‘ಒಂದು ಜೇನಿನ ಹಿಂದೆ’ – ಆರ್. ಶರ್ಮಾ, ತಲವಾಟ

 

Jenu

ಒಂದು ಒಳ್ಳೆಯ ಪುಸ್ತಕ ಓದಿದೆ.
ತಲವಾಟದ Raghavendra Sharma ರಾಘಣ್ಣ ಬರೆದ, ಕಟ್ಟೆ ಪ್ರಕಾಶನದಿಂದ ಹೊರಬಂದ, ಈ ” ಒಂದು ಜೇನಿನ ಹಿಂದೆ ” ಎಂಬ ಪುಸ್ತಕ ಓದುಗರಿಗೆ ಒಂದು ವಿಶಿಷ್ಟ ಅನುಭವ ನೀಡುವುದರಲ್ಲಿ ಸಂದೇಹವಿಲ್ಲ. ಕೆಲವು ಪುಟಗಳನ್ನು ಓದುತ್ತಿರುವಾಗಂತೂ ನನಗೆ ಪೂರ್ಣಚಂದ್ರ ತೇಜಸ್ವಿಯವರ ನೆನಪಾಯಿತು. ಇಷ್ಟು ಸೊಗಸಾದ ಪುಸ್ತಕ ಓದಿದ ನಂತರ ಈ ಅನುಭವವನ್ನು ನಾಲ್ಕು ಜನ ಸ್ನೇಹಿತರೊಂದಿಗೆ ಹಂಚಿಕೊಳ್ಳದಿದ್ದರೆ ಮನಸ್ಸು ತಡೆಯುವುದಿಲ್ಲ..!
ಜೇನು ಕೃಷಿಯ ಬಗ್ಗೆ ಅಟ್ಟದ ಮೇಲೆ ಸಿಕ್ಕ ಪುಸ್ತಕವನ್ನೋದಿ ಕುತೂಹಲ ಮೂಡಿಸಿಕೊಂಡ ಲೇಖಕರು ( ಮನಸ್ಸಿಗೆ ಬಹಳ ಹತ್ತಿರವಾದವರ ಬಗ್ಗೆ ಈ ಲೇಖಕರು ಅಂತೆಲ್ಲ ಬಹುವಚನ ಕೊಟ್ಟು ಮಾತಾಡಿಸುವುದು ಅಥವಾ ಬರೆಯುವುದು ನನಗೆ ಕಷ್ಟ.. ಇನ್ನು ಮುಂದೆ ಸರಳವಾಗಿ ರಾಘಣ್ಣ ಅಂದುಬಿಡುತ್ತೇನೆ. ಏಕವಚನದಲ್ಲಿ ಮಾತಾಡಿಸುವುದು ಒಂದು ರೀತಿಯ ಆಪ್ತಭಾವನೆಯನ್ನು ನೀಡುತ್ತದೆ.) ಜೇನು ಗುರುತಿಸುವಿಕೆ, ಜೇನು ಹಿಡಿಯುವುದು, ಸಾಕಾಣಿಕೆ ಇತ್ಯಾದಿಗಳನ್ನು ಮಾಡಲು ಹೊರಟು ಪಡುವ ಕಷ್ಟ-ಪಡಿಪಾಟಲುಗಳು, ಒದ್ದಾಟಗಳು ಪುಸ್ತಕದುದ್ದಕ್ಕೂ ಕಾಣಸಿಗುತ್ತವೆ.
ಕೇವಲ ಅದಷ್ಟೇ ಆಗಿದ್ದರೆ ಈ ಪುಸ್ತಕ ಜೇನುಸಾಕಾಣಿಕೆಯ ಬಗೆಗಿನ ಹತ್ತರಲ್ಲಿ ಹನ್ನೊಂದನೆಯ ಪುಸ್ತಕವಾಗಿಬಿಡುತ್ತಿತ್ತು. ಆದರೆ…. ಚೆನ್ನ, ಪಟಾಕಿನಾರಾಯಣ, ಆನಂದರಾಮಶಾಸ್ತ್ರಿ, ಕೋಟೆಮಕ್ಕಿ ಅರುಣ, ಚೆನ್ನನ ಹೆಂಡತಿ ಸುಬ್ಬಿ, ಕೆರೇಕೈ ಪ್ರಶಾಂತ ಇತ್ಯಾದಿ ಪಾತ್ರಗಳು , ಅವರ ಸಹಜ ಜೀವನವಿಧಾನ, ವೈಯಕ್ತಿಕ ವಿಶೇಷತೆ, ಜೀವನಾನುಭವ , ಕೃಷಿಕರ ಕೃಷಿವಿಧಾನ, ಅನಿರೀಕ್ಷಿತ ಸಂಶೋಧನೆಗಳು, ಮನುಷ್ಯನ ಹುಚ್ಚುಮನಸ್ಸಿನ ತುಣುಕುಗಳು, ಇತ್ಯಾದಿಗಳ ಅನಾವರಣದಿಂದಾಗಿ ಈ ಪುಸ್ತಕ ವಿಶೇಷವಾಗಿದೆಯಲ್ಲದೇ ಇದರ ಮೌಲ್ಯ ಬಹಳಷ್ಟು ಹೆಚ್ಚಿದೆ.
ಪ್ರಕೃತಿ ಪ್ರತೀ ಪ್ರಾಣಿ, ಪಕ್ಷಿ, ಕೀಟಾದಿಗಳೆಲ್ಲ ಸೇರಿದಂತೆ ಎಲ್ಲ ಜೀವಿಗಳಿಗೂ ವಿಶಿಷ್ಟ ಶಕ್ತಿ ನೀಡಿರುತ್ತದೆ. ಪ್ರಕೃತಿಯೊಂದಿಗಿನ ತಾಧ್ಯಾತ್ಮವನ್ನು ಉಳಿಸಿಕೊಂಡ ಜೀವಿಗಳು ಸಹಜವಾದ, ಸರಳ, ಸುಂದರ ಜೀವನವನ್ನು ನಡೆಸುತ್ತಿರುತ್ತವೆ. ಪ್ರಕೃತಿಯಿಂದ ದೂರಾಗುತ್ತಿರುವ ಮಾನವ ಮಾತ್ರ ಹಲವು ಸಮಸ್ಯೆಗಳನ್ನು ಮೈಮೇಲೆಳೆದುಕೊಂಡು ಒದ್ದಾಡುತ್ತಿದ್ದಾನೆ. ಪರಿಸರ, ಪ್ರಾಣಿಪಕ್ಷಿ ಇತ್ಯಾದಿಗಳನ್ನು ತನ್ನ ಇಷ್ಟದಂತೆ ಕುಣಿಸುವ ಮಾನವನಿಗೆ ತನ್ನ ಮನವನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ಮಾತ್ರ ಕಷ್ಟವೇ ಸರಿ ಎಂಬುದು ಕೂಡಾ ಪುಸ್ತಕದಲ್ಲಿ ಬಿಂಬಿತವಾಗಿದೆ.
ಆನಂದರಾಮ ಶಾಸ್ತ್ರಿಯ ಬಾಯಿಂದ ” ಇಂದಿನ ತಂತ್ರಜ್ಞಾನ ಅಂದಿನ ಮನಸ್ಥಿತಿ ಇದ್ದರೆ, ಸ್ವರ್ಗವನ್ನು ಧರೆಗಿಳಿಸಲು ಮತ್ತಿನ್ನೇನೂ ಬೇಡ ” ಎಂದು ಹೇಳಿಸುವ ರಾಘಣ್ಣ , ಮುಂದುವರಿದು, ಅದಕ್ಕೆ ಉದಾಹರಣೆಯಾಗಿ ನರಹರಿಯವರ ನಮೋಫಾರ್ಮ್ ಮತ್ತು ಅವರ ಜೀವನವಿಧಾನ, ಸಹಜಕೃಷಿ ಇತ್ಯಾದಿಗಳೊಂದಿಗೆ ಬದುಕಿನ ವಿವಿಧ ಮಜಲುಗಳ ದರ್ಶನವನ್ನೂ ನಮಗೆ ಮಾಡಿಸಿದ್ದಾರೆ.
ಫಣಿಯಕ್ಕನಿಗೆ ಜೇನು ಹೊಡೆದು ಅವಳ ಮನೋರೋಗ ತಾತ್ಕಾಲಿಕವಾಗಿ ಹತೋಟಿಗೆ ಬಂದ ಬಗ್ಗೆ ಹಾಗೂ ನಾರಾಯಣಸ್ವಾಮಿಗೆ ಜೇನು ಹೊಡೆದ ನಂತರ ಅವನ ಸಂಧುನೋವು ಕಡಿಮೆ ಆದ ಬಗ್ಗೆ ಬರೆದು, ಜೇನುಕೃಷಿಯ ಜೊತೆಗೆ ಜೇನುವೈದ್ಯಪದ್ದತಿಯ ಸಾಧ್ಯತೆಯ ಬಗ್ಗೆಯೂ ಆಲೋಚಿಸುವಂತೆ ಮಾಡಿದ್ದಾರೆ.
ಇಷ್ಟೆಲ್ಲಾ ಆಗಿ ಬೇಸರದ ಸಂಗತಿ ಏನಪ್ಪಾ ಅಂದ್ರೆ.. ಈ ಪುಸ್ತಕದ ಲಭ್ಯತೆ ಈಗ ಇಲ್ಲ ಅನ್ನೋದು. 2007 ನೇ ಇಸ್ವಿಯಲ್ಲಿ ಪ್ರಕಟವಾದ ಈ ಪುಸ್ತಕ ಈಗ ಯಾರ್ಯಾರ ಬಳಿ ಇದೆ ಅನ್ನುವುದು ಗೊತ್ತಿಲ್ಲ. ಆದರೆ ಸಾಹಿತ್ಯಾಸಕ್ತರು ಒಮ್ಮೆ ಓದಲೇಬೇಕಾದ ಪುಸ್ತಕ ಇದು ಎಂಬುದರಲ್ಲಿ ಸಂದೇಹವಿಲ್ಲ. ನನಗೆ ಗೋಟಗಾರು ಅರುಣಣ್ಣ Arun Hegde ನಿಂದ ಓದಲು ಕಡ ದೊರೆತ ಪುಸ್ತಕದ ಕೆಲವು ಪುಟಗಳನ್ನು ನಿಮ್ಮ ಅವಗಾಹನೆಗಾಗಿ ಕೊಟ್ಟಿದ್ದೇನೆ. ಓದಿನೋಡಿ.

– ಗುರುಪ್ರಸಾದ್ ಕಾನಲೆ

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಆರ್. ಶರ್ಮಾ, ತಲವಾಟ, ಕನ್ನಡ, Uncategorized and tagged , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s