ಕನ್ನಡ · ಸಾ. ಕೃ. ರಾಮಚಂದ್ರರಾವ್

‘ಗಣಪತಿಯ ಕಲ್ಪನೆ’ – ಸಾ.ಕೃ.ರಾಮಚಂದ್ರ ರಾವ್

ನಾನು ಓದಿದ ಪುಸ್ತಕ :- #ಗಣಪತಿಯ_ಕಲ್ಪನೆ
ಲೇಖಕರು :- ಆಚಾರ್ಯ ಸಾ.ಕೃ.ರಾಮಚಂದ್ರ ರಾವ್

ದೇವರು ಅದು ಒಂದು ಕಲ್ಪನೆಯೇ.. ಶಕ್ತಿಯೇ.. ಸತ್ಯವೇ ಎಂಬ ಪ್ರಶ್ನೆಗಳು ಮನುಷ್ಯನ‌‌ ಮನಸ್ಸಿನಲ್ಲಿ ಆಗಾಗ ಕಾಡುವ ಪ್ರಶ್ನೆಗಳು, ದೇವರೆಡೆ ಒಂದು ಚಿಂತನೆ, ಜಿಜ್ಞಾಸೆ ನಿರಂತರವಾಗಿರುವ ಸಂಗತಿ.. ಈ ನಿಟ್ಟಿನಲ್ಲಿ ನಮ್ಮ #ಆಸ್ತಿಕತ್ವವನ್ನು ಧೃಡಗೊಳಿಸಲು ಈ ಚಿಕ್ಕ ಪುಸ್ತಕ ಅಮೂಲ್ಯವಾಗಿದೆ ಎನ್ನಬಹುದು.

ನಮ್ಮ ದೇಶದಲ್ಲಿ ಗಣಪತಿಯಷ್ಟು ನಂಬಿದ ದೇವರು ಇನ್ನೂಂದಿಲ್ಲ, ಪ್ರತಿ ನಗರ ಹಾಗೂ ಗ್ರಾಮದ ಪ್ರತಿ ಮನೆಯಲ್ಲೂ ಗಣಪತಿಯನ್ನೇ ಇಷ್ಟ ದೇವರೆಂಬುವುದು ಸಹಜ ಅದರೆ ಈ ಗಣಪತಿಯ ಪೂಜೆ ಎಷ್ಟು ಪ್ರಾಚೀನವಾಗಿದೆ ..ಅದು ವೈದಿಕ ಯುಗದಿಂದ ಅಂದರೆ ಸುಮಾರು ಎಂಟು ಸಾವಿರ ವರ್ಷಗಳ ಹಿಂದಿನಿಂದಲೂ ಗಣಪತಿಯ ಆರಾಧನೆ ನಮ್ಮ ದೇಶದಲ್ಲಿ ಇತ್ತು. ಆರ್ಯ ದ್ರಾವಿಡ ಎಲ್ಲಾ ಸಂಸ್ಕೃತಿಗಳು ಗಣಪತಿಯ ಒಳಗೊಂಡಿದೆ ಎಂದು ನಿರೂಪಿಸುವ ಲೇಖಕರು.. ಮುಂದೆ‌..ಶಿವ ಹಾಗೂ ಗಣಪತಿಯ ಸಂಭಂದಗಳು.. ಗೌರಿಯ ಪುತ್ರನಾದ ಸಮಯ.. ವಿದ್ಯಾಗಣಪತಿಯಾಗಿ ಪೂಜಿಸಿದ ಕಾಲ.. ಹಾಗೇ ಕಾಲ ಕಾಲಕ್ಕೆ ಬದಲಾದ ಸ್ವರೂಪ...ಹೀಗೆ ಒಂದು ದೇವರು ಜನಮಾನಸದಲ್ಲಿ ಬೆಳೆದು ಉಳಿದ ವಿಚಾರವನ್ನು ಚಿಕ್ಕದಾಗಿ ಚೆನ್ನಾಗಿ ವಿವರಿಸಿದ್ದಾರೆ..

ಹೀಗೆ ನಮ್ಮ ಸನಾತನ ಸಂಸ್ಕೃತಿಯೆಡೆಗೆ ಸಾಮಾನ್ಯರಿಗೂ ಅರ್ಥವಾಗುವಂತೆ ಚಿಂತನೆಗೆ ಹಚ್ಚುವಂತೆ ಅದರಿಂದ ಇನ್ನಷ್ಟು ನಮ್ಮೊಳಗೆ, ಸಮಾಜದ ಒಳಗೆ #ಗಟ್ಟಿಯಾಗುವಂತಹಃ ಇಂತಹಃ ಪುಸ್ತಕದ ಅವಶ್ಯಕತೆ ಸಾಹಿತ್ಯ ಲೋಕಕ್ಕೂ ಅದರ ಓದುಗರಿಗೂ ಇದೆ.. ಅದಕ್ಕಾಗಿ ಪೂಜ್ಯ ಲೇಖಕರಂತೆ ಪ್ರಕಾಶಕರಾದ ಶ್ರೀಯುತ ಸೂರ್ಯಪ್ರಕಾಶ ಪಂಡಿತರೂ ಅಭಿನಂದನಾರ್ಹರು..

ದೀಪಕ್ ಹುಲ್ಕುಳಿ


ಪ್ರಕಾಶಕರು :- ಅಭಿಜ್ಞಾನ, ಬೆಂಗಳೂರು ಮುದ್ರಣದ ವರ್ಷ:- 2008
ಹಣ :- ₹.60/-
ದೂರವಾಣಿ :- 9448494949

ಇಂಗ್ಲೀಷ್

AGAMA-KOSHA

ಆಗಮ – ಕೋಶ

ಇದೊಂದು ಅಪೂರ್ವದ ಪುಸ್ತಕ ಅಥವಾ ಪುಸ್ತಕಗಳ ಸೆಟ್ ಎಂದರೂ ಆಗುತ್ತದೆ. ಬೆಂಗಳೂರಿನ ಶಂಕರ ಮಠದ ಆವರಣದಲ್ಲಿರುವ ಕಲ್ಪತರು ಸಂಶೋಧನಾ ಕೇಂದ್ರದ ಅಂದಿನ ಮುಖ್ಯಸ್ಥರಾಗಿದ್ದ ಮಹೋದಯ ಸಾ.ಕೃ. ರಾಮಚಂದ್ರರಾಯರು ಈ ರೀತಿಯ ಅನೇಕ ಪುಸ್ತಕಗಳನ್ನು ಕೊಡುಗೆಯಾಗಿ ನಮಗೆ ನೀಡಿದ್ದಾರೆ. ಆಗಮ ಕೋಶ ಪುಸ್ತಕವು 12 volume ಗಳಲ್ಲಿ ಲಭ್ಯವಿತ್ತು. ಈಗ ಬಹುಷಃ ಖರೀದಿಗೆ ದೊರಕುವುದು ಅನುಮಾನ.

ಇಂಗ್ಲಿಷ್ ಭಾಷೆಯಲ್ಲಿರುವ ಈ ಸಂಶೋಧನಾ ಪ್ರಬಂಧಗಳು ಪ್ರಾಚೀನ ಕಾಲದಿಂದ ದೇಗುಲಗಳಲ್ಲಿ ಬೆಳೆದುಬಂದ ಆರಾಧನಾ ಪದ್ಧತಿಗಳ ಬಗ್ಗೆ ತಿಳಿಸಿಕೊಡುತ್ತದೆ. ಆಗಮ-ಆಲಯ-ಆರಾಧನಾ ಎಂಬ ಉಪ ಶೀರ್ಷಿಕೆ ಇದಕ್ಕಿದೆ. ಇಷ್ಟೇ ಆಗಿದ್ದರೆ ಇದೊಂದು ಸಾಮಾನ್ಯ ಪುಸ್ತಕವಾಗುತ್ತಿತ್ತೇನೋ !, ಆದರೆ ಆಗಮಗಳು ಬೆಳೆದು ಬಂದ ಬಗೆ, ವಿವಿಧ ಆಗಮಶಾಸ್ತ್ರಹಾಗೂ ಅವುಗಳ ವಿಭಾಗಗಳು, ಶೈವ, ಶಾಕ್ತ, ವೈಷ್ಣವೇತ್ಯಾದಿ secterian ಗಳು ಹುಟ್ಟಿಕೊಂಡಿದ್ದನ್ನೂ ವಿವರವಾಗಿ ಆಧಾರ ಸಹಿತ ದಾಖಲಿಸಿದ್ದಾರೆ. ಪುಸ್ತಕ ಆನ್ ಲೈನ್ ನಲ್ಲಿ ಪಿಡಿಎಫ್ ಮಾದರಿಯಲ್ಲಿ ಲಭ್ಯವಿರಬಹುದು. ಆಸಕ್ತರು ಓದಿ, ಸಾಧ್ಯವಾದರೆ ಕನ್ನಡ ಅನುವಾದಕ್ಕೆ ಯತ್ನಿಸಬಹುದು.

ಸುಬ್ರಹ್ಮಣ್ಯ ಹೆಚ್.‌ ಎಸ್.

ಇಂಗ್ಲೀಷ್ · Uncategorized

‘ಬ್ರಿಂದಾಮೃತಮ್’

This slideshow requires JavaScript.

ಒಂದು ಸರ್ವಧರ್ಮಗಳ ಬೃಹತ್ ಭಜನೆ ಪುಸ್ತಕದ ಬಗ್ಗೆ ಮಾಹಿತಿ:

~~~~~~~~~~~~~~~~~~~~~~~~~~~~~~~~~~~~

Brindamrutam (ಇಂಗ್ಲೀಷಿನಲ್ಲಿದೆ)

ಪ್ರಕಾಶಕರು: ಸತ್ಯ ಸಾಯಿ ಬುಕ್ಸ್ ಅಂಡ್ ಪಬ್ಲಿಕೇಶನ್ಸ್ ಟ್ರಸ್ಟ್

(ಸದ್ಯಕ್ಕೆ ಔಟ್ ಆಫ್ ಸ್ಟಾಕ್ ಇರಬಹುದು, ಆದರೆ ನಿಧಾನವಾಗಿ ಅಲ್ಲಿ ಸಿಗುತ್ತದೆ)

ಹೊಸ ಮುದ್ರಣ

ಬೆಲೆ: 325/-

~~~~~~~~~~~~~~~~~~~~

ಭಜನೆ ಮತ್ತು ಸಂಗೀತಾಸಕ್ತ ಪುಸ್ತಕ ಪ್ರೇಮಿಗಳಿಗಾಗಿ:

ಹಲವು ಹಿಂದೂ / ವೈದಿಕ ದೇವರುಗಳ ಬೃಹತ್ ನಾಮ ಸಂಕೀರ್ತನೆಯ/ ಭಜನೆಗಳ ಅಮೂಲ್ಯ ಪುಸ್ತಕ – Brindamrutam ( ಬೃಂದಾಮೃತಂ). ಇದನ್ನು ಸತ್ಯ ಸಾಯಿ ಬೃಂದಾವನ ಭಜನ ಮಡಲಿ, ವೈಟ್ ಫೀಲ್ಡ್ ಕಡೆಯಿಂದ sssbpt.org ಪ್ರಕಟಿಸಿದ್ದಾರೆ.

ಇದರಲ್ಲಿ ಹಲವಾರು ಉತ್ತಮ ಅನನ್ಯ ಅಂಶಗಳಿವೆ:

1. ಪ್ರತಿ ದೇವರ ಭಜನೆಗಳ ಪ್ರತ್ಯೇಕ ಅಧ್ಯಾಯಗಳು ( ರಾಮ ಕೃಷ್ನ, ಗಣಪತಿ ದೇವಿ, ಹನುಮಂತ, ನಾರಾಯಣ, ಸುಬ್ರಹ್ಮಣ್ಯ, ಸಾಯಿಬಾಬಾ ಅಲ್ಲದೇ ಸರ್ವ-ಧರ್ಮ ಸಮಾನತೆ (ಏಸು, ಅಲ್ಲಾ, ಬುದ್ಧ ಮಹಾವೀರ, ಗುರು ನಾನಕ್, ಜೋರಾಷ್ಟ್ರ ಧರ್ಮಗಳ ನಾಮಗಳೂ) ಇವೆ.

2. ಭಜನೆಗಳನ್ನು ಸಾಮಾನ್ಯವಾಗಿ ಹಾಡುವ ಕರ್ನಾಟಕ ಮತ್ತು ಹಿಂದುಸ್ತಾನಿ ವರ್ಗದ ರಾಗಗಳು, ಅದರ ತಾಳಗಳು, ಮತ್ತು ಪುರುಷರು, ಮತ್ತು ಮಹಿಳೆಯರು ಹಾಡಲು ಇಡಬೇಕಾದ ಶ್ರುತಿಗಳು ( ಕೀ ಬೋರ್ಡ್ ಮತ್ತು ಹಾರ್ಮೋನಿಯಮ್ ಶ್ರುತಿ ನಂಬರ್)

3. ರಾಗಗಳ ವರ್ಗೀಕರಣ- ಕರ್ನಾಟಕ ಮತ್ತು ಹಿಂದುಸ್ತಾನಿ ಶೈಲಿ ರಾಗಗಗಳ ಸಾಮ್ಯತೆ / ಸಮಾನಾಂತರ ರಾಗಗಳು

4. ಕೀಬೋರ್ಡ್. ಹಾರ್ಮೋನಿಯಮ್ ಮನೆಗಳ ಪಾಠಗಳು ಚಿತ್ರ ಸಮೇತ ಕಲಿಯಲು ಸುಲಭವಾಗುವಂತೆ.

5. ಇಂಡೆಕ್ಸ್ ಪಟ್ಟಿಯಲ್ಲಿ ಎಲ್ಲಾ ಭಜನೆಗಳನ್ನೂ ಸುಲಭವಾಗಿ ಹೆಸರನ್ನು ನೋಡಿ ಅದರ ಪುಟ ಸಂಖ್ಯೆ ತೆರೆಯುವ ಕ್ರಮ

6. ನಗರ ಸಂಕೀರ್ತನೆ ( ಮುಂಜಾನೆಯಲ್ಲಿ ಹಾಡಲು ಸೂಕ್ತ ಭಜನೆಗಳು). ಬಾಲವಿಕಾಸ ಎಂದು ಮಕ್ಕಳು ಹಾಡಲು ತಕ್ಕ ಸುಲಭ ನಾಮಾವಳಿಗಳು ಪ್ರತ್ಯೇಕ ಪಟ್ಟಿಯಲ್ಲಿದೆ

7. ಇದರಲ್ಲಿ ಒಟ್ಟು 1926 ಭಜನೆಗಳು ಇವೆ , ಸುಮಾರು 700 ಪುಟಗಳಲ್ಲಿ ಅಡಕವಾಗಿವೆ

ಬೆಂಗಳೂರಿನ ಬಳಿಯ ವೈಟ್‌ಫೀಲ್ಡಿನಲ್ಲಿರುವ ಸತ್ಯ ಸಾಯಿ ಆಶ್ರಮ ಬೃಂದಾವನದಲ್ಲಿ ಪ್ರತಿಗಳು ಸಿಗುತ್ತವೆ/ ಅಲ್ಲದೇ ಪುಟ್ಟಪರ್ತಿಯ ಪ್ರಶಾಂತಿ ನಿಲಯದ ಪುಸ್ತಕದಂಗಡಿಯಲ್ಲಿಯೂ ಸಿಗುತ್ತದೆ

ಇದನ್ನು ಬಳಸಲು ಸುಲಭವಾಗುವಂತೆ ಕೇಳಿ ಕಲಿಯುವಂತೆ ಯೂ ಟ್ಯೂಬಿನಲ್ಲಿ/ ಅಥವಾ ಸುಂದರಂ ಮತ್ತು ಪ್ರಶಾಂತಿ ಮಂದಿರ ಭಜನೆಗಳಲ್ಲಿ ಆನ್ ಲೈನ್ ಲಿಂಕಿನಲ್ಲಿ ದೊರೆಯುತ್ತವೆ.

([http://sssbalvikastn.org/sundaram.php](http://sssbalvikastn.org/sundaram.php)

[http://prasanthi-mandir-bhajan.net/](http://prasanthi-mandir-bhajan.net/)

ಎಲ್ಲವೂ ರೆಕಾರ್ಡ್ ಆಗಿರುವ ಮೊಬೈಲ್ ಆಪ್ ಕೊಳ್ಳಲು ರೂ 200/- ಗೂಗಲ್ ಸ್ಟೋರ್ ಲಿಂಕ್ ಸಹಾ ಇದೆ:

[https://play.google.com/store/apps/details?id=com.bhajanabrinda.brindamrutam&hl=en_IN](https://play.google.com/store/apps/details?id=com.bhajanabrinda.brindamrutam&hl=en_IN)

ನನ್ನ ಬಳಿಇರುವ ಪ್ರತಿಯ ಕೆಲವು ಚಿತ್ರಗಳನ್ನು ಹಾಕಿದ್ದೇನೆ.

ಭಜನೆ ಮತ್ತು ಸಂಗೀತ ಜ್ಞಾನ ಇಷ್ಟಪಡುವವರಿಗೆ ಗಳಿಗೆ ಸಂಗ್ರಹಾರ್ಹ ಪುಸ್ತಕ

ನಾಗೇಶ್ ಕುಮಾರ್. ಸಿ.ಎಸ್

ಕನ್ನಡ · ರಾಜಸರಸ್ವತಿ · Uncategorized

‘ಶ್ರೀ ವೇಂಕಟೇಶ ರಹಸ್ಯ’ – ರಾಜಸರಸ್ವತಿ

FB_IMG_1545194494309

ರಾಜಸರಸ್ವತಿಯವರು ದತ್ತಾತ್ರೇಯರ ಪ್ರಥಮ ಅವತಾರವಾದ ಶ್ರೀಪಾದವಲ್ಲಭರ ಪ್ರೇರಣೆಯಿಂದ ಬರೆದು ಪ್ರಕಟಿಸಿರುವ
‘ಶ್ರೀ ವೇಂಕಟೇಶ ರಹಸ್ಯ’ ಕೃತಿಯ ವಿಶೇಷತೆಗಳು

1)ಎಲ್ಲಾ ಪುರಾಣಗಳಿಂದ ಆಯ್ದ ವೇಂಕಟೇಶನ ಕುರಿತಾದ ನಿಗೂಢ ರಹಸ್ಯಗಳು ಹಾಗೂ ಆಖ್ಯಾನಗಳು

ಓದುಗರ ಗಮನಕ್ಕೆ ವಿಷಯ ಪರಿವಿಡಿಯನ್ನು ಸಹ ಕೊಡಲಾಗಿದೆ

1ವೇಂಕಟೇಶನೆಂದರೆ ಯಾರು?
2ವೇಂಕಟೇಶನ ಕಾಲ ಯಾವುದು?
3ವೇಂಕಟೇಶನ ಅರ್ಚಾ ಬಿಂಬದ ದಿವ್ಯ ಮಂಗಳ ಸ್ವರೂಪದ ವರ್ಣನೆ ಹಾಗೂ ಅಂತರಾರ್ಥ

4ಅಗಸ್ತ್ಯ ಮಹರ್ಷಿಗಳಿಗೂ ವೇಂಕಟೇಶನಿಗೂ ಇರುವ ಸಂಬಂಧ
5ಶುಕ ಮಹರ್ಷಿಗೂ ವೇಂಕಟೇಶನಿಗೂ ಇರುವ ಸಂಬಂಧ
6ಅರುಂಧತೀ ವಸಿಷ್ಠರ ವೇಂಕಟಾದ್ರಿಯ ನಂಟು
7ಮಾರ್ಕಂಡೇಯ ವರದ ಶ್ರೀನಿವಾಸ
8ಋಷಿ ಸಮೂಹಪ್ರಿಯ ವೇಂಕಟೇಶ
9ಭಾರದ್ವಾಜ ಪ್ರಸಂಗ
10ವಾಸ್ತವವಾಗಿ ಶ್ರೀನಿವಾಸ ಕಲ್ಯಾಣವೆಂದರೇನು?
11ಅಗಸ್ತ್ಯಾಶ್ರಮದಲ್ಲಿ ಆರು ತಿಂಗಳ ಕಾಲ ಇದ್ದ ಮೇಲೆ ಮುಂದೇನಾಯಿತು?
12ತೀರ್ಥ ಸಾಮ್ರಾಜ್ಯ ಚಕ್ರವರ್ತಿ
13ಬ್ರಹ್ಮೋತ್ಸವ ಏಕೆ? ಏನು?
14ವಾಯುದೇವನಿಗೂ ವೇಂಕಟೇಶನಿಗೂ ಇರುವ ಸಂಬಂಧ
15ಕಲಿಯುಗದಲ್ಲಿ ನಡೆದಂತಹ ಒಂದು ಅದ್ಭುತ
16ವೇಂಕಟೇಶನು ಮಾಡಿದಂತಹ ಅಸುರ ಸಂಹಾರ
17ವೇಂಕಟೇಶನ ಗರ್ಭಗುಡಿ
18ವೈಖಾನಸ ಆಗಮ
ಮಂಗಳಾಚರಣೆ ಫಲಶ್ರುತಿ

ದೊಡ್ಡ ಸೈಜಿನ Hard Bind ಪುಸ್ತಕ, ಪುಟಗಳು: 342 ದೊಡ್ಡ ಪುಟಗಳು, ಬೆಲೆ: 411

ಈ ಪುಸ್ತಕವನ್ನು ಪಡೆಯಲು 9986272266 ಈ ನಂಬರಿಗೆ ನಿಮ್ಮ ಹೆಸರು ಮತ್ತು ವಿಳಾಸವನ್ನು ಕಳಿಸಿದರೆ ನಿಮ್ಮ ಮನೆಗೆ ಅಂಚೆಯ ಮೂಲಕ ಪುಸ್ತಕವನ್ನು ತಲುಪಿಸಲಾಗುವುದು. ಹಣ ಕೊಟ್ಟು ಪುಸ್ತಕವನ್ನು ಬಿಡಿಸಿಕೊಳ್ಳಬಹುದು.

ಪವನ್ ಕುಮಾರ್ ರಾಮಚಂದ್ರ

ಕನ್ನಡ - ಅನುವಾದಿತ · ಕುಮುದಪ್ರಿಯ · Uncategorized

‘ವಚನ ಶ್ರೀ ದೇವಿ ಮಹಾತ್ಮೆ’ – ಕುಮುದಪ್ರಿಯ

FB_IMG_1540528626241.jpg

ಪುಸ್ತಕ : ವಚನ
ಶ್ರೀ ದೇವಿ ಮಹಾತ್ಮೆ
ಮೂಲ : ಶ್ರೀ ಕಾಳಿಕಾಪುರಾಣವೆಂಬ ದೇವೀ ಮಹಾತ್ಮೆ
ಅನುವಾದಕರು : ಕುಮುದಪ್ರಿಯರು
ಪ್ರಕಾಶಕರು : ಟಿ. ಎನ್. ಕೃಷ್ಣಯ್ಯ ಶೆಟ್ಟಿ ಅಂಡ್ ಸನ್

ನವರಾತ್ರಿ ಹಬ್ಬವೆಂದರೆ ಸಡಗರವೇ… ನವರಾತ್ರಿಯೆಂದ ಕೂಡಲೇ ನೆನಪಾಗುವುದು ಮೈಸೂರು… ನವರಾತ್ರಿ ಹಬ್ಬವೂ ದುರ್ಗದೇವಿಯ ಮಹಾತ್ಮೆಯನ್ನು ತಿಳಿಸುವಂತಹದ್ದು… ಈ ಒಂಭತ್ತು ದಿನಗಳಲ್ಲಿ ಮುತ್ತೈದೆಯರು ಕಲಶವನ್ನು ಪ್ರತಿಷ್ಠಾಪಿಸಿ, ಗೊಂಬೆಗಳನ್ನು ಕೂರಿಸಿ, ದೇವಿಗೆ ಅಲಂಕಾರವನ್ನು ಮಾಡಿ ಪೂಜಿಸುತ್ತಾರೆ… ಆ ಸಮಯದಲ್ಲಿ ಈ ಶ್ರೀ ದೇವಿ ಮಹಾತ್ಮೆ ಪುಸ್ತಕವನ್ನು ಓದುವುದು ವಾಡಿಕೆ… ಇದರಲ್ಲಿ ಮಧು-ಕೈಟಭ ಅಸುರರನ್ನು ವಿಷ್ಣು ಸಂಹಾರಿಸುವ ರೀತಿ… ಮಹಿಷಾಸುರನನ್ನು ತಾಯಿ ಜಗನ್ಮಾತೆ ವಧಿಸುವ ರೀತಿ… ಶುಂಭ-ನಿಶುಂಭರನ್ನು ಸಂಹರಿಸುವುದನ್ನು ಸಹ ದೈವೀಕವಾಗಿ ಬರೆದಿದ್ದಾರೆ… ಹರಿ ಹರ ಬ್ರಹ್ಮಾದಿ ಎಲ್ಲರೂ ಸೇರಿ ತಾಯಿ ದುರ್ಗೆಯನ್ನು ಪರಿ ಪರಿಯಾಗಿ ಬೇಡಿ.. ಸ್ತುತಿಸಿ… ತಾಯಿ ಜಗನ್ಮಾತೆಯ ಕರುಣೆಗೆ ಪಾತ್ರರಾಗುತ್ತಾರೆ….
ಚಂಡ-ಮುಂಡರನ್ನು ಕೊಂದು ತಾಯಿ ತಾನೇ ಚಾಮುಂಡಿಯಾಗುತ್ತಾಳೆ… ರಕ್ತಾ ಬೀಜಾಸುರನನ್ನು ಕೊಲ್ಲಲು ತಾನೇ ಕಾಳಿಯ ಅವತಾರವನ್ನೇತ್ತುತ್ತಾಳೆ… ಮಹಿಷಾಸುರನನ್ನು ಕೊಂದ ತಾಯಿ ಮಹಿಷಾಸುರ ಮರ್ದಿನಿಯಾದಳು… ಶುಂಭ-ಶುಂಭನರನ್ನು ಕೊಂದು ದೇವಿ ಜಗ್ದರಕ್ಷಿಕೆ.. ಜಗನ್ಮಾತೆಯಾದಳು…
ಎಲ್ಲಾ ದುಷ್ಟರನ್ನು ಸಂಹಾರಿಸಿದ ದೇವಿ, ಲೋಕದ ಕಲ್ಯಾಣಕ್ಕಾಗಿ ಪಾರ್ವತಿಯಾಗಿ ಅವತಾರವನ್ನು ಪಡೆದು ಜಗತ್ಪಾಲಕನ ಅರ್ಧಾಂಗಿಯಾಗಿ ನಮ್ಮನ್ನು ಸದಾ ರಕ್ಷಿಸುತ್ತಿದ್ದಾಳೆ….
ಪರ್ವತ ರಾಜನ ಪುತ್ರಿಯಾಗಿ ಜನಿಸಿ ಪರಶಿವನ್ನು ಮದುವೆಯಾಗುವ ಮಹಾ ಪುಣ್ಯದ ಕಥೆಯೂ ಇದರಲ್ಲಿದೆ….
ಇಂತಹ ಪುಣ್ಯದ ದಿನಗಳಲ್ಲಿ ದಿನವೂ ಈ ಪುಸ್ತಕವನ್ನು ಪಠಿಸುತ್ತಾ ತಾಯಿ ಜಗದಾಂಬೆಯನ್ನು ಸ್ಮರಿಸುತ್ತಾ ಪುನೀತರಾಗುವ ಸದಾವಕಾಶ ನಮಗಿದೆ….
ತ್ರಿಮೂರ್ತಿಗಳೂ… ದೇವತೆಗಳೂ… ಮಹಾರ್ಷಿಗಳೂ… ಭಜಿಸಿದ ಜಗದಾಂಬೆಯನ್ನು ನಾವು ಭಜಿಸುವ….
ನಮೋ ಶ್ರೀ ದುರ್ಗ ದೇವಿಯೇ ನಮಃ
ಯಾ ದೇವಿ ಸರ್ವ ಭೂತೇಷು…
ಮಾತೃ ರೂಪೇಣ ಸಂಸ್ಥಿತಃ….

ಧನ್ಯವಾದಗಳು
ದೇವಿ ಶ್ರೀ ಪ್ರಸಾದ್

ಕನ್ನಡ · ತೀರ್ಥರಾಮ ವಳಲಂಬೆ · Uncategorized

‘ವಿಚಾರವಾದ ವಿಜ್ಞಾನ ಅಧ್ಯಾತ್ಮ ಮತ್ತು ದೇವರು’ – ತೀರ್ಥರಾಮ ವಳಲಂಬೆ

vichara adyatma.jpg

ತೀರ್ಥರಾಮ ವಳಲಂಬೆಯವರ “ವಿಚಾರವಾದ ವಿಜ್ಞಾನ ಅಧ್ಯಾತ್ಮ ಮತ್ತು ದೇವರು” ಪುಸ್ತಕ, ಆಧ್ಯಾತ್ಮ ಮತ್ತು ವಿಜ್ಞಾನವು ವಿಚಾರವಾದದ ಭೂಮಿಯಲ್ಲಿ ಒಂದಕ್ಕೊಂದು ವಿರುದ್ಧವಾಗಿ ಸಂಘರ್ಷಿಸಿ ಪ್ರಕ್ಷುಬ್ಧ ಸ್ಥಿತಿಯನ್ನು ಸೃಷ್ಟಿಸುವುದಕ್ಕಿಂತ , ಎರೆಡೂ ಒಂದಕ್ಕೊಂದು ಆಧಾರವಾಗಿ ಸಾಂಗತ್ಯ ಸಾಧಿಸಿ , ಸಾಮಾಜಿಕ ಪ್ರಗತಿಯನ್ನು ಬೆಂಬಲಿಸುವಂತಾಗಬೇಕೆನ್ನುವ ನಿರೀಕ್ಷೆಯನ್ನು ವಿಚಾರಾತ್ಮಕವಾಗಿ ವಿಶ್ಲೇಷಿಸಿದೆ. ನಾಗರಿಕತೆ, ಧರ್ಮ, ದೇಶ-ಭಾಷೆ-ಸಂಸ್ಕೃತಿ, ವಿಜ್ಞಾನಗಳ ವೈವಿಧ್ಯಮಯ ವಿಚಾರಗಳನ್ನು , ಹೇಗೆ ಆಧ್ಯಾತ್ಮ, ನಂಬಿಕೆಗಳೊಂದಿಗೆ ಸಮೀಕರಿಸಿಕೊಳ್ಳಬಹುದೆಂಬುದನ್ನು ಅನೇಕ ಘಟನೆಗಳನ್ನುದ್ಧರಿಸಿ ವಿವರಿಸಿದ್ದಾರೆ. ಆದರೆ ಇಲ್ಲಿನ ಅನೇಕ ಸಂಗತಿಗಳು ವಿಜ್ಞಾನವನ್ನು ಪ್ರಭಲವಾಗಿ ನಂಬುವ ಜನರ ಹುಬ್ಬೇರಿಸುವಂತಿದೆ, ಹಾಗೆಯೇ ಅಧ್ಯಾತ್ಮವನ್ನು ಪ್ರಭಲವಾಗಿ ನಂಬುವವರ ನಂಬಿಕೆಯನ್ನು ಮತ್ತಷ್ಟೂ ಧೃಢವಾಗಿಸುತ್ತದೆ. ಅಂದರೆ, ಇಲ್ಲಿ ಪ್ರಸ್ತುತಪಡಿಸುವ ವಿಚಾರಗಳು, ಧಾರ್ಮಿಕ ನಂಬಿಕೆ, ಅಧ್ಯಾತ್ಮ, ಯೋಗಿಗಳ ಪವಾಡಗಳ ಕಡೆ ಹೆಚ್ಚು ಒತ್ತುಕೊಟ್ಟು, ವಿಜ್ಞಾನ ವಿಷಯಗಳನ್ನು, ಅವುಗಳ ನಿಲುವುಗಳನ್ನು ಸ್ಪಷ್ಟವಾಗಿ ನಿರೂಪಿಸಿಲ್ಲ ಎಂಂಬುದು ನನ್ನ ಅನಿಸಿಕೆ. ಆದರೂ ಓದುಗನ ಚಿಂತನೆಯ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸುವಷ್ಟು ಇಲ್ಲಿನ ಲೇಖನಗಳು ಸಶಕ್ತವಾಗಿದೆ. ವಿಚಾರವಾದ ವಿಜ್ಞಾನ ಅಧ್ಯಾತ್ಮ ಮತ್ತು ದೇವರನ್ನು ಸಮೀಕರಿಸುವ ಲೇಖಕರ ಆಶಯ ಒಂದು ಉತ್ತಮ ಪ್ರಯತ್ನವಾಗಿ ಮೂಡಿಬಂದಿದೆ. ಭಾರತದ ವಿವಿಧ ಧರ್ಮಗಳು, ಧಾರ್ಮಿಕ ನಂಬಿಕೆಗಳು, ವಿಶ್ವದಲ್ಲಿ ಇನ್ನಿತರ ಧರ್ಮಗಳು, ಪ್ರಾಚೀನ ಕಾಲದಲ್ಲಿದ್ದಿರಬಹುದಾದ ವಿಚಾರವಾದಗಳು, ಆಧ್ಯಾತ್ಮವೂ ಹೇಗೆ ವಿಜ್ಞಾನದ ಒಂದು ಭಾಗವಾಗಿದೆ, ವಿಜ್ಞಾನವೂ ಹೇಗೆ ಆಧ್ಯಾತ್ಮದ ಸತ್ಫಲವನ್ನು ಪಡೆಯಬಹುದು ಎಂಬಂತ ವಿಚಾರಗಳು ಇಲ್ಲಿ ಚರ್ಚಿಸಲಾಗಿದೆ. ಇಂತಹ ಸಂಕ್ಲಿಷ್ಟ ವಿಷಯಗಳಿಗೆ ಅನೇಕ ಪುಸ್ತಕಗಳನ್ನು ಓದಿ ಅರ್ಥೈಸಿಕೊಳ್ಳಬೇಕಾದರು, ಪ್ರಾರಂಭಿಕ ಆಸಕ್ತರಿಗೆ ಪ್ರಸ್ತುತ ಪುಸ್ತಕ ಆ ಎಲ್ಲ ವಿಷಯಗಳ ಒಂದು ಸ್ಥೂಲ ಪರಿಚಯವನ್ನು ಒದಗಿಸುತ್ತದೆ.

Chandrashekar Bc

ಕನ್ನಡ · Uncategorized

‘ನಾಸ್ತಿಕ’ – ಪರಮೇಶ್ವರ ಹೆಗಡೆ

ದೇವರ ಹೆಸರಲ್ಲಿ ಆಗುತ್ತಿರುವ ಅನ್ಯಾಯ ಅಪಚಾರದ ಬಗ್ಗೆ ಚರ್ಚೆ ಉಂಟು.  ಆಸ್ತಿಕತೆ ಮತ್ತು ನಾಸ್ತಿಕತೆಯ ಮಧ್ಯೆ ಇರುವ ಸೇತುವೆಯನ್ನು ಲೇಖಕರು ಎರಡು ಪಾತ್ರಗಳ ಮೂಲಕ ತುಂಬಾ ಚೆನ್ನಾಗಿ ವಿವರಿಸಿದ್ದಾರೆ.

nastika.jpg

-Ramyaa Prakash