‘ಹಿಜಾಬ್’ – ಗುರುಪ್ರಸಾದ ಕಾಗಿನೆಲೆ

Image may contain: 1 person, smiling

ವಲಸೆ ಅನ್ನುವುದು ಮನುಷ್ಯನ ಮೂಲ ಗುಣ. ಕಾಲಾನಂತರದಲ್ಲಿ ಮನುಷ್ಯ ಒಂದು ಭೌಗೋಳಿಕ ಪ್ರದೇಶದಲ್ಲಿ ನೆಲೆ ನಿಲ್ಲಲು ಕಲಿತುಕೊಂಡ. ಆದರೆ ಸಾಮ್ರಾಜ್ಯಶಾಯಿ ಮತ್ತು ಕೈಗಾರಿಕಾ ಕ್ರಾಂತಿ ಶುರುವಾದ ಮೇಲೆ ವಲಸೆ ಅನ್ನುವುದು ಮನುಷ್ಯ ನಾಗರಿಕತೆಯ ದಿಕ್ಕನ್ನು ಬದಲಿಸಿತು.

ಈಗ ಭಯೋತ್ಪಾದನೆಯಂತ ಜಾಗತಿಕ ಸಮಸ್ಯೆಗಳು ಉಲ್ಬಣಗೊಂಡಿರುವ ಕಾಲದಲ್ಲಿ ವಲಸೆ ಅನ್ನುವ ವಿಷಯ ಇಟ್ಟುಕೊಂಡು ಬರೆದಿರುವ ಕಾದಂಬರಿ #ಹಿಜಾಬ್. ಕಪ್ಪು ಮತ್ತು ಮುಸ್ಲಿಂ ಧರ್ಮ ಅನುಸರಿಸುವ ಸೋಮಾಲಿಯದವರು ಅಮೆರಿಕಗೆ ವಲಸೆ ಬರುವುದು, ಶತಮಾನಗಳ ಹಿಂದೆ ಅಲ್ಲಿನ ಮೂಲ ನಿವಾಸಿಗಳನ್ನು ಕೊಂದು ತಮ್ಮದೇ ಅಮೆರಿಕ ಕಟ್ಟಿಕೊಂಡ ಐರೋಪ್ಯ ವಲಸಿಗರು, ಭೌತಿಕ ಸವಲತ್ತುಗಳ ಆಸೆಗೆ ವಲಸೆ ಹೋಗುವ ಏಷ್ಯಾದ ಭಾರತೀಯರು ಮತ್ತು ಪಾಕಿಸ್ತಾನಿಗಳ ಮುಖಾಮುಖಿಯ ಕಥಾಹಂದವೇ ಹಿಜಾಬ್.

ನಮ್ಮ ಧಾರ್ಮಿಕ ನಂಬಿಕೆಯ ಪ್ರಕಾರ ಸಿಸೇರಿಯನ್ ಸೆಕ್ಷನ್ ಮೂಲಕ ಸೋಮಾಲಿಯನ್ನ ಹೆಂಗಸರಿಗೆ ಹೆರಿಗೆ ಮಾಡಿಸಬೇಡಿ ಅನ್ನುವ ಒಂದು ಬೇಡಿಕೆಯೊಂದಿಗೆ ಕಾದಂಬರಿ ಶುರುವಾಗುತ್ತದೆ. ಆದರೆ ಸಿಸೇರಿಯನ್ ಗೂ, ರಿಲಿಜನ್ ಗೂ ಯಾವ ಸಂಬಂಧ ಎಂದು ತಿಳಿಯದ ಭಾರತೀಯ ಡಾಕ್ಟರ್ ಗಳು ಒಂದು ದೊಡ್ಡ ಸಮಸ್ಯೆಯೊಳಗೆ ಸಿಲುಕಿಕೊಳ್ಳುತ್ತಾರೆ.

ಇಡೀ ಕಾದಂಬರಿ ವಲಸೆ ಬಂದಿರುವ ಕಪ್ಪು ಬಣ್ಣದ ಮುಸ್ಲಿಮರು, ಪಕೋಡ ಜೊತೆ ಬಿಯರ್ ಕುಡಿಯುವ ಭಾರತೀಯರು, ಜಾಗತಿಕ ಜ್ಞಾನವಿಲ್ಲದ ಸ್ಥಳೀಯ ಅಮೆರಿಕನ್ನರ ಮಧ್ಯೆ ನಡೆಯುವ ಕಥೆಯನ್ನು ಬಹಳ ಚೆನ್ನಾಗಿ ಕಟ್ಟಿಕೊಡುತ್ತದೆ. ಅದರಲ್ಲೂ ಇಸ್ಲಾಂ ಮತ್ತು ಕಾಥ್ಯೊಲಿಕ್ ಕ್ರಿಶ್ಚಿಯನಾಟಿಯ ಮಡಿವಂತಿಕೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತದೆ. ಅಲ್ಲಾಹು ಮಕ್ಕಳನ್ನು ಕೊಡುವವನು ಹೇರುವುದು ಮಾತ್ರ ನಮ್ಮ ಕೆಲಸ ಎಂದು ನಂಬಿರುವ ಒಂದು ಗುಂಪು, ಅಬಾರ್ಸನ್ ಮಾಡಿಸಿಕೊಂಡರೆ ಒಂದು ಪಾಪದ ಕೆಲಸ, ಮಾಡಿಸಿಕೊಂಡವರಿಗೆ ನರಕ ಗ್ಯಾರಂಟಿ ಎಂದು ನಂಬುವ ಮತ್ತೊಂದು ಗುಂಪು, ಕಾಡೂಂಮ್ ಅನ್ನು ಯಾವುದೇ ಕಾರಣಕ್ಕೂ ಉಪಯೋಗಿಸಬಾರದು ಎಂದು ಪ್ರಚಾರ ಮಾಡುವ ಎರಡು ರಿಲಿಜನ್ ಗಳ ಮೌಲ್ವಿ, ಫಾದರ್ ಗಳು ಮತ್ತು ಆಧುನಿಕತೆಯನ್ನು ಕಾದಂಬರಿ ಒಂದು ಕ್ಯಾನ್ವಾಸ್ ನಲ್ಲಿ ಹಿಡಿಯುವ ಪ್ರಯತ್ನ ಮಾಡಿದೆ.

ಕೊನೆಯದಾಗಿ ಕಾದಂಬರಿಯ ಎಲ್ಲ ಪಾತ್ರಗಳು ವಾಸ್ತವ ಮತ್ತು ಚರಿತ್ರೆಯ ಭಾಗವಾಗಿ ನಡೆದುಕೊಳ್ಳುತ್ತವೆ, ಆದರೆ ಅಲ್ಲೂ ಭಾರತೀಯ ಪಾತ್ರಗಳು ತಮ್ಮ ಕೆಲಸ, ಗ್ರೀನ್ ಕಾರ್ಡ್ ಪಡೆಯಲು ಬೇಕಾದ ಹೊಂದಾಣಿಕೆ, ಶೀತ ಪ್ರದೇಶದಲ್ಲೂ ತಮ್ಮ ಟೊಮೆಟೋ ಗೊಜ್ಜು ಮತ್ತು ಅನ್ನ ದೊಂದಿಗೆ ಬದುಕಿ ತಮ್ಮ ಸುರಕ್ಷತೆಯನ್ನು ನೋಡಿಕೊಂಡು ಚರಿತ್ರೆಯ ಭಾಗವಾಗದೆ ತಮ್ಮ ಬದುಕನ್ನು ಕಟ್ಟಿಕೊಳ್ಳತ್ತಾರೆ.

ನಾಗೇಗೌಡ ಕೀಲಾರ ಶಿವಲಿಂಗಯ್ಯ

 

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಗುರುಪ್ರಸಾದ ಕಾಗಿನೆಲೆ, Uncategorized and tagged , , , , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s