‘ಬದುಕಿನ ಇನ್ನೊಂದು ಹಾದಿ’ – ಡಾ. ಆರ್. ಲಕ್ಷ್ಮೀನಾರಾಯಣ

badukina innondu haadiಬದುಕಿನ ಇನ್ನೊಂದು ಹಾದಿ – ಭಾರತೀಯ ಸಾಧುಗಳು,ಯೋಗ ಮತ್ತು ಮನೋಚಿಕಿತ್ಸೆ. (another way to live) – ದಿವಂಗತ ಆರ್.ಎಲ್.ಕಪೂರ್., ಮಾಲವಿಕ ಕಪೂರ್ ಅನುವಾದ – ಡಾ.ಆರ್.ಲಕ್ಷ್ಮೀನಾರಾಯಣ.
ಭಾರತದ ಹೆಮ್ಮೆ ಇಲ್ಲಿನ ಆಧ್ಯಾತ್ಮಿಕ ಪರಂಪರೆ. ಇದರ ಪ್ರಮುಖ ಅಂಗ ಇಲ್ಲಿನ ಸನ್ಯಾಸಿಗಳು. ಇವುಗಳ ಕುರಿತು ಅಸಂಖ್ಯ ಪುಸ್ತಕಗಳು ಬಂದಿವೆ. ‘ಹಿಮಾಲಯದ ಗುರುವಿನ ಗರಡಿಯಲ್ಲಿ ‘(ಶ್ರೀ ಎಂ), ‘ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ’ (ಸ್ವಾಮಿ ರಾಮ), ‘ಯೋಗಿಯ ಆತ್ಮಕತೆ ‘ ಇತ್ಯಾದಿ.
ಇವೆಲ್ಲವೂ ಅಧ್ಯಾತ್ಮಿಕ ಹುಡುಕಾಟದ ಕುರಿತಾದವು. ಪ್ರಸ್ತುತ ಪುಸ್ತಕವು ಮನಶಾಸ್ತ್ರೀಯ ನೆಲೆಯಲ್ಲಿ ಇನ್ನೊಂದು ಕೋನದಿಂದ ಹುಡುಕಾಡುತ್ತದೆ.
ನಾವು ಪೂಜ್ಯರೆಂದು ಗೌರವಿಸುವ ಆರಾಧಿಸುವ ಈ ಸನ್ಯಾಸಿಗಳು ನಿಜಕ್ಕೂ ಆಧ್ಯಾತ್ಮಿಕ ಔನ್ನತ್ಯ ಪಡೆದವರೇ? ಅಥವಾ ಸ್ಕಿಜೋಫ್ರೇನಿಯಾ ರೋಗಿಗಳೇ? ಅಹಂಕಾರಕ್ಕೂ ,ಆತ್ಮಗೌರವಕ್ಕೂ ಇರುವ ತೆಳು ಪರದೆಯ ನಡುವೆ ಇರುವವರೇ? ಯೋಗದಿಂದ ಆರೋಗ್ಯ ಸಾಧ್ಯವೇ? ಇವೆಲ್ಲ ಪ್ರಶ್ನೆಗಳ ಜೊತೆಗೇ ತಮ್ಮ ಸಂಶೋಧನೆಯ ರೂಪವೇ ಕಪೂರ್ ಅವರ ಈ ಪುಸ್ತಕ.
ಈ ಸಂಶೋಧನೆಯ‌ ಮೊದಲ ಘಟ್ಟವಾಗಿ ಒಂದು ವರ್ಷದ ಕಾಲ ಗುರುವೊಬ್ಬನ ಕೆಳಗೆ ಯೋಗದ ಅಭ್ಯಾಸ ಮಾಡುವ ಲೇಖಕರು ತಮ್ಮ ಅನುಭವಗಳ ದಿನಚರಿಯಲ್ಲಿ ಬರೆದಿಡುತ್ತಾರೆ. ‘ಪತಂಜಲಿಯ ಯೋಗಸೂತ್ರ’ಗಳ ಆಧಾರದಲ್ಲಿ. ವ್ಯತ್ಯಾಸದ ಅರಿವು ಅವರಿಗಾಗುತ್ತದೆ. ನಂತರ ವರ್ಷಕ್ಕೆ ಒಂದು ತಿಂಗಳಿನಂತೆ ಇಪ್ಪತ್ತು ವರ್ಷ ಹಿಮಾಲಯದ ಸನ್ಯಾಸಿ ಯೋಗಿಗಳ ಸಂದರ್ಶನ ಅವರ ಕುರಿತು ಅಧ್ಯಯನ ಕೈಗೊಳ್ಳುತ್ತಾರೆ. ಪುಸ್ತಕದ‌ ನಂತರದ ಭಾಗ ಈ ಸನ್ಯಾಸಿಗಳ ಪೂರ್ವ ಜೀವನ, ಅವರ ಆಚಾರಗಳು,ಮನಸ್ಥಿತಿ ಇವನ್ನು ಸ್ಥೂಲವಾಗಿ ಚರ್ಚಿಸುತ್ತದೆ.ದುರದೃಷ್ಟವಶಾತ್ ಕೃತಿಯ ಅಂತಿಮ‌ ಟಿಪ್ಪಣಿಗಳ ಮೊದಲೇ ಲೇಖಕರು ವಿಧಿವಶರಾದ್ದರಿಂದ ಸಮಗ್ರತೆ ಅನ್ನುವುದು ಈ ಕೃತಿಗೆ ಪಾತ್ರವಾಗಿಲ್ಲ.

ಹಲವು ವಿಷಯಗಳಲ್ಲಿ ಇದು ಬಹುಮುಖ್ಯ ಕೃತಿ. ಒಂದು ಯೋಗದ ವೈಜ್ಞಾನಿಕ ಅಭ್ಯಾಸ ಮತ್ತು ಪರಿಣಾಮಗಳ ವಿಸ್ತೃತ ಚರ್ಚೆ(ಒಂದು ವರ್ಷದಲ್ಲಿ ಅಲ್ಪಕಾಲೀನ ಪರಿಣಾಮಗಳಷ್ಟೆ ತಿಳಿಯಲು ಸಾಧ್ಯ ಆದರೂ). ಯೋಗಿಗಳ ಬಗೆಗೆ ಚಿಕಿತ್ಸಕ ದೃಷ್ಟಿಯ ಒಳನೋಟ.ಇದು ವಸ್ತನಿಷ್ಟವಾಗಿದೆ. ಹೇಗೆ ಪರಿಸರವೂ ವ್ಯಕ್ತಿಯ ರೂಪಿಸುತ್ತದೆ ಇತ್ಯಾದಿ.
ಇದನ್ನು ಬರೆದ ಆರ್.ಎಲ್.ಕಪೂರ್ ಅವರ ಪತ್ನಿ‌ ಮಾಲವಿಕ ಕಪೂರ್ ನಮ್ಮ ಶಿವರಾಮ ಕಾರಂತರ ಮಗಳು. ಕಪೂರರ ನಿಧನದ ನಂತರ ಈ ಕೃತಿ ಹೊರಬರಲು ಕಾರಣರಾದವರು.
ನನಗೆ ಸರಿ ಸುಮಾರು ಎರಡು ದಿನಗಳ ಕಾಲ ಕಾಡಿದ ಪುಸ್ತಕ ಇದು. ಸಮಗ್ರವಾಗಿ ಅಲ್ಲದಿದ್ದರು ಒಂದು ಮಟ್ಟಿಗೆ ಒಳ್ಳೆಯ ಓದಿನ ತೃಪ್ತಿ. ಬಹುಶಃ ಇನ್ನು ‘ಪತಂಜಲಿಯ ಯೋಗಸೂತ್ರಗಳು’ ಓದಿದರೆ‌ ಅನುಮಾನಗಳು ಬಗೆ ಹರಿಯಬಹುದೆಂಬ ಆಶೆಯಿದೆ.
ಈ ಪುಸ್ತಕದ ಅನುವಾದದ ಬಗ್ಗೆ ಹೇಳುವುದಾದರೆ ಸೊಗಸಾದ ಅನುವಾದ. ಎಲ್ಲೂ ಪರಕೀಯ ಅನಿಸದ ಪದಗಳು. ಹಾಗಾಗಿ ಓದಲೇಬೇಕಾದ ಪುಸ್ತಕಗಳ ಸಾಲಿಗೆ ಇದನ್ನೂ ಸೇರಿಸಿಕೊಳ್ಳಿ.

Prashanth Bhat

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಕನ್ನಡ - ಅನುವಾದಿತ, Uncategorized and tagged , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s