‘ಮೂರ್ಖನ ಮಾತುಗಳು’ – ಅಹೋರಾತ್ರ

Image may contain: 1 person, smiling, text and closeup

 

ಇದು ಅಹೋರಾತ್ರರವರು ಬರೆದಿರುವ ಜೀವನದ ಅನುಭವಗಳ ಕುರಿತಾದ ಪುಸ್ತಕ. ಈ ಪುಸ್ತಕಕ್ಕೆ ಖ್ಯಾತ ಲೇಖಕ ಜೋಗಿಯವರ ಸೊಗಸಾದ ಮುನ್ನುಡಿಯಿದೆ. ಇದನ್ನು ವ್ಯಕ್ತಿತ್ವ ವಿಕಸನದ ಪುಸ್ತಕವೆನ್ನಿ, ಆಧ್ಯಾತ್ಮ ಚಿಂತನೆಗಳ ಪುಸ್ತಕವೆನ್ನಿ, ಜೀವನದ ಪಾಠಗಳನ್ನು ಕಲಿಸುವ ಪುಸ್ತಕವೆನ್ನಿ. ಈ ಪುಸ್ತಕ ಇವೆಲ್ಲವೂ ಹೌದು. 16 ಅಧ್ಯಾಯಗಳಿರುವ ಈ ಪುಸ್ತಕದಲ್ಲಿ ಲೇಖಕರು ಹೇಳಬೇಕಾದುದನ್ನೆಲ್ಲ ಹೇಳಿ, “ಈ ಮಾತುಗಳು ಆ ಮೂರುಕಣ್ಣನದು, ಈ ಮೂರ್ಖನದಲ್ಲ” ಎಂದುಬಿಡುತ್ತಾರೆ. ಇನ್ನೂ ಕೆಲವೆಡೆ “ಈ ಮಾತುಗಳು ಸರಿಯಲ್ಲವೆನಿಸಿದಲ್ಲಿ ಈ ಮೂರ್ಖನನ್ನು ಮನ್ನಿಸಿ, ಸರಿಯಾದೊಡೆ ಈ ಮಾತುಗಳು ಇವನದಲ್ಲ, ಇವನೆಡೆಗೆ ಬೆಳಕುಬಿಟ್ಟ ಆ ಮೂರುಕಣ್ಣನವು” ಅನ್ನುತ್ತಾರೆ. ಈ ಪುಸ್ತಕಕ್ಕೆ “ದೇವ ದೇಶ ದೇಹ” ಎಂಬ ಉಪಶೀರ್ಷಿಕೆ ಕೊಟ್ಟಿದ್ದರೂ ಬಹಳಷ್ಟು ವಿಷಯಗಳ ಬಗ್ಗೆ ವಿವರವಾಗಿ ಚರ್ಚಿಸಿದ್ದಾರೆ. ಪುಸ್ತಕದುದ್ದಕ್ಕೂ ತನ್ನನ್ನು ತಾನು “ಇವನು” ಎಂದು ಕರೆದುಕೊಂಡಿರುವ ಲೇಖಕರು ನಡುನಡುವೆ ತಮ್ಮ ಬದುಕಿನಲ್ಲಾದ ಅನುಭವಗಳು, ಕಲಿಕೆಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ ಮತ್ತು ಅವು ರೋಮಾಂಚಕಾರಿಯಾಗಿವೆ. ಪುಸ್ತಕದಲ್ಲಿ ಬಹುತೇಕ ಪ್ರತಿ ಪುಟದಲ್ಲೂ ಒಂದೊಂದು ಸಣ್ಣ ಉಪಕಥೆಗಳ ತರಹದ್ದನ್ನು ಕಾಣಬಹುದು. ಈ ಪುಸ್ತಕದಲ್ಲಿ ಅಬ್ರಹಾಂ ಲಿಂಕನ್ ರಿಂದ ಅಲೆಗ್ಸಾಂಡರ್ ವರೆಗೆ, ಮಧ್ವಾಚಾರ್ಯರಿಂದ ಬಾಬಾರಾಮದೇವ್ ವರೆಗೆ, ನಮ್ಮ ಬೇಕು – ಬೇಡ, ಮಾತುಗಳಿಂದ ಹಿಡಿದು ಆಹಾರದವರೆಗೆ ಸಾಕಷ್ಟು ಚರ್ಚಿಸಿದ್ದಾರೆ. ಪುಸ್ತಕ ಓದುತ್ತಿದ್ದಷ್ಟೂ ಹೊತ್ತು ಮುಂದೇನಿದೆಯೋ ಎಂಬ ಕುತೂಹಲದೊಂದಿಗೆ, ಮುಗಿದ ನಂತರ ಮುಗಿದೇ ಹೋಯಿತೇ ಎಂಬ ನಿರಾಶೆ ಮೂಡಿಸುವ ಪುಸ್ತಕವಿದು. ಒಟ್ರಾಶಿ ಓದುತ್ತಲೇ ಕಲಿಯುವ, ಕಲಿಯುತ್ತಲೇ ಓದಬೇಕಾದ ಪುಸ್ತಕ. ನೀವೂ ಓದಿ. ನಮಸ್ಕಾರ

ವಿಮರ್ಶಕರು:

Rampura Raghothama

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಅಹೋರಾತ್ರ, ಕನ್ನಡ, Uncategorized and tagged , , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s