111

ಈಗಿನ ಯಾಂತ್ರಿಕ ಯುಗದಲ್ಲಿ ನಮಗೆ ಯಾವುದಕ್ಕೂ ಸಮಯವಿಲ್ಲ. ಓದಲು, ಬರೆಯಲು, ನಿದ್ದೆ ಮಾಡಲು, ಕೊನೆಗೆ ದೇವರ ಮುಂದೆ ಎರಡು ನಿಮಿಷ ಕುಳಿತು ಧ್ಯಾನ ಮಾಡಲೂ ಕೂಡ ನಮ್ಮಲ್ಲಿ ಸಮಯವಿಲ್ಲ. ಇಂತಹ ಬಿಡುವಿರದ ಸಮಯದಲ್ಲೂ ನಮಗೆ ಗೀತೆ ಅಥವಾ ಭಗವದ್ಗೀತೆಯನ್ನು ಓದುವ ಇಚ್ಛೆಯಿದ್ದರೆ ಇದು (ಗೀತೆ ಬಚ್ಚಿಟ್ಟಿದ್ದ ಬದುಕಿನ ಪಾಠಗಳು) ನಮಗೆ ಸೂಕ್ತ ಪುಸ್ತಕವಾದೀತು . ಗೀತೆಯ ಸಾರವನ್ನು ಬೇರೊಬ್ಬರ ಸಹಾಯವಿಲ್ಲದೇ ಅರಿಯಬಯಸುವವರಿಗೆ ಇದೊಂದು ಅದ್ಭುತ ಕೈಪಿಡಿ. ಭಗವದ್ಗೀತೆಯಲ್ಲಿರುವಂತೆ ಈ ಪುಸ್ತಕದಲ್ಲಿ 18 ಅಧ್ಯಾಯಗಳಿವೆ. ಪ್ರತಿ ಅಧ್ಯಾಯದಲ್ಲೂ ಒಂದೊಂದು ಸಂಸ್ಕೃತ ಶ್ಲೋಕವಿದೆ. ಆ ಅಧ್ಯಾಯದ ಆಶಯಕ್ಕೆ ತಕ್ಕುದಾದ ಒಂದು ಅದ್ಭುತವಾದ ನೀತಿಕಥೆಯಿದೆ. ಆ ಅಧ್ಯಾಯದಿಂದ ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಅಳವಡಿಸಿಕೊಳ್ಳಬೇಕಾದ ನೀತಿಯೇನು? ಎಂಬ ಮಾಹಿತಿಯಿದೆ. ಮರೆಯಕೂಡದ ಮಾಣಿಕ್ಯ ಎಂಬ ಶೀರ್ಷಿಕೆಯಡಿ ಅನನ್ಯವಾದ ಚಿಂತನೆಗಳಿವೆ. ಮ್ಯಾನೇಜ್ಮೆಂಟ್ ಟಿಪ್ಸ್ ಎಂಬುದರಡಿ ಗೀತೆಯ ಸಾರವನ್ನು ಕಂಪನಿಗಳ ಮ್ಯಾನೇಜ್ಮೆಂಟ್ ಗಳಲ್ಲಿ ಬಳಸಿಕೊಳ್ಳುವ ಬಗ್ಗೆ ಬರೆದಿದ್ದಾರೆ. ಇವಲ್ಲದೆ, ಪ್ರತಿ ಅಧ್ಯಾಯದಲ್ಲೂ ಮಧ್ವಾಚಾರ್ಯರು, ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಕೆ. ಎಸ್. ನಾರಾಯಣಾಚಾರ್ಯರು, ಬನ್ನಂಜೆ ಗೋವಿಂದಾಚಾರ್ಯರು ಇನ್ನೂ ಮುಂತಾದವರ ಉವಾಚಗಳಿವೆ.

ಒಟ್ರಾಶಿ, ಎಲ್ಲರಿಗೂ ಸುಲಭವಾಗಿ ಅರ್ಥವಾಗುವ, ಸರಳ ಭಾಷೆಯಲ್ಲಿ ಬರೆದಿರುವ, ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಗುವ, ಎಲ್ಲ ವಯೋಮಾನದವರಿಗೂ, ಎಲ್ಲ ಕಾಲಕ್ಕೂ ಸಲ್ಲುವ ಅತ್ಯುತ್ತಮವಾದ ಪುಸ್ತಕವಿದು. ನೀವೂ ಓದಿ. ನಮಸ್ಕಾರ.

ವಿಮರ್ಶಕರು : Rampura Raghothama

Advertisements