯ ಹಿನ್ನಲೆಯ ಕಥೆಯಿದು. ನಮ್ಮ ಬಯಕೆಗಳನ್ನು ಅಂಕೆಯಲ್ಲಿಟ್ಟುಕೊಳ್ಳದಿದ್ದರೆ ಏನಾಗುತ್ತದೆ ಎಂದು ತಿಳಿಹೇಳುತ್ತದೆ.

ಜನರು ಜೀವಿಸುವುದೇತರಿಂದ: ಚಳಿಗಾಲದಲ್ಲಿ ಬಟ್ಟೆಯಿಲ್ಲದೆ ನರಳುತ್ತಿದ್ದವನಿಗೆ ಆಶ್ರಯ ನೀಡುವ ನಾಯಕ, ಮುಂದೆ ತಾನು ಆಶ್ರಯವಿತ್ತವನಿಂದಲೇ ಉನ್ನತಿಗೆ ಬರುವುದು. ಯಾರೊಂದಿಗೂ ಮಾತನಾಡದೇ ತಾನಾಯಿತು ತನ್ನ ಕೆಲಸವಾಯಿತು ಎಂದು ಆ ಕುಟುಂಬದಲ್ಲಿದ್ದ ಆತ, ಒಮ್ಮೆ ನಡೆವ ಘಟನೆಯಲ್ಲಿ ತಾನು ಯಾರು? ಏಕೆ ಇಲ್ಲಿಗೆ ಬಂದೆನೆಂಬುದನ್ನು ಹೇಳಿ, ಎಲ್ಲರ ಕಣ್ಣು ತೆರೆಸುವ ಸೊಗಸಾದ ಕಥೆ. ಮಾನವನು ನಿಜಕ್ಕೂ ಜೀವಿಸುವುದು ಯಾವುದರಿಂದ ಎಂಬ ನೀತಿವಾಕ್ಯ ತಿಳಿಹೇಳಿರುವ ಪರಿಯಂತೂ ಪರಿಣಾಮಕಾರಿ.

ಎಲ್ಲಿ ಪ್ರೇಮವೋ ಅಲ್ಲಿ ದೇವರು: ತನ್ನವರನೆಲ್ಲಾ ಕಳೆದುಕೊಂಡು, ಕೊನೆಯಿಲ್ಲದ ವ್ಯಾಕುಲತೆಯಿಂದ ನರಳುತ್ತಿದ್ದವನಿಗೆ, ಧಾರ್ಮಿಕ ಗ್ರಂಥವನ್ನು ಓದ ತೊಡಗುತ್ತಲೇ ಆಗುವ ಪರಿಣಾಮಗಳು, ಅದನ್ನು ಪಾಲಿಸತೊಡಗಿದಾಗ ಆತ ಕಂಡುಕೊಳ್ಳುವ ಸಾರ್ಥಕತೆ. ನಿಜಕ್ಕೂ ಅನನ್ಯಭಾವ ಮೂಡಿಸುತ್ತದೆ.

ಬೆಪ್ಪುತಕ್ಕಡಿ ಐವಾನ್: ನಿರ್ವಂಚನೆಯ ಗುಣಗಳಿಂದ ಜೀವಿಸುವ ದಡ್ಡನನ್ನೂ ಬಿಡದೆ, ನೆಮ್ಮದಿಗೆಡೆಸಲು ಯತ್ನಿಸುವ ಪಿಶಾಚಿಗಳ ರಂಜನೀಯ ಕಥೆಯಿದು. ಬೌದ್ಧಿಕವಾಗಿ ಪರಮದಡ್ಡತನವಿದ್ದರೂ, ದುಷ್ಟ ಭಾವಗಳಿಲ್ಲದಿದ್ದಾಗ ಹೇಗೆ ಯಶಕಾಣ ಬಹುದೆಂಬ ನೀತಿಕಥೆಯಿದು.

ಮೂವರು ಯತಿಗಳು: ನಿರ್ಜನ ದ್ವೀಪದಲ್ಲಿ ಇದ್ದಾರೆಂಬ ಸನ್ಯಾಸಿಗಳನ್ನು ಭೇಟಿಮಾಡಲೆತ್ನಿಸುವ ಬಿಷಪ್, ಅವರಿಗೆ ಸರಿಯಾಗಿ ಪ್ರಾರ್ಥನೆಯನ್ನು ಹೇಳಿಕೊಡುತ್ತಾನೆ. ಹೀಗೆ ಹೇಳಿಕೊಟ್ಟು ಧನ್ಯಭಾವದಲ್ಲಿ ಮುಂದುವರೆದವನಿಗೆ ಆಗುವ ಅಚ್ಚರಿ. ನಿಜಕ್ಕೂ ನಮ್ಮಲ್ಲಿರುವ ಶ್ರೇಷ್ಠತೆಯ ಭಾವವನ್ನು ಪ್ರಶ್ನಿಸಿ ಕಾಡುವಂತೆ ಮಾಡುತ್ತದೆ.

ಹೀಗೆ ಸಾಗುವ ಕಥೆಗಳು ಸಾರುವ ಪ್ರಭಾವ ನಿಜಕ್ಕೂ ಓದಿಯೇ ಅನುಭವಿಸಬೇಕು. ಒಂದು ಒಳ್ಳೆಯ ಓದು, ಪ್ರೇರಣೆಯನ್ನು ನೀಡಿ, ನಮ್ಮ ಗುಣಾವಗುಣವನ್ನು ವಿಶ್ಲೇಷಿಸುವಂತೆ ಮಾಡಿ, ಓದುಗನಿಗೆ ಬಾಳಿನ ಸಾರ್ಥಕತೆಯ ಹಾದಿಯನ್ನು ತೋರಬೇಕು. ಧನ್ಯತೆಯನ್ನು ಮೂಡಿಸಬೇಕು. ಅದೇ ನಿಜವಾದ ಓದು. ಇದನ್ನು ಕನ್ನಡಕ್ಕೆ ತಂದು ಅಮೂಲ್ಯ ಕೃತಿಯಾಗಿಸಿದ ಅನುವಾದಕರ ಪ್ರಯತ್ನ ಶ್ಲಾಘನೀಯ.

ಇನ್ನೊಂದು ಪುಸ್ತಕದ ಪರಿಚಯದೊಂದಿಗೆ ಮತ್ತೆ ಸಿಗೋಣ… ಶುಭವಾಗಲಿ… ಸಿರಿಗನ್ನಡಂ ಗೆಲ್ಗೆ….

Advertisements