The sun also rises – Ernest Hemingway

81LIRzpbf8L

ದೊಡ್ಡ ಲೇಖಕರ ಓದುವ ಅಪಾಯವೇ ಬೇರೆ! ನೀವು ಅವರ ಪುಸ್ತಕ ತೆಗೆದುಕೊಳ್ಳುವಾಗಲೇ ಆಗಲೇ ಅಲ್ಲೊಂದು ಪ್ರಭಾವಳಿ ಇರುತ್ತದೆ. ಇದನ್ನು ಓದಲು ಕಷ್ಟ ಆದರೆ? ಅರ್ಥವಾಗದಿದ್ದರೆ? ಇಷ್ಟವಾಗದಿದ್ದರೆ? ಬೋರಾದರೆ? ಇತ್ಯಾದಿ ‘ರೆ’ಗಳು.
ನೂರಕ್ಕೆ ಎಪ್ಪತ್ತೈದು ಸಲ ಆಗುವುದೂ ಅದೇ. Ayan rand ನ atlas shrugged ಶುರುಮಾಡಿ classic ಅಂತ ಅರ್ಧ ಓದಿ ತಲೆ ಹಾಳಾಗಿ, ಬಿಟ್ಟಿದ್ದೆ.ಯಾಕೆಂದರೆ ಆ ಪುಸ್ತಕಗಳು ‘ಕ್ಲಾಸಿಕ್’ ಅನಿಸಿಕೊಂಡ ಕಾಲಘಟ್ಟ ನಾವು ದಾಟಿರುತ್ತೇವೆ. ನಮಗೆ ಸಂಪೂರ್ಣ ಅಪರಿಚಿತವಾದ ಕಾಲ,ಸ್ಥಳಗಳ ಕುರಿತು ಯಾರೋ ಬರೆದ ಪುಸ್ತಕಗಳ ‘ಕ್ಲಾಸಿಕ್’ ಕಾರಣಕ್ಕೆ ಓದಿ ಹೊಗಳಬೇಕಾದ ಅನಿವಾರ್ಯತೆಗೆ ಸಿಲುಕುತ್ತೇವೆ!

ಹೆಮಿಂಗ್ ವೇನ ಒಂದು ನನಗೆ ಯಾವಾಗಲೋ ಹೈಸ್ಕೂಲೋ,ಪ್ರೈಮರಿಯಲ್ಲೋ ಪಾಠಕ್ಕಿತ್ತು. ಐದು ಪೈಸೆ ಇಷ್ಟವಾಗದ ನೀರಸ ಕತೆ.ಒಬ್ಬ ಹುಡುಗನಿಗೆ ಸೆಲ್ಸಿಯಸ್ ಮತ್ತು ಫ್ಯಾರನ್ ಹೀಟ್ ವ್ಯತ್ಯಾಸ ಗೊತ್ತಿಲ್ಲದಡ ಜ್ವರ ಬಂದಾಗ ಸಾವಿಗೆ ಕಾಯೋ ಕತೆ ಅದು. ಅದಾದ ಬಳಿಕ ಎಷ್ಟೋ ವರ್ಷ ಕಳೆದು ಚಿಕ್ಕ ಪುಸ್ತಕ ಅಂತ old man and the sea ಓದಿದೆ. ತಣ್ಣಗಿನ ನದಿ ಹರಿವಂತಹ ಭಾಷೆಯ ಬಳಕೆಯಿಂದ ಭಯಂಕರ ಇಷ್ಟವಾಯಿತು. ಅದನ್ನು ಮೂಲದಲ್ಲೇ ಓದಿದ್ದಕ್ಕೆ ಬಚಾವ್.
ಹಾಗೇ ಮೊನ್ನೆ ಅವನ the sun also rises ಓದಲು ಶುರುಮಾಡಿದೆ. ಮೊದಲ ಭಾಗ (book 1) ಸರಿಸುಮಾರು ಏಳು ಚಾಪ್ಟರ್ ಓದುವಾಗ ತಲೆ ಬಿಸಿಯಾಯಿತು. ನನ್ನ ಮಿತ್ರರಾದ ಗುರುರಾಜ ಕೋಡ್ಕಣಿಗಯವರಿಗೆ, ಹೆಮಿಂಗ್ ವೇ ಅಂದರೆ ಆಯಿತು. ಅವರಿಗೆ ಮೆಸೇಜು ಮಾಡಿದೆ. ‘ಯಾಕೋ ಭಾರೀ ಗೊಂದಲವಾಗ್ತಾ ಇದೆ. ಏನು ಬರೀತಾ ಇದಾನೆ ಅರ್ಥವೂ ಅಗ್ತಾ ಇಲ್ಲ ‘ ಅಂತ. ಅವರು ಅವನ prose ಅನ್ನು ಗಮನಿಸಿ ಅಂತ ಮಾತ್ರ ಹೇಳಿದರು.
ಅದಾದ ಮೇಲೆ ಎರಡನೆಯ ಭಾಗ (book 2) ಶುರು ಮಾಡಿದೆ. ಮೊದಲ ಚಾಪ್ಟರ್ ಓದಿ ಏನೋ ಕೆಲಸಕ್ಕೆ ಅಂತ ಹೊರಹೋದೆ. ಹೆಮಿಂಗ್ ವೇ ಓದಿದವರಿಗೆ ಅವನು ಸಂಭಾಷಣೆಗಳ ಮೂಲಕ ಪಾತ್ರಸ್ವಭಾವ ಪರಿಚಯ ಮಾಡುವ ಬಗೆ ಅರಿವಿರುತ್ತದೆ. ಹಾಗಾಗಿ ಹೊರಗಿದ್ದಾಗಲೆಲ್ಲ ಅದೇ ನೆನಪು. ವಾಪಸ್ ಬಂದು ಮತ್ತೆ ಮುಂದುವರೆಸಿದಾಗ ರುಚಿ ಹತ್ತಿತ್ತು. ಆಮೇಲೆ ಸರಾಗ!
ಈ ಕಾದಂಬರಿ ಅವನ‌ ಮೊದಲನೆಯದು. 1926 ಪ್ರಕಟಿತ. ಗೆಳೆಯರ ಕೂಟ, ಮಸ್ತಿ, ವೈನ್, ಪ್ರಯಾಣದ ಸುಖ(ಇದರ ವರ್ಣನೆ ಓದಿಯೇ ಗೊತ್ತಾಗಬೇಕು) ,ಬುಲ್ ಫೈಟಿಂಗ್ ಇವೆಲ್ಲ ತುಂಬಿ ತುಳುಕುವ ವಿವರಗಳು! ಮೀನು ಶಿಕಾರಿಯ ಒಂಸು ಪ್ರಾಂಗ ನನಗೆ ತೇಜಸ್ವಿಯ ನೆನಪಿಸಿತು.ಕತೆ ಬಹಳ ಅಂತೇನೋ ಇಲ್ಲ ಇರುವ ಕತೆ ನಿಧಾನಗತಿಯದ್ದು! ಆದರೆ ನಾವೇ ಅಲ್ಲಿದ್ದೇವೆ ಅನ್ನುವಂತೆ ಹೆಮಿಂಗ್ ವೇ ಬರಿತಾನಲ್ಲ ಅದು ಅವನ ತಾಕತ್ತು! ಈ ಪ್ಯಾರಾ ಗಮನಿಸಿ
The bus climbed steadily up the road.the country was barren and rocks stuck up through the clay. There was no grass beside the road.looking back we could see the country spread out below. Far back the fields were squares of green and brown on the hill sides.making the horizon were the brown mountains.they were strangely shaped.as we climbed higher the horizon kept changing. As the bus ground slowly up the road we could see other mountains coming up in the south.then the road came over the crest,flattened out,and went into a forest.it was a forest of cork oaks and the sun came through the tree in patches,and there were cattle grazing back in the trees.we went through the forest and the road came out and turned along a rise of land and out ahead of us was a rolling green plain,with dark mountains beyond it.
ನೀವೇ ಆ ಬಸ್ಸಲ್ಲಿ ಕೂತು ಪ್ರಯಾಣ ಮಾಡುತ್ತಿದ್ದಿರೋ ಅಂತನಿಸುವ ವರ್ಣನೆ.
ಹೆಮಿಂಗ್ ವೇ ಆರಾಮದ ಸಾವಧಾನದ ಬರಹಗಾರ. ಉಸಿರುಗಟ್ಟಿಸುವ ಬುಲ್ ಫೈಟಿಂಗ್ ನ್ನು ಅವನು ನಿಧಾನದ ಕಲೆಯಲ್ಲೇ ಪರಿಣಾಮಕಾರಿಯಾಗಿ ಹಿಡಿದ.
ಇಡಿಯ ಕಾದಂಬರಿ ಒಂದು ಜಾತ್ರೆಯಂತಿದೆ.
ಭಾಗ 3 ರ ಆರಂಭದ ಸಾಲು in the morning it was all over .ಓದುವಾಗಲೇ ಮನೆತುಂಬ ತುಂಬಿಕೊಂಡ ನೆಂಟರೆಲ್ಲ ಹಬ್ಬ ಮುಗಿದು ಹೋದಾಗ ಮನೆಯೆಲ್ಲ ಖಾಲಿ ಖಾಲಿ ಅನಿಸ್ತದಲ್ಲ ಆ ಭಾವ.ದಟ್ಟ ನಿರ್ವಾತ! ಎಲ್ಲೋ ಯಾವಾಗಲೋ ನಡೆದ ಕಾಲ್ಪನಿಕ ಕತೆಯಲ್ಲಿ ನಾವು ಹೊಕ್ಕು ಬರುವ ಭಾವ ಇದೆಯಲ್ಲ ಅದರ ಮುಂದೆ ಯಾವುದೂ ಇಲ್ಲ ಬಿಡಿ!

ವಿಮರ್ಶಕರು:  Prashanth Bhat

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಅರ್ನೆಸ್ಟ್ ಹೆಮಿಂಗ್ವೇ, ಇಂಗ್ಲೀಷ್, Uncategorized and tagged . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s