Gabriel Garcia Marquez ಜಗದ್ವಿಖ್ಯಾತ ಲೇಖಕ.ಅವನ one hundred years of solitude ಯಾವತ್ತಿಗೂ ನನ್ನ ಫೆವರೀಟ್ ಕಾದಂಬರಿ.ಮ್ಯಾಜಿಕಲ್ ರಿಯಲಿಸಂ ಎಂಬ ಪ್ರಕಾರದಿಂದ ನಮ್ಮನ್ನು ಸೆರೆ ಹಿಡಿವ ಅಪರೂಪದ ಬರಹಗಾರ.
ಮಾರ್ಕ್ವೆಜ್ ನ‌ ಹಲವಾರು ಪುಸ್ತಕಗಳು ಕನ್ನಡಕ್ಕೆ ಬಂದಿವೆ.

One hundred years of solitude ಎರಡು ಬಾರಿ ‘ನೂರು ವರ್ಷದ ಏಕಾಂತ'(ಅನುವಾದ – ಪ್ರಸನ್ನ) ಒಂದು ನೂರು ವರ್ಷಗಳ ಏಕಾಂತ (ಅನುವಾದ – ವಿಜಯಾ) ಅಂತ ಬಂದಿದೆ. ಎರಡೂ ಅನುವಾದಗಳು ಗೊಂದಲ ಹುಟ್ಟಿಸುತ್ತವೆ.ಪ್ರಸನ್ನ ಅನುವಾದಿತ ಪುಸ್ತಕದ ಮುಖಪುಟ ಇಡೀ ಪುಸ್ತಕದ ಸಾರ ಹಿಡಿದಿಡುತ್ತದೆ.

Love in the time of cholera ಮಾಂಡೋವಿ ಹೆಸರಲ್ಲಿ ರವಿ ಬೆಳಗೆರೆಯಿಂದ ಅದ್ಭುತವಾಗಿ ಬಂದಿದೆ.ಆದರೆ ಅದರಲ್ಲಿ ಮಾರ್ಕ್ವೆಜ್ ಗಿಂತ ರವಿ ಜಾಸ್ತಿ ಕಾಣುತ್ತಾರೆ.

Chronicles of a death foretold ಒಂದು ಸಾವಿನ ವೃತ್ತಾಂತ ಹೆಸರಲ್ಲಿ ಎಲ್.ಎಸ್.ಶೇಷಗಿರಿರಾವ್ ತಂದಿದ್ದಾರೆ. ಇದು ಬಹಳ ಚಂದವಿದೆ.ಇದರ ಪ್ರತಿ ಬಹುಶಃ ನನ್ನ ಬಳಿ ಮತ್ತು ಯಾವುದೋ ಗ್ರಂಥಾಲಯಗಳ ಎಡೆಯಲ್ಲಿ ಮಾತ್ರ ಇರುವುದು.

The general in his labyrinth ‘ವ್ಯೂಹ’ ಹೆಸರಲ್ಲಿ ಪಿ.ವಿ.ನಾರಾಯಣ ಅನುವಾದ ಮಾಡಿದ್ದಾರೆ.ಮಾರ್ಕ್ವೆಜ್ ನ ಅತ್ಯುತ್ತಮ ಅನುವಾದ ಇದೇ.

ಇದಲ್ಲದೆ ‘ಮಾರ್ಕ್ವೆಜ್’ ವಾಚಿಕೆ ಬಂದಿದೆ. ಅದರಲ್ಲಿ ಅವನ‌ ಕೆಲ ಕತೆಗಳ ಮತ್ತು ಕಾದಂಬರಿಯ ಮೊದಲ ಅಧ್ಯಾಯ ಇದೆ. ಈ ಅನುವಾದವೂ ಅತ್ಯುತ್ತಮ.  ಇದು ಬಿಟ್ಟರೆ ಮಾರ್ಕ್ವೆಜ್ ಕತೆಗಳು ಅಂತೊಂದು ಪುಸ್ತಕ ಬಂದಿದೆ. ಸಾಧಾರಣ ಅನುವಾದ.
ಇವಿಷ್ಟು ನನಗೆ ತಿಳಿದ ಕನ್ನಡದ ಮಾರ್ಕ್ವೆಜ್.

(ಮೂರನೆಯ ದಡ ಅಂತೊಂದು ಮ್ಯಾಜಿಕಲ್ ರಿಯಲಿಸಂ ಕತೆಗಳ ಪುಸ್ತಕ ಬಂದಿತ್ತು.ಆ ಪುಸ್ತಕ ನಾನು ಓದಿಲ್ಲದ ಕಾರಣ ಅದರಲ್ಲಿ ಇವನ‌ ಕತೆ ಇದೆಯಾ ಇಲ್ಲವಾ ಗೊತ್ತಿಲ್ಲ)

Prashanth Bhat

S G Akshay Kumar ಜಪಾನಿನ ಹಾರುಕಿ ಮೂರಾಕಾಮಿ, ಭಾರತೀಯ ಮೂಲದ ಸಲ್ಮಾನ್ ರಶ್ದಿ ಕೂಡ magical realism na ಕೃತಿ ಗಳನ್ನ ರಚಿಸಿದ್ದಾರೆ

Gerald Carlo ಗೇಬ್ರಿಯಲ್ ಗಾರ್ಸಿಯ ಮಾರ್ಕೇಜನ ‘No One Writes to the Colonel’ ಅನ್ನು ಶ್ರೀನಿವಾಸ ವೈಧ್ಯರವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಅದು ನನ್ನ ಪುಸ್ತಕ ಸಂಗ್ರಹದಲ್ಲಿದೆ. ಹೆಸರು ಮರೆತು ಹೋಗಿದೆ. ಪುಸ್ತಕ ಕೈಗೆ ಸಿಗುತ್ತಿಲ್ಲ. ಮಾರ್ಕೇಜನ The Handsomest Man Drowned Man in the World ಕತೆಯನ್ನು ನಾನು ಕನ್ನಡಕ್ಕೆ ಅನುವಾದಿಸಿದ್ದೆ. ಇದು ಒಂದರೆಡು ವರ್ಷಗಳ ಹಿಂದೆ ‘ಅವಧಿ’ ಜಾಲತಾಣದಲ್ಲಿ ಪ್ರಕಟವಾಗಿತ್ತು. ಇದನ್ನು ಡಾ. ಹೆಚ್.ಎಸ್. ಅನುಪಮರವರು ತಾವು ಸಂಪಾದಿಸಿದ್ದ ಕುವೆಂಪು ಭಾಷಾ ಭಾರತಿ ಅನುವಾದಿತ ಕತೆಗಳ ಸಂಗ್ರಹಕ್ಕೆ ಆಯ್ದು ಪ್ರಕಟಿಸಿದ್ದರು. ಮತ್ತೊಂದು ಕತೆ A Very Old Man with Enormous Wings ಕತೆಯನ್ನು ನಾನು ‘ಅಗಾಧ ರೆಕ್ಕೆಗಳ ಹಣ್ಣು ಹಣ್ಣು ಮುದುಕ’ ನೆಂದು ಅನುವಾದಿಸಿ ಎರಡು ಮೂರು ಪತ್ರಿಕೆಗಳಿಗೆ ಕಳುಹಿಸಿದೆ. ಪ್ರಕಟಿಸುವುದಿರಲಿ, ಒಬ್ಬರೂ ತಿರಸ್ಕರಿಸಿದ್ದೇವೆ ಎಂದು ಮರು ಅಂಚೆಯನ್ನು ಕಳುಹಿಸುವ ಸೌಜನ್ಯತೆಯನ್ನೂ ತೋರಿಸಲಿಲ್ಲ!

Advertisements