ಬದುಕಿನ ಇನ್ನೊಂದು ಹಾದಿ – ಡಾ. ಆರ್. ಲಕ್ಷ್ಮೀನಾರಾಯಣ್

badukina-innondu-haadi

 

ಯೋಗ ಅನ್ನುವುದು ಒಂದು ರಿಲಿಜನ್ ಅಲ್ಲ. ಯೋಗ ಯಾವುದೇ ಕಾರಣಕ್ಕೂ ಹಿಂದೂ, ಇಸ್ಲಾಂ ಅಥವಾ ಕ್ರಿಶ್ಚಿಯನ್ ರಿಲಿಜನ್ ಆಗಲು ಸಾಧ್ಯವಿಲ್ಲ. ಭಾರತದ ನೆಲದಲ್ಲಿ ಯೋಗ ಹುಟ್ಟಿಕೊಂಡಿತು ಅಷ್ಟೇ ಹೊರತು ಪ್ರಚಲಿತ ಹಿಂದೂತ್ವಕ್ಕೂ ಯೋಗಕ್ಕೂ ಯಾವುದೇ ಸಂಬಂಧವಿಲ್ಲ. ಹೆಚ್ಚಿನ ವೈಜ್ಞಾನಿಕ ಬೆಳವಣಿಗೆಗೆ ಕಾರಣರಾದವರೂ ಕ್ರಿಶ್ಚಿಯನ್ನರು ಆದರೆ ಗಣಿತ, ಭೌತಶಾಸ್ತ್ರ ಇತ್ಯಾದಿ ವಿಜ್ಞಾನಿಗಳಿಗೂ ಕ್ರಿಶ್ಚಿಯನಾಟಿಗೂ ಯಾವುದೇ ಸಂಬಂಧವಿಲ್ಲ.

ಅದೇ ರೀತಿಯಲ್ಲಿ ಯೋಗ ಅನ್ನುವುದನ್ನು ಭಾರತೀಯ ಪರಂಪರೆ ಕಂಡುಹಿಡಿಯಿತು. ಯೋಗವನ್ನು ಕರಾರುವಕ್ಕ ವಿಜ್ಞಾನದ ಮಟ್ಟಕ್ಕೆ ತೆಗೆದುಕೊಂಡು ಹೋದವನು #ಪತಂಜಲಿ. ಮನುಷ್ಯನ ಒಳಜಗತ್ತಿನ ವಿಜ್ಞಾನಿ ಪತಂಜಲಿ. ಪತಂಜಲಿ ತನ್ನ ಸೂತ್ರಗಳಲ್ಲಿ ಮನುಷ್ಯನ ಒಳಜಗತ್ತನ್ನು ಗಣಿತದ ಸಮೀಕರಣದಂತೆ ಸೂತ್ರಗಳಲ್ಲಿ ದಾಖಲಿಸಿದ್ದಾನೆ. ಪತಂಜಲಿ ಯೋಗ ಅಭ್ಯಾಸ ಮಾಡುವವನಿಂದ ಯಾವುದೇ ನಂಬಿಕೆಯನ್ನು ಅಪೇಕ್ಷಿಸುವುದಿಲ್ಲ. ಅವನು ಯೋಗಾಭ್ಯಾಸಿಯಿಂದ ಅಪೇಕ್ಷಿಸುವುದು ತನ್ನ ಸೂತ್ರಗಳನ್ನು ಯೋಗಾಭ್ಯಾಸದಿಂದ ಪರೀಕ್ಷಿಸಲು. ಜಗತ್ತಿನ ಧಾರ್ಮಿಕ ಇತಿಹಾಸದಲ್ಲಿ ತಮ್ಮ ಮಾತುಗಳನ್ನು ನಂಬುವ ಅವಶ್ಯಕತೆ ಇಲ್ಲ ಅವುಗಳನ್ನು ನೀವುಗಳು ಪರೀಕ್ಷಿಸಬಹುದು ಎಂದು ಹೇಳಿದವರು ಇಬ್ಬರೆ ವ್ಯಕ್ತಿಗಳು ಅವರು ಪತಂಜಲಿ ಮತ್ತು #ಬುದ್ಧ.

ಸಿಗ್ಮಂಡ್ ಫ್ರಾಯ್ಡನ ಮನೋವಿಜ್ಞಾನವನ್ನು ಹಿಡಿದುಕೊಂಡು ನಾವುಗಳು ನಮ್ಮ ಬುದ್ಧ, ಮಹಾವೀರ, ರಮಣ ಮಹರ್ಷಿ ಮತ್ತು ರಾಮಕೃಷ್ಣ ಪರಮಹಂಸರಂಥ ವ್ಯಕ್ತಿಗಳನ್ನು ನಮ್ಮ ಪ್ರಜ್ಞೆ ಗ್ರಹಿಸಲು ಸಾಧ್ಯವಿಲ್ಲ. ಸಿಗ್ಮಂಡ್ ಫ್ರಾಯ್ಡ ಕ್ರಿಶ್ಚಿಯನಾಟಿಯಿಂದ ಪ್ರಭಾವಿತನಾಗಿ ತನ್ನ ಮನೋವಿಜ್ಞಾನ ಥಿಯರಿಯನ್ನು ಕಟ್ಟಿದ್ದು. ಅವನಿಗೆ ಭಾರತೀಯ ಅಧ್ಯಾತ್ಮ ಮತ್ತು ಯೋಗದ ಪರಿಚಯವಿರಲಿಲ್ಲ. ಈ ಕಾರಣದಿಂದ ಸಿಗ್ಮಂಡ್ ಫ್ರಾಯ್ಡನ ಹಾದಿಯನ್ನು ಬಿಟ್ಟು ಭಾರತೀಯ ಅಧ್ಯಾತ್ಮಿಕತೆಯನ್ನು ಮನೋವೈಜ್ಞಾನಿಕ ನೆಲೆಯಲ್ಲಿ ಅಭ್ಯಾಸ ಮಾಡಿದವರು ಸುಧೀರ್ ಕಾಕರ್. ಆಸಕ್ತರು ಅವರ ಪುಸ್ತಕಗಳನ್ನು ಓದಬಹುದು. ಅಂತಹ ಇನ್ನೊಂದು ಪ್ರಯತ್ನ ಆರ್. ಎಲ್. ಕಪೂರ್ ರವರದು (ಇವರು ಶಿವರಾಮ ಕಾರಂತರ ಅಳಿಯ). ಇವರು ಒಬ್ಬ ಮನೋವಿಜ್ಞಾನ ಯಾಗಿ ಸ್ವತಃ ಪತಂಜಲಿ ಯೋಗ ಸೂತ್ರಗಳ ಅಧ್ಯಯನ ಮಾಡಿ, ಆ ಸೂತ್ರಗಳನ್ನು ಗುರುವಿನ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿ ಮನಸ್ಸು, ದೇಹ ಮತ್ತು ಪ್ರಜ್ಞೆಯ ಸ್ತರದಲ್ಲಿ ಯಾವೆಲ್ಲ ಬದಲಾವಣೆಗಳು ಆಗುತ್ತವೆ ಅನ್ನುವುದನ್ನು ಒಬ್ಬ ವಿಜ್ಞಾನಿಯಾಗಿ ದಾಖಲಿಸಿದ್ದಾರೆ. ಯೋಗಾಭ್ಯಾಸದ ಸಮಯದಲ್ಲಿ ಅವರು ಬರೆದುಕೊಂಡಿರುವ ದಿನಚರಿಯನ್ನು ಪುಸ್ತಕದಲ್ಲಿ ದಾಖಲಿಸಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವರು ತಮ್ಮ ಕನಸುಗಳನ್ನು ದಾಖಲಿಸಿದ್ದಾರೆ. ಇದರಿಂದ ಒಬ್ಬ ಮನೋವಿಜ್ಞಾನಿಗೆ ಅಧ್ಯಾತ್ಮ ಮತ್ತು ಮನಸ್ಸನ್ನು ಅಭ್ಯಸಿಸಲು ಬಹಳ ಉಪಯೋಗವಾಗುತ್ತದೆ. ಈ ಪುಸ್ತಕ ಕಪೂರ್ ರವರ ಇಪ್ಪತ್ತೈದು ವರ್ಷಗಳ ಸಂಶೋಧನೆಯ ಫಲ. ಕಪೂರ್ ತಮ್ಮ ಪುಸ್ತಕದಲ್ಲಿ ಬದುಕಿನ ಇನ್ನೊಂದು ಹಾದಿಯ ಅನ್ವೇಷಣೆ ಮಾಡಿದ್ದಾರೆ. ಯೋಗದಲ್ಲಿ ಆಸಕ್ತಿ ಇರುವವರು ಓದಲೇಬೇಕಾದ ಪುಸ್ತಕ ಇದು.

#ವಿಶೇಷ_ಸೂಚನೆ : ನಮ್ಮ ಪ್ರಧಾನಿಗಳು ಪ್ರಮೋಟ್ ಮಾಡುತ್ತಿರುವ ಯೋಗಕ್ಕೂ, ಬಾಬಾ ರಾಮದೇವ್ ನ ಯೋಗಕ್ಕೂ ಈ ಪುಸ್ತಕದ ಯೋಗಕ್ಕೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಈ ಫೋಸ್ಟ ನ ಓದುಗರು ಪ್ರಚಲಿತ ಯೋಗದ ವಿದ್ಯಮಾನಗಳ ಜೊತೆಗೆ ಈ ಪುಸ್ತಕದ ವಿಚಾರಗಳನ್ನು ಹೋಲಿಕೆ ಮಾಡಬಾರದು ಅನ್ನುವುದು ನನ್ನ ವಿನಂತಿ.

ವಿಮರ್ಶಕರು: ನಾಗೇಗೌಡ ಕೀಲಾರ ಶಿವಲಿಂಗಯ್ಯ

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಕನ್ನಡ, ಲಕ್ಷ್ಮೀನಾರಾಯಣ್.ಆರ್, Uncategorized and tagged , , , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s