ಜಂಬೂದ್ವೀಪೇ, ಭರತವರ್ಷೇ, ಭರತಖಂಡೇ, ಬೆಂದಕಾಳೂರೇ, ಮಲ್ಲೇಶ್ವರೇ, ಸಂಪಿಗೆ ರಸ್ತೇ, ಲಕ್ಷ್ಮೀ ಜುವೆಲ್ಲರ್ಸೇ, ಬಲಭಾಗಸ್ಯೇನಲ್ಲಿ……. ಒಂದು ಸೆಕೆಂಡ್ ಹ್ಯಾಂಡ್ ಪುಸ್ತಕ ಮಳಿಗೆ ಇದೆ…… ‘ರೈನ್ ಬೋ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆ’ ಅಂತ ಹೆಸರು…..

‘ಸಾಯಿಸುತೆ’ ಅಭಿಮಾನಿಗಳು ಭೇಟಿ ಕೊಡಬಹುದು……ಅವರ, ಒಂದ್ರಾಶಿ ಪುಸ್ತಕಗಳು ಇಲ್ಲಿವೆ !!

ಅದು ಬಿಟ್ಟರೆ ಕನ್ನಡ ಪುಸ್ತಕಗಳು ಅಂತ ಇರೋದು ‘ಸೃಷ್ಟಿ ವೆಂಚರ್ಸ್’ ಅವರ ಅಳಿದುಳಿದ ಪುಸ್ತಕಗಳು, ವಟಸಾವಿತ್ರಿ ವ್ರತ, ವರಮಹಾಲಕ್ಷ್ಮಿ ವ್ರತ, ಲಲಿತಾಷ್ಟಕ, ಪುರಂದರ ದಾಸರ ಭಜನೆಗಳು, ಪಾಕೀಟು ಕೇಲೆಂಡರು, ರಾಶೀಫಲ, ಆ ರುಚಿ, ಈ ರುಚಿ……..ಇಂಥವುಗಳು……

ಆದರೆ ಇಂಗ್ಲೀಷ್ ಸಾಹಿತ್ಯ ಪ್ರಿಯರಿಗೆ ಮಾತ್ರ ಹಬ್ಬ ಮಾಡಿಕೊಳ್ಳುವಷ್ಟು ಪುಸ್ತಕಗಳಿವೆ !!

ಇವತ್ತೊಂದು ಕಲೆಕ್ಷನ್ ಕಂಡೆ: ರೀಡರ್ಸ್ ಡೈಜೆಸ್ಟ್ ಪ್ರಕಟಿತ ‘ಕಂಡೆನ್ಸ್ಡ್ ಬುಕ್ಸ್’ ಸೀರೀಸಿನ (1986) ಮೂವತ್ತು ನಲವತ್ತು ಪುಸ್ತಕಗಳಿದ್ದವು…….ಒಂದೊಂದು ಹೊತ್ತಗೆಯಲ್ಲೂ ಕನಿಷ್ಠ ನಾಲ್ಕರಿಂದ ಐದು ಕಾದಂಬರಿಗಳು ನಿಕ್ಕಿ….. ಜೆಫ್ರಿ ಆರ್ಚರ್, ಜಿಮ್ ಕಾರ್ಬೆಟ್, ಪ್ಯಾಟ್ರಿಕ್ ಕ್ವೆಂಟಿನ್, ಎಡ್ನಾ ಫೆರ್ಬರ್, ಜಾನ್ ಸ್ಟೀನ್ಬೆಕ್, ಹೆರ್ಮಾನ್ ವೋಕ್, ಜಾನ್ ಪಿ ಮಾರ್ಕ್ವಾಂಡ್, ಜಾನ್ ಮೂರ್………ಮುಂತಾದ ಘಟಾನುಘಟಿಗಳು ಬರೆದಂಥ ಕಾದಂಬರಿಗಳು……!!

– ಸುಧೀರ್ ಪ್ರಭು

Shashi Kumar : ಗಾಂಧಿನಗರದ ಉಪ್ಪರಪೇಟೆ ಪೋಲಿಸ್ ಸ್ಟೇಷನಿನಾ ಪಕ್ಕ second hand ಕನ್ನಡ ಪುಸ್ತಕಗಳು ಅರ್ಧ ಬೆಲೆಗೆ ಸಿಗುತ್ತವೆ.ಸೋಮವಾರ ಹೊರತುಪಡಿಸಿ.

Advertisements