‘ಏಳು ರೊಟ್ಟಿಗಳು’ – ಕೆ ಎನ್ ಗಣೇಶಯ್ಯ

Elu

 

ಐತಿಹಾಸಿಕ ಹಿನ್ನೆಲೆಯಲ್ಲಿ ರಚಿಸಿರುವ “ಏಳು ರೊಟ್ಟಿಗಳು” – ಕಿರು ಕಾದಂಬರಿ ಕೆ.ಎನ್. ಗಣೇಶಯ್ಯರವರ ಮತ್ತೊಂದು ಅದ್ಭುತ ಪುಸ್ತಕ. ಹೈದರಾಬಾದಿನ ನಿಜಾಮರು ತಮ್ಮ ಸಂಪತ್ತನ್ನು ಉಳಿಸಿಕೊಳ್ಳಲು ಮಾಡುವ ಷಡ್ಯಂತ್ರಗಳಲ್ಲಿ ರಜಾಕರ ಪಾತ್ರ.. ಅಮಾಯಕ ಸಿದ್ಧಿಗಳ ಬಲಿ .. ಜೊತೆಗೆ ಬಚ್ಚಿಟ್ಟ ನಿಧಿಯ ರಹಸ್ಯದ ಸುತ್ತ ಹೆಣೆದ ಕಥೆಯಾಗಿದೆ. ಎಂದಿನಂತೆ ಗಣೇಶಯ್ಯರವರ ಸಂಶೋಧನಾತ್ಮಕ ಕೃತಿಯಾಗಿ, ಇದನ್ನು ಓದುವಲ್ಲಿ ಎಲ್ಲೂ ಬೇಸರವಾಗದೆ ಓದಿಸಿಕೊಂಡು ಹೋಗುತ್ತದೆ. ಹೈದರಾಬಾದಿನ ನಿಜಾಮನ ಸಂಪತ್ತಿನ ಬಗ್ಗೆ ಅಂದಾಜೇ ಸಿಗದಷ್ಟು ಶ್ರೀಮಂತನಾಗಿದ್ದ ಅಂದರೆ ಆ ಕಾಲಕ್ಕೆ ಬ್ರಿಟಿಷರಿಗೇ ಸಾಲ ಕೊಡುವಷ್ಟು ಎಂಬ ವಿವರಣೆಯೇ ಆಶ್ಚರ್ಯ ಹುಟ್ಟಿಸುತ್ತದೆ…..

1948 ರಲ್ಲಿ ಭಾರತದ ಪ್ರಜಾತಂತ್ರ ಒಕ್ಕೂಟಕ್ಕೆ ಸೇರಲು ಇಷ್ಟಪಡದ ಹೈದರಾಬಾದಿನ 7 ನೇ ನವಾಬ ಉಸ್ಮಾನ್ ಆಲಿಖಾನ್ ಹೈದರಾಬಾದ್ ಪ್ರಾಂತ್ಯವನ್ನು ಸ್ವತಂತ್ರ ದೇಶವೆಂದು ಘೋಷಣೆ ಮಾಡಲು ಹೊರಟು ಭಾರತದಿಂದ ವಿಭಜಿಸಿ ಪಾಕಿಸ್ತಾನದಂತೆ ಪ್ರತ್ಯೇಕ ಮುಸ್ಲಿಂ ದೇಶವನ್ನಾಗಿಸಲು ಮಾಡಿದ ಪ್ರಯತ್ನದಿಂದ ಹಿಡಿದು ಇದಕ್ಕೆ ಜೊತೆಯಾದ ರಜಾಕರವರೆಗೆ, ಅವರಿಗೆ ಪರೋಕ್ಷವಾಗಿ ನಿಜಾಮನ ಬೆಂಬಲ, ಇದ್ಯಾವುದನ್ನು ಲೆಕ್ಕಿಸದೆ ಭಾರತ ಸರ್ಕಾರ ತನ್ನ ಸ್ವಾಮ್ಯಕ್ಕೊಳಪಡಿಸುವುದು ಖಚಿತವಾದಾಗ ತನ್ನ ಅಗಾಧ ಸಂಪತ್ತನ್ನು ನವಾಬ ರಕ್ಷಿಸಿಕೊಳ್ಳಲು ಮಾಡುವ ಹುನ್ನಾರಗಳು.. ಹುಸಿಬಾಂಬ್ ದಾಳಿಯ ಚಿತ್ರಗಳು ನಮಗೆ ಇತಿಹಾಸದ ಪುಟಗಳಿಗೆ ಸೇರಿಹೋಗಿರುವುದಕ್ಕೆ ಆಕರಗಳನ್ನು ನೀಡುತ್ತಾ ಉಲ್ಲೇಖಿಸುವುದೇ ಲೇಖಕರ ವಿಶೇಷತೆ …..

ಏಳು ರೊಟ್ಟಿಗಳು ಕಿರು ಕಾದಂಬರಿಯಾಗಿ ನಿಧಿಯ ಸುತ್ತ ಕಾಡಿನ ನಡುವೆ ಒಂದು ಅನ್ವೇಷಣೆಯಾಗಿದ್ದು, ಓದಿಯಾದ ಮೇಲೆ ಪುಸ್ತಕ ಇಷ್ಟು ಬೇಗ ಮುಗಿದೇ ಹೋಯಿತೇ ಅಂತ ಅನ್ನಿಸದೇ ಇರದು …. ಹಾಗೆಯೇ ಹೈದರಾಬಾದಿನ ನಿಜಾಮರ ಕಿಂಗ್ ಕೋಠಿ, ನಿಜಾಮ ತನ್ನ ಕೊಠಡಿ ಮುಂದೆ ಆಸನದಲ್ಲಿ ಕೂತು ಕಾಲುಜ್ಜಿ ಸವೆಸಿದ ಮೆಟ್ಟಿಲ ಮೂಲೆ, ಫರ್ಮಾನು ಕಂಬ, ಅದರ ಹಿಂದಿರುವ ಗೋಡೆ ಫಲಕ, ಜನಾನದ ಕೊಠಡಿಗಳು, ಈಜುಕೊಳ, ಅತಿ ದೊಡ್ಡದೆಂದೇ ಪ್ರಸಿದ್ಧಿಯಾಗಿರುವ ನವಾಬನ ವಾರ್ಡ್ ರೋಬ್, ಅಲಮೆರಾಗಳು ಪೆಟ್ಟಿಗೆಗಳನ್ನು ಒಮ್ಮೆ ಹಾಗೆಯೇ ತಿರುಗಾಡಿಕೊಂಡು ನೋಡಿ ಬರಬೇಕೆಂದು ಅನ್ನಿಸಿ ಬಿಡುತ್ತದೆ.

ಕಥೆಯಲ್ಲಿನ ರೋಚಕತೆ, ಕೆಲವೊಂದೆಡೆ ಭಯದ ಬಿಗಿಯಾದ ವಾತಾವರಣ, ಪತ್ತೆದಾರಿಕೆ, ಇತಿಹಾಸದ ಅಧ್ಯಯನದೊಂದಿಗೆ ಸಂಕೇತ ಭಾಷೆಯಿಂದಿರುವ ನಕ್ಷೆಯನ್ನು ಬೇಧಿಸುವುದು ಬೆರಗುಗಣ್ಣಿನಿಂದ ಓದಲೇಬೇಕು… ಒಟ್ಟಾರೆಯಾಗಿ ವಾರಾಂತ್ಯಕ್ಕೆ ಏಳು ರೊಟ್ಟಿಗಳು ಸೊಗಸಾಗಿತ್ತು. ನೀವೂ ಒಮ್ಮೆ ಈ ಏಳು ರೊಟ್ಟಿಗಳ ಸವಿಯನ್ನು ಸವಿಯುವ ಪ್ರಯತ್ನ ಮಾಡಿ ….

ವಂದನೆಗಳು …..

– ಸಪ್ನಾ ವಂಶಿ

 

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಕನ್ನಡ, ಗಣೇಶಯ್ಯ, Uncategorized and tagged , , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s