ಕನ್ನಡ · ರವಿ ಬೆಳಗೆರೆ · Uncategorized

‘ರಂಗವಿಲಾಸ ಬಂಗಲೆಯ ಕೊಲೆಗಳು’ – ರವಿ ಬೆಳಗೆರೆ

ಈ ಕಥೆಯ ಬಗ್ಗೆ ಅನೇಕರು ಈ ಗ್ರೂಪ್ ನಲ್ಲಿ ಬರೆದಿದ್ದಾರೆ.. ಆದರೆ ನಾನು ಈ ಪುಸ್ತಕ ಓದಿ ಏನಾದರೂ ಬರೆಯಬೇಕೆನಿಸಿತು.. ಹಾಗಾಗಿ ಬರೆಯುತ್ತಿದ್ದೇನೆ…
“ರಂಗವಿಲಾಸ ಬಂಗಲೆಯ ಕೊಲೆಗಳು”
ಅಬ್ಬಾ.. ಹೆಸರೇ ಭಯ ಹುಟ್ಟಿಸುವಂತಿದೆ.. ಒಂದು ಕಾಲದಲ್ಲಿ ಖ್ಯಾತ ನ್ಯಾಯವಾದಿ, 3 ತಲೆಮಾರು ಕುಳಿತು ತಿನ್ನುವಂತಹ ಆಸ್ತಿ ಸಂಪಾದಿಸಿದ್ದ, ಬೇಲೂರು ಶ್ರೀನಿವಾಸ ಅಯ್ಯಂಗಾರ್ ಮತ್ತು ಇತರೆ 5 ಜನರು ಹಾಗೂ ನಾಯಿಯ ಕೊಲೆಯಾಗಿದೆ(2 ಮಕ್ಕಳು ಸೇರಿ) … ಅದು ತಲೆ ಹೊಡೆದು, ಹಲ್ಲುಗಳು ಗಂಟಲಿಗೆ ಇಳಿಯುವ ಮಟ್ಟಕ್ಕೆ ಹೊಡೆದು…! 😱 😱

1956 ನೇ ಇಸವಿಗೆ ಅವು ಅತ್ಯಂತ ಕ್ರೂರ ಕೊಲೆಗಳು.. ಈ ಕೊಲೆಗಳು ದೇಶದಾದ್ಯಂತ ಸಂಚಲನ ಮೂಡಿಸಿತ್ತು.. ಒಟ್ಟು 14 ಜನರ ಸಾವಿನ ಸುತ್ತ ಸುತ್ತುವ ಈ ಘಟನೆಗಳು ಓದಿದರೇನೆ ಅರ್ಥ ಮಾಡಿಕೊಳ್ಳಲು ಸಾಧ್ಯ..
ಆ ಹಂತಕರು ಯಾರು? ಒಡವೆ ದುಡ್ಡಿಗಾಗಿ ಕೊಲೆಯಾಗಿದ್ದ? ಅಥವಾ ಇತರೆ ಕಾರಣ ಇದೆಯಾ? ಕೊಲೆಗಾರರು ಸಿಕ್ರ? ಬದುಕುಳಿದವರು ಏನಾದ್ರು? ಇದನ್ನೆಲ್ಲಾ ಓದಿಯೇ ಅರಿಯಬೇಕು…

ನಾನು ಓದಿರುವ ಕಾದಂಬರಿ, ಪತ್ತೇದಾರಿ ಕಥೆಗಳಲ್ಲೇ ಅತ್ಯಂತ ಕುತೂಹಲ ಹಾಗೂ ರೋಚಕತೆ ಇರುವುದು ಈ ಪುಸ್ತಕದಲ್ಲೆ.. ಅದು ನಡೆದದ್ದು ನಮ್ಮ ಬೆಂಗಳೂರಿನ ಹೃದಯ ಭಾಗದಲ್ಲಿ…! ಈಗಿನ ಸಿಂಡಿಕೇಟ್ ಬ್ಯಾಂಕ್ ಇರುವ ಜಾಗದಲ್ಲಿ..!! 😱
ಈ ಪುಸ್ತಕ ಓದಿ, ಬೆಂಗಳೂರಿನ ಹೃದಯ ಭಾಗವನ್ನು ಮತ್ತೆ ಮತ್ತೆ ನೋಡಬೇಕೆನಿಸಿದರೆ, ಅದು ನಿಮ್ಮ ತಪ್ಪಲ್ಲ.. ರವಿ ಬೆಳಗೆರೆಯವರು ಇಂತಹ ಬರವಣಿಗೆಯಲ್ಲಿ ತುಂಬಾ ಆಪ್ತರಾಗುತ್ತಾರೆ..

#ಕೊನೆ_ಮಾತು- “ಆಸ್ತಿ ಮಾಡಬೇಕು ನಿಜ, ಆದರೆ ನಮ್ಮ ಸಾವನ್ನು ಇತರರು ಬಯಸುವಷ್ಟು ಆಸ್ತಿ ಮಾಡಬಾರದು” ..

ಸುರೇಶ್ ಗೌಡ.ಎಮ್.ಬಿ

ನಿಮ್ಮ ಟಿಪ್ಪಣಿ ಬರೆಯಿರಿ