‘ಚೈತ್ರ ವೈಶಾಖ ವಸಂತ, ವಿರಹದ ಸಂಕ್ಷಿಪ್ತ ಪದಕೋಶ’ – ಜೋಗಿ

JOGIಚೈತ್ರ ವೈಶಾಖ ವಸಂತ ಮತ್ತು ವಿರಹದ ಸಂಕ್ಷಿಪ್ತ ಪದಕೋಶ ಇವು ಜೋಗಿಯವರ ಕಾದಂಬರಿಗಳು . ಅವರ ವಿಶಿಷ್ಟ ನಿರೂಪಣಾ ಶೈಲಿ, ಕಥೆಯಲ್ಲಿ ನಮ್ಮನ್ನು ಪೂರ್ಣವಾಗಿ ಮೈಮರೆಯುವಂತೆ ಮಾಡಿ ಕುತೂಹಲ ಮೂಡಿಸಿ, ಕಾದಂಬರಿ ಮುಗಿಸದೆ ನಿದ್ದೆ ಬರುವಂತಿಲ್ಲ ಎಂಬಂತಹ ಕುತೂಹಲವನ್ನು ಸೃಷ್ಟಿಸಿ ಬಿಡುತ್ತದೆ. ಕಥೆ ಇರಬೇಕಾದುದ್ದೇ ಹೀಗೆ, ಕಥೆಯನ್ನು ಹೇಳುತ್ತಾ ನಮ್ಮನ್ನು ಕೊನೆಯವರೆಗೆ ತಲುಪಿಸಿಬಿಟ್ಟರೆ ಓದಾದ ಮೇಲೆ, ವಾವ್ ಸುಂದರ ಪುಸ್ತಕ ಎನ್ನಬಹುದಷ್ಟೇ. ಅದೇ ಕಥೆಯ ಅಂತ್ಯವನ್ನು ನಮ್ಮ ಊಹೆಗೆ ಬಿಟ್ಟು ಚಿಂತನೆಯ ಬಾಗಿಲುಗಳನ್ನು ತಡಕುವಂತೆ ಮಾಡಿದರೆ ನಮ್ಮಲ್ಲೇ ಕಲ್ಪನೆಗಳು ತಲೆದೋರಿ ಒಂದು ಬಗೆಯ ಅವ್ಯಕ್ತ ಆನಂದ ಮೂಡಿ, ಕಾದಂಬರಿಗಳನ್ನು ಪೂರ್ಣವಾಗಿ ಅನುಭವಿಸುವಂತಾಗುತ್ತದೆ.
ಕಾದಂಬರಿಗಳಲ್ಲಿ ಅವರು ಬದುಕಿನ ಸತ್ಯಗಳನ್ನು, ವಾಸ್ತವ ಸಮಾಜದಲ್ಲಿಯ ವಿಚಾರಗಳನ್ನು ಹೇಳುವ ಬಗೆ ಅನನ್ಯವಾದದ್ದು. ಕಾದಂಬರಿಗಳಲ್ಲಿಯ ಕೆಲವೊಂದು ಸಾಲುಗಳಂತೂ ಅದ್ಭುತವಾಗಿವೆ.

“ಚೈತ್ರ ವೈಶಾಖ ವಸಂತ” ಕಾದಂಬರಿಯ ಕಥಾನಾಯಕಿ ವೈಶಾಲಿಯ ಜೀವನದಲ್ಲಿ ನಡೆಯುವ ಘಟನೆಗಳು, ಹೊಸ ತಿರುವುಗಳು, ಸಂಬಂಧಗಳಿಗೆ ದಾಂಪತ್ಯ ಜೀವನಕ್ಕೆ ಹೊಸ ಬಗೆಯ ಅರ್ಥ ಒದಗಿಸುತ್ತ, ಹಸಿಹಸಿಯಾಗಿ ಬಿಡಿಸಿಟ್ಟಿದ್ದಾರೆ. ಕಾದಂಬರಿಯಲ್ಲಿ ಮೂಡುವ ಅನೇಕ ಪ್ರಶ್ನೆಗಳು, ಕೊನೆಯವರೆಗೂ ಪ್ರಶ್ನೆಗಳಾಗಿಯೇ ಉಳಿದು ಗೊಂದಲ ಮೂಡಿಸುವುದು ಕಾದಂಬರಿಯ ವೈಶಿಷ್ಟ್ಯ..

ಇನ್ನು “ವಿರಹದ ಸಂಕ್ಷಿಪ್ತ ಪದಕೋಶ ” ಕಾದಂಬರಿಯೂ ಸುಂದರವಾಗಿದೆ. ಇಲ್ಲಿ ಬರುವ ಪಾತ್ರಗಳ ಕಲ್ಪನೆಯೇ ಅದ್ಭುತ. ವಿಶ್ವಾಸ ಕಾರಂತನ ಪಾತ್ರವಂತೂ ಕಾಡಿಬಿಡುವಂತದ್ದು. ಬದುಕನ್ನು ನೋಡುವ ರೀತಿ, ಸಂಬಂಧಗಳು, ವ್ಯಕ್ತಿಗಳು ಅವನ ಜೀವನದಲ್ಲಿ ಪ್ರಮುಖರೇ ಅಲ್ಲವೆನ್ನುವಂತಿರುವ ಅವನ ನಿಲುವು ಅಚ್ಚರಿ ಮೂಡಿಸುವಂತದ್ದು..
ಒಮ್ಮೆ ಓದಿ ನೋಡಿ ವಿಭಿನ್ನ ಪುಸ್ತಕಗಳು, ಇಷ್ಟವಾಗಬಹದು.
ಧನ್ಯವಾದಗಳು.

ಕವಿತಾ ಭಟ್

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಕನ್ನಡ, ಜೋಗಿ, Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s